ಬೆಳಗಾವಿಯ ಸಲೀಂ ಲಂಡೂರಿಗೆ ಒಂದು ದೊಡ್ಡ ಸಲಾಂ
ಬೆಳಗಾವಿ, ಅಕ್ಟೋಬರ್ 17: ಈಗಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಪೊಲೀಸರ ಕೆಲಸ ಸಲೀಸಾಗಿದೆ. ಅದನ್ನು ಮತ್ತಷ್ಟು ಸಲೀಸು ಮಾಡಿರುವವರು ಬೆಳಗಾವಿಯ ಯುವಕ ಸಲೀಂ ಲಂಡೂರ್ ಅವರು.
ಇತ್ತೀಚೆಗೆ ಅಪರಾಧ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಪೊಲೀಸರು ಮಾಡುವ ಮೊದಲ ಕೆಲಸವೆಂದರೆ ಮೊಬೈಲ್ ಟವರ್ ಬೆನ್ನುಹತ್ತುವುದು. ಅಪರಾಧ ನಡೆದ ಸ್ಥಳದಲ್ಲಿನ ಮೊಬೈಲ್ ಟವರಿನ ತರಂಗಗಳನ್ನು ಆಲಿಸುವ ಪೊಲೀಸರು ಕೊನೆಗೆ ನಿರ್ದಿಷ್ಟವಾಗಿ ಇಂತಹುದೇ ಮೊಬೈಲ್ ಆಸಾಮಿ (ಆತ ಮೊಬೈಲ್ ಬಳಸಿದ್ದರೆ!) ಕೃತ್ಯವೆಸಗಿದ್ದಾನೆ ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ.
ಆದರೆ ಇಲ್ಲೊಂದು ತೊಡಕು ಇದೆ. ಆ ಮೊಬೈಲ್ ಟವರಿನಲ್ಲಿ ಸಾವಿರಾರು ಮೊಬೈಲುಗಳು ಧ್ವನಿಗಳು ಹರಿದಾಡಿರುತ್ತವೆ. ಅದನ್ನೆಲ್ಲಾ ಗುಡ್ಡೆಹಾಕಿಕೊಂಡು ತಾಳೆ ಹಾಕುತ್ತಾ ಕೊನೆಗೆ ನಿರ್ದಿಷ್ಟ ಮೊಬೈಲ್ ಫೋನನ್ನು ಪತ್ತೆ ಹಚ್ಚುವುದು ಬೆಟ್ಟದಷ್ಟು ಕೆಲಸವೇ ಸರಿ. Exactly ಪೊಲೀಸರ ಈ ಕಷ್ಟವನ್ನು ಅರಿತೇ ಈ ಕಥಾನಕದ ನಾಯಕ ಸಲೀಂ ಲಂಡೂರ್ ಅವರು ಪೊಲೀಸರ ನೆರವಿಗೆ ಧಾವಿಸಿರುವುದು.
ಏನಪ್ಪಾ ಅಂದರೆ ಅಂತಹ ಸಾವಿರಾರು ಫೋನ್ ಕರೆಗಳ ಮಧ್ಯೆಯೂ ಕೆಲವೇ ಕ್ಷಣಗಳಲ್ಲಿ ಅಪರಾಧಿಯುವ ಬಳಸಿರುವ ಮೊಬೈಲ್ ಸಂಖ್ಯೆಯನ್ನು ಖಚಿತವಾಗಿ ಪತ್ತೆಹಚ್ಚುವಂತಹ ಸಾಧನ-ಸಲಕರಣೆಯನ್ನು ಸಲೀಂ ಲಂಡೂರ್ ಕಂಡುಹಿಡಿದ್ದಾರೆ.
37 ವರ್ಷದ ಸಲೀಂ ಲಂಡೂರ್ ಅವರ ಸಾಧನವನ್ನು ಮೆಚ್ಚಿ NIA, CBI ಮತ್ತು Karnataka, Gujarat, Bihar, West Bengal, Chhattisgarh ರಾಜ್ಯ ಪೊಲೀಸರು ಅಷ್ಟೇ ಅಲ್ಲದೆ Nigeria ಮತ್ತು Algeria ದೇಶಗಳ ಪೊಲೀಸರು ಬೆಳಗಾವಿಗೆ ಇವರ Prosoft e-Solutions ಕಂಪನಿಗೆ ಭೇಟಿ ನೀಡಿದ್ದಾರೆ.

ರಾತ್ರಿ ಆಟೋ ರಿಕ್ಷಾ ಓಡಿಸುತ್ತಾ ಶಿಕ್ಷಣ
ಅಂದಹಾಗೆ ನಮ್ಮೀ ಸಲೀಂ ಲಂಡೂರ್ ಗೆ ಹಣಕಾಸು ತೊಂದರೆಯಿಂದ ಕಾಲೇಜು ಶಿಕ್ಷಣ ಮುಂದುವರಿಸಲಾಗಲಿಲ್ಲ. ಆದರೆ ಮಾಹಿತಿ ತಂತ್ರಜ್ಞಾನದಲ್ಲಿ ತಮಗಿರುವ ಅಪಾರ ಆಸಕ್ತಿಯನ್ನು ತಣಿಸಲು ರಾತ್ರಿ ಕಾಲದಲ್ಲಿ ಆಟೋ ರಿಕ್ಷಾ ಓಡಿಸುತ್ತಾ, 1993ರಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಮುಂದುವರಿಸಿ, ಅಪರೂಪದ ಸಾಧನೆ ಮೆರೆದಿದ್ದಾರೆ.

call detail record analysis
2000ನೇ ಇಸ್ವಿಯಲ್ಲಿ 1,500 ರೂಪಾಯಿ ನೀಡಿ ಬಾಡಿಗೆಗೆ ಪಡೆದ ಕಂಪ್ಯೂಟರಿನಲ್ಲಿಯೇ ಸಲೀಂ ಲಂಡೂರ್ ಈ ಸಾಧನೆ ಮಾಡಿರುವುದು. ಇವರು ಕಂಡುಹಿಡಿದಿರುವ ಸಾಧನದಿಂದ ಪೊಲೀಸರಿಗೆ ಸಲೀಸಾಗಿ call detail record analysis ಮಾಡುವುದು ಸಾಧ್ಯವಾಗಿದೆ.

