Get Updates
Get notified of breaking news, exclusive insights, and must-see stories!

Government Employee: ಸರ್ಕಾರಿ ನೌಕರರಿಗೆ ಬ್ಯಾಂಕ್ ಆಫ್‌ ಬರೋಡ ವಿಶೇಷ ಕೊಡುಗೆ, ವಿವರ

ಬೆಂಗಳೂರು, ಮಾರ್ಚ್‌ 17: ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ರಾಜ್ಯದ ಸರ್ಕಾರಿ ನೌಕರರಿಗೆ 1 ಕೋಟಿ ರೂ.ಗಳ ಅಪಘಾತ ವಿಮೆಯನ್ನು ಬ್ಯಾಂಕ್‌ಗಳ ಸಹಯೋಗದೊಂದಿಗೆ ಜಾರಿಗೊಳಿಸುತ್ತಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಎಲ್ಲಾ ಸರ್ಕಾರಿ ನೌಕರರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಬಜೆಟ್ ಅಧಿವೇಶನದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸರ್ಕಾರಿ ವೇತನ ಪಡೆಯುವ ನೌಕರರು/ ಉದ್ಯೋಗಿಗಳಿಗೆ ವಿವಿಧ ಬ್ಯಾಂಕುಗಳು ವಿವಿಧ ಕೊಡುಗೆ ನೀಡುತ್ತಿವೆ. ಬ್ಯಾಂಕ್ ಆಫ್ ಬರೋಡ ಕೊಡುಗೆಯನ್ನು ಘೋಷಣೆ ಮಾಡಿದೆ. ಸರ್ಕಾರಿ ನೌಕರರ ವೇತನ ಖಾತೆಯ ವೈಶಿಷ್ಟ್ಯಗಳು ಎಂದು ಬ್ಯಾಂಕ್ ಪ್ರಕಟಣೆ ಮೂಲಕ ಈ ಕುರಿತು ಮಾಹಿತಿಯನ್ನು ನೀಡಿದೆ.

Bank Of Baroda Offers For Government Employees

ಖಾತೆಯ ಮುಖ್ಯ ವೈಶಿಷ್ಟ್ಯಗಳು

* ಶೂನ್ಯ ಮೊತ್ತದಲ್ಲಿ ಖಾತೆ
* ಗೃಹಸಾಲ, ವಾಹನ ಸಾಲ, ಶಿಕ್ಷಣ ಸಾಲ, ಅಡಮಾನ ಸಾಲ ಮತ್ತು ವೈಯಕ್ತಿಕ ಸಾಲದ ಮೇಲೆ ಶೇ 100 ಸಂಸ್ಕರಣಾ ಶುಲ್ಕ ಮನ್ನಾ
* ಗೃಹ ಸಾಲವನ್ನು ಪಡೆದ ಉದ್ಯೋಗಿಗಳಿಗೆ ವಾಹನ ಸಾಲದ ಮೇಲೆ ಅನ್ವಯವಾಗುವ ಬಡ್ಡಿಯ ಮೇಲೆ 0.25 ಬಡ್ಡಿಯ ರಿಯಾಯಿತಿ
* ಗಿಫ್ಟ್ / ಟ್ರಾವೆಲ್ ಕಾರ್ಡ್‌ಗಳ ಮೇಲೆ ಶೇ 75 ಶುಲ್ಕ ರಿಯಾಯಿತಿ
* ನಿರ್ದಿಷ್ಟ ಕೋರಿಕೆಯ ಮೇಲೆ ಸ್ಟೀಪ್ ಸೌಲಭ್ಯವಿದೆ.

ಓವರ್ ಡ್ರಾಫ್ಟ್ (ಓ.ಡಿ) ಸೌಲಭ್ಯ: ವೇತನ ಹಾಗೂ ಪಿಂಚಣಿ ಗರಿಷ್ಟ ಮೊತ್ತರೂ. 3 ಲಕ್ಷದ ತನಕ ಕ್ರೆಡಿಟ್ ಆದ ತಕ್ಷಣವೇ ದೊರೆಯುತ್ತದೆ.

