ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ಬ್ಯಾಂಕಿಂಗ್ ಮಾಡುವವರು ಬಚಾವ್!

|
Google Oneindia Kannada News

ಬೆಂಗಳೂರು, ಫೆ.11 : ವೇತನ ಪರಿಷ್ಕರಣೆಗೆ ಒತ್ತಾಯಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳು ನಡೆಸುತ್ತಿರುವ ದೇಶವ್ಯಾಪಿ ಮುಷ್ಕರದ ಬಿಸಿ ಕರ್ನಾಟಕದಲ್ಲೂ ಗ್ರಾಹಕರಿಗೆ ತಟ್ಟಿದ್ದು, ಸೋಮವಾರ ಎಲ್ಲ ಬ್ಯಾಂಕ್‌ ಶಾಖೆಗಳಲ್ಲಿಯೂ ವ್ಯವಹಾರಗಳು ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು.

ಮಂಗಳವಾರವೂ ಬ್ಯಾಂಕ್ ಮುಷ್ಕರ ಮುಂದುವರೆಯಲಿದ್ದು, ಜನರಿಗೆ ಮತ್ತಷ್ಟು ತೊಂದರೆ ಆಗಲಿದೆ. ಸತತವಾಗಿ ಮೂರು ದಿನ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸದಿರುವುದರಿಂದ ಹಲವಾರು ಎಟಿಎಂಗಳಲ್ಲಿ ಹಣವಿಲ್ಲದೇ, ಜನರು ಎಟಿಎಂ ಹುಡುಕಿಕೊಂಡು ಅಲೆದಾಡುವಂತಾಯಿತು. [ಫೆ.10,11ರಂದು ಬ್ಯಾಂಕ್ ಮುಷ್ಕರ]

Bank strike

ವಾರದ ಆರಂಭದಲ್ಲಿಯೇ ಬ್ಯಾಂಕ್‌ಗಳು ಎಲ್ಲ ರೀತಿಯ ಹಣಕಾಸು ವ್ಯವಹಾರಗಳನ್ನು ಸ್ಥಗಿತಗೊಳಿಸಿ ಮಷ್ಕರ ನಡೆಸುತ್ತಿರುವುದರಿಂದ ಗ್ರಾಹಕರಿಗೆ ತೊಂದರೆಗೆ ಸಿಲುಕಿದ್ದಾರೆ. ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೆ ಗ್ರಾಹಕರು ಬ್ಯಾಂಕ್‌ಗಳಿಗೆ ಬಂದು ವಾಪಸ್‌ ಹೋಗಿರುವ ಪ್ರಕರಣಗಳ ಬಗ್ಗೆಯೂ ವರದಿಯಾಗಿದೆ.

ಕರ್ನಾಟಕ ಬ್ಯಾಂಕ್‌, ಐಎನ್‌ ಜಿ ವೈಶ್ಯ ಬ್ಯಾಂಕ್‌ ಸೇರಿದಂತೆ ಖಾಸಗಿ ಸ್ವಾಮ್ಯದ ಬ್ಯಾಂಕ್ ಗಳು ಸಹ ವ್ಯವಹಾರ ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಆದರೆ, ನಗರ ಪ್ರದೇಶಗಳಲ್ಲಿ ಆನ್‌ಲೈನ್‌ ಮೂಲಕ ವ್ಯವಹಾರ ನಡೆಸುವ ಗ್ರಾಹಕರಿಗೆ ಮುಷ್ಕರದಿಂದ ಹೆಚ್ಚಿನ ತೊಂದರೆ ಆಗಿಲ್ಲ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಣದ ಕೊರತೆ ಇಲ್ಲ : ಹಲವಾರು ರಾಷ್ಟ್ರೀಕೃತ ಹಾಗೂ ಕೆಲವು ಖಾಸಗಿ ಬ್ಯಾಂಕ್‌ಗಳು ಎಟಿಎಂಗಳಿಗೆ ಹಣ ತುಂಬಿಸುವ ಪ್ರಕ್ರಿಯೆಯನ್ನ ಹೊರ ಗುತ್ತಿಗೆ ನೀಡಿವೆ. ಆದ್ದರಿಂದ ಎಟಿಎಂಗಳಿಗೆ ಹಣ ತುಂಬಿಸಲಾಗುತ್ತದೆ. ಆದರೆ, ಬ್ಯಾಂಕ್‌ ಸಿಬ್ಬಂದಿಯೇ ಎಟಿಎಂಗೆ ಹಣ ತುಂಬಿಸುವ ಕಡೆ ತೊಂದರೆ ಯಾಗಿದೆ.

ಎರಡು ದಿನದ ಮುಷ್ಕರದ ಹಿನ್ನಲೆಯಲ್ಲಿ ಬ್ಯಾಂಕ್‌ಗಳ ಸಂಯುಕ್ತ ಒಕ್ಕೂಟದ ನೇತೃತ್ವದಲ್ಲಿ ಸಿಬ್ಬಂದಿ ಸೋಮವಾರ ಬೆಂಗಳೂರಿನ ಮೈಸೂರು ಬ್ಯಾಂಕ್‌ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಂಗಳವಾರ ಕೆನರಾ ಬ್ಯಾಂಕ್‌ನ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

English summary
Banking services in public sector banks and some private banks across the Karnataka were hit on Monday, as the officers and employees started their two-day all-India strike against banking reforms and demanding wage revision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X