Prosoft e-Solutions ಸದ್ಯದಲ್ಲೇ ಬೆಂಗಳೂರಿನಲ್ಲಿ
ಸಲೀಂ ಲಂಡೂರ್ ಅವರ Prosoft e-Solutions ಕಂಪನಿಯಲ್ಲಿ ಇಂದು 25 ಮಂದಿ ಉದ್ಯೋಗಿಗಳು ಇದ್ದಾರೆ. ಮಧ್ಯಪ್ರದೇಶದಲ್ಲಿಯೂ ಒಂದು ಶಾಖೆ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ಸದ್ಯದಲ್ಲೇ ಮತ್ತೊಂದು ಶಾಖೆ ತೆರೆಯಲು ಸಿದ್ಧತೆ ನಡೆಸಿದ್ದಾರೆ.

Nasscom's Data Security Council of India
ಅಷ್ಟೇ ಅಲ್ಲ. ಸಲೀಂ ಲಂಡೂರ್ ಅವರ ಈ Prosoft e-Solutions ಕಂಪನಿಯ ಜತೆ Nasscom's Data Security Council of India ನಿಕಟ ಸಂಪರ್ಕ ಹೊಂದಿದ್ದು, ನೂರಾರು ತನಿಖಾಧಿಕಾರಿಗಳನ್ನು ಇಲ್ಲಿಗೆ ತರಬೇತಿಗಾಗಿ ಕಳುಹಿಸುತ್ತಿದೆ.

Prosoft ಕಂಪನಿಯ C5 CDR analyzer
Prosoft ಕಂಪನಿಯ C5 CDR analyzer ಸಾಧನವು 4.0 versionನಲ್ಲಿದ್ದು terabyteಗಳಷ್ಟು ಅಗಾಧ ಮಾಹಿತಿಯನ್ನು, ಕೋಟ್ಯಂತರ ದಾಖಲೆಗಳನ್ನು low-end serverಗಳಲ್ಲಿಯೂ ಕ್ಷಣಾರ್ಧದಲ್ಲಿ ಮಂಥನ ಮಾಡಿ, ಅಗತ್ಯ ಮಾಹಿತಿಯನ್ನು ಹೆಕ್ಕಿ ತೆಗೆಯಬಹುದಾಗಿದೆ.

ರಾಘವೇಂದ್ರ ಔರಾದ್ಕರ್ ಬೆಳಗಾವಿಯಲ್ಲಿ ಕಮೀಷನರ್ ಆಗಿದ್ದಾಗ
ಬೆಂಗಳೂರಿನಲ್ಲಿ ಈಗ ಪೊಲೀಸ್ ಕಮೀಷನರ್ ಆಗಿರುವ ರಾಘವೇಂದ್ರ ಔರಾದ್ಕರ್ ಅವರು ಬೆಳಗಾವಿಯಲ್ಲಿ ಪೊಲೀಸ್ ಕಮೀಷನರ್ ಆಗಿದ್ದಾಗ 2009ರಲ್ಲಿ ನಡೆದ ಚಿನ್ನದ ವ್ಯಾಪಾರಿಯ ಹತ್ಯೆ ಪ್ರಕರಣದಲ್ಲಿ ಇದೇ ಸಲೀಂ ಲಂಡೂರ್ ಅವರ ಸಾಧನವನ್ನು ಬಳಸಿ, ಹಂತಕರನ್ನು ಹೆಡೆಮುರಿಗೆ ಕಟ್ಟಿತಂದಿದ್ದರು. (ಚಿತ್ರ- prokerala.com)

Prosoft e-Solutions C5 CDR analyzer
ಅದಕ್ಕೂ ಮುನ್ನ, 2008ರಲ್ಲಿ ಹುಬ್ಬಳಿ ಕೋರ್ಟ್ ಬಳಿ ನಡೆದ ಬಾಂಬಸ್ ಸ್ಫೋಟ ಪ್ರಕರಣವನ್ನೂ ಯಶಸ್ವಿಯಾಗಿ ಭೇದಿಸಿದ್ದು ಇದೇ ಸಲೀಂ ಲಂಡೂರ್. Bangalore Forensic Science Laboratory ನಿರ್ದೇಶಕ, ಹಿರಿಯ ಐಪಿಎಸ್ ಅಧಿಕಾರಿ ಬಿ ದಯಾನಂದ್ ಅವರು ಕಾಲಕಾಲಕ್ಕೆ ಸಲೀಂಗೆ ಪ್ರೋತ್ಸಾಹ ನೆರವು ನೀಡುತ್ತಿದ್ದಾರೆ. ಅಂದಹಾಗೆ C5 CDR analyzer ಅನ್ನು ಅಭಿವೃದ್ಧಿಪಡಿಸುವಲ್ಲಿ ದಯಾನಂದ್ ಅವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.












Click it and Unblock the Notifications