* ಆಕರ್ಷಕ ಬಡ್ಡಿಯೊಂದಿಗೆ ಅನುಕೂಲವಾದ ಕಾರ್ಪೊರೇಟ್ ವೈಯಕ್ತಿಕ ಸಾಲ
* ಎಂಇನ್ವೆಸ್ಟ್ : ಮೊಬೈಲ್ ಆಪ್ ಮೂಲಕ ಆನ್‌ಲೈನ್ ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಸೌಲಭ್ಯ
* ಮೊಬೈಲ್ / ಇಂಟರ್‌ನೆಟ್ ಬ್ಯಾಂಕಿಂಗ್‌ ಮೂಲಕ ಆನ್‌ಲೈನ್‌ನಲ್ಲಿ ಸ್ಥಿರ ಠೇವಣಿ ತೆರೆಯುವ ಸೌಲಭ್ಯ
* ಎಟಿಎಂನಲ್ಲಿ ಕಾರ್ಡ್ ರಹಿತ ಹಣ ಪಡೆಯುವ ಸೌಲಭ್ಯ
* ಲಾಕರ್ ಬಾಡಿಗೆಯಲ್ಲಿ ಶೇ 20ರಷ್ಟು ರಿಯಾಯಿತಿ.

ಉಚಿತ ಸೇವೆಗಳು

* bob world ಮೊಬೈಲ್ ಬ್ಯಾಂಕಿಂಗ್‌ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್‌
* ಉಚಿತ ಎಸ್‌ಎಂಎಸ್ ಸೇವೆಗಳು/ ಎನ್.ಇ.ಎಫ್.ಟಿ/ ಆರ್.ಟಿ.ಜಿ.ಎಸ್ ವರ್ಗಾವಣೆ
* ಭೀಮ ಯುಪಿಐ ವರ್ಗಾವಣೆಗಳು
* ಡೆಬಿಟ್ ಕಾರ್ಡ್ ಜೀವನ ಪರ್ಯಂತ ಶುಲ್ಕವಿಲ್ಲದೆ ಉಚಿತ
* ಕ್ರೆಡಿಟ್ ಕಾರ್ಡ್ ಜೀವನ ಪರ್ಯಂತ ಶುಲ್ಕವಿಲ್ಲದೆ ಉಚಿತ
* ಬಿಓಬಿ ಎಟಿಎಂಗಳಲ್ಲಿ ಅಪರಿಮಿತ ವರ್ಗಾವಣೆ
* ಪ್ರತಿ ವರ್ಷಕ್ಕೆ 150 ಅನಿಯಮಿತ ಚೆಕ್ ಪ್ರತಿಗಳು
* ಆರು ಡಿಮ್ಯಾಂಡ್ ಡ್ರಾಫ್ಟ್/ ಬ್ಯಾಂಕರ್ ಚೆಕ್ ಗರಿಷ್ಟ (ರೂ. 5 ಲಕ್ಷದವರೆಗೆ)

ಉಚಿತ ವೈಯಕ್ತಿಕ ಅಪಘಾತ ವಿಮೆ ಯೋಜನೆಯ ವಿವರಗಳು

* ಗುಂಪು ವೈಯಕ್ತಿಕ ಅಪಘಾತ ದುರಣ ವಿಮೆ (ಪಿಎಐ) ರೂ. 40. ಲಕ್ಷದವರೆಗೆ (ನಿಯಮಗಳು ಅನ್ವಯ)
* ಶಾಶ್ವತ ಅಂಗವೈಕಲ್ಯದ ವಿಮೆ (ಟಿಡಿಟಿ) ರೂ. 40 ಲಕ್ಷದವರೆಗೆ (ನಿಯಮ ಅನ್ವಯ)
* ಶಾಶ್ವತ ಭಾಗಶಃ ಅಂಗ ವೈಕಲ್ಯ ವಿಮೆ (ಪಿಪಿಡಿ) ರೂ. 20 ಲಕ್ಷದವರೆಗೆ (ನಿಯಮ ಅನ್ವಯ)
* ವಾಯು ಅಪಘಾತ ವಿಮೆ ರೂ.10 ಲಕ್ಷದವರೆಗೆ (ನಿಯಮ ಅನ್ವಯ)
* ಅಪಘಾತ ವಿಮೆ ರಕ್ಷಣೆಯು ನಿವೃತ್ತ ಸಿಬ್ಬಂದಿಗಳಿಗೂ ವಿಸ್ತರಿಸುತ್ತದೆ
* ಮೊಬೈಲ್ ಆಪ್ ಮೂಲಕ ಮ್ಯುಚುವಲ್ ಫಂಡ್‌ ಅನ್ನು ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುವ ಸೌಲಭ್ಯ
* ಆನ್‌ಲೈನ್‌ನಲ್ಲಿ ಮೊಬೈಲ್/ ಇಂಟರ್‌ ನೆಟ್ ಬ್ಯಾಂಕಿಂಗ್ ಮೂಲಕ ಸ್ಥಿರ ಠೇವಣಿ ತೆರೆಯುವ ಸೌಲಭ್ಯ
* ಉಚಿತ ಕ್ರೆಡಿಟ್ ಕಾರ್ಡ್‌
* 50 ಲಕ್ಷದವರೆಗಿನ ಪೂರಕ ವಿಮಾನ ