ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಏರ್‌ಫೋರ್ಟ್ ಟರ್ಮಿನಲ್‌ (2) 45ದಿನ ನಂತರ ಬಳಕೆಗೆ ಲಭ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 13: ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಬೃಹತ್ ಟರ್ಮಿನಲ್ 2 ಮುಂದಿನ ಒಂದೂವರೆ ತಿಂಗಳ ನಂತರ ಪ್ರಯಾಣಿಕರ ಬಳಕೆಗೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಎರಡು ಹಂತದಲ್ಲಿ ನಿರ್ಮಾಣವಾಗುತ್ತಿರುವ ಟರ್ಮಿನಲ್‌ 2 ಪೈಕಿ ಮೊದಲ ಹಂತ ಉದ್ಘಾಟನೆಗೊಂಡಿದೆ. ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಮರುದಿನದಿಂದಲೇ ಟರ್ಮಿನಲ್ 2 ಬಳಕೆಗೆ ಲಭ್ಯವಾಗಲಿದೆ ಎಂದು ಊಹಿಸಲಾಗಿತ್ತು. ಈ ಆಸೆ ನಿರಾಸೆಯಾಗಿದೆ.

ಮೋದಿ ಉದ್ಘಾಟಿಸಲಿರುವ ಬೆಂಗಳೂರಿನ 'ಗಾರ್ಡನ್ ಟರ್ಮಿನಲ್' ಬಗ್ಗೆ ನಿಮಗೆಷ್ಟು ಗೊತ್ತು? ಮೋದಿ ಉದ್ಘಾಟಿಸಲಿರುವ ಬೆಂಗಳೂರಿನ 'ಗಾರ್ಡನ್ ಟರ್ಮಿನಲ್' ಬಗ್ಗೆ ನಿಮಗೆಷ್ಟು ಗೊತ್ತು?

ಈ ಸಂಬಂಧ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮ್ಯಾರರ್ ಪ್ರತಿಕ್ರಿಯಿಸಿದ್ದಾರೆ. ವಾರ್ಷಿಕವಾಗಿ 25 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯ ಹೊಂದಿರುವ ಈ ಟರ್ಮಿನಲ್‌ 2ಅನ್ನು ಉಪಯೋಗಕ್ಕೆ ಇನ್ನೂ 30ರಿಂದ 45 ದಿನಗಳು ಬೇಕಾಗಬಹುದು ಎಂದು ತಿಳಿಸಿದ್ದಾರೆ.

Bengaluru Airport Terminal 2 will be available after 45 days

ಜನರು ಸದ್ಯ ಕಣ್ತುಂಬಿಕೊಳ್ಳಬಹುದಷ್ಟೆ

ಕೆಐಎ ಟರ್ಮಿನಲ್‌ನಲ್ಲಿ ಸೆಕ್ಯೂರಿಟಿ ಸ್ಪೀಪ್ ಮಾಡುವ ಕೆಲಸ ಬಾಕಿ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಾರ್ವಜನಿಕ ಬಳಕೆಗೆ ಟರ್ಮಿನಲ್‌ 2 ಮುಕ್ತವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಜನರು ಹೊಸ ಟರ್ಮಿನಲ್‌ ಬಳಕೆಗೆ ಕಾಯಬೇಕಿದ್ದು, ಸದ್ಯಕ್ಕೆ ಕಣ್ತುಂಬಿಕೊಳ್ಳಬಹುದಾಗಿದೆ.

ವಾರ್ಷಿಕವಾಗಿ ಒಟ್ಟು 2.5ಕೋಟಿ ಜನರನ್ನು ನಿರ್ವಹಿಸಬಹುದಾದ ಈ ಟರ್ಮಿನಲ್‌ ಅನ್ನು ಉದ್ಯಾನ ನಗರಿ ಎಂದು ಖ್ಯಾತವಾದ ಬೆಂಗಳೂರಿನ ಪ್ರತಿಬಿಂಬದಂತೆ ನಿರ್ಮಿಸಲಾಗಿದೆ. ಹಸಿರು ವಾಲ್‌ಗಳು, ವಿಶಾಲವಾದ ವಿನ್ಯಾಸ್, ವಿಶೇಷ ಲೈಟಿಂಗ್ಸ್, ನಿರ್ವಹಣೆಗೆ ಸುವ್ಯವಸ್ಥಿತೆಯನ್ನು ಒಳಗೊಂಡಿದೆ. ಆದರೆ ಸೆಕ್ಯೂರಿಟಿ ಸ್ಪೀಪ್ ಕೆಲಸವೊಂದು ಬಾಕಿ ಇದೆ. ಉಳಿದಂತೆ ಅತ್ಯಂತ ಸುಂದರವಾಗಿ ಇದನ್ನು ಸ್ಥಾಪಿಸಲಾಗಿದೆ.

ಎರಡು ಹಂತಗಳಲ್ಲಿ ಟರ್ಮಿನಲ್‌ 2 ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 13,000 ಕೋಟಿ ವೆಚ್ಚದಲ್ಲಿ ಟರ್ಮಿನಲ್‌ 2 ನಿರ್ಮಿಸಲಾಗಿದೆ. ಸರಿಸುಮಾರು 2.5 ಲಕ್ಷ ಚದರ ಮೀಟರ್‌ಗಳಷ್ಟು ವಿಶಾಲವಾಗಿದೆ. ಒಂದನೇ ಹಂತದ ಕಾರ್ಯ ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದೆ. ಎರಡನೇ ಹಂತದಲ್ಲಿ ಟರ್ಮಿನಲ್‌ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

Bengaluru Airport Terminal 2 will be available after 45 days

ಈ ಎರಡನೇ ಹಂತದ ಟರ್ಮಿನಲ್ ಸುಮಾರು 4.41 ಲಕ್ಷ ಚದರ ಮೀಟರ್‌ ನಷ್ಟು ವಿಶಾಲವಾಗಿದೆ. ಟರ್ಮಿನಲ್ ಆಕರ್ಷಕವಾಗಿ, ವಿನೂತನವಾಗಿ ಕಾಣುವಂತೆ ಮಾಡಲು ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್‌ಮೋರ್, ಓವಿಂಗ್ಸ್ ಮತ್ತು ಮೆರಿಲ್ ಸಂಸ್ಥೆಗಳು ಶ್ರಮಿಸಿವೆ.

English summary
Bengaluru International Airport Terminal 2 will be available after 30- 45 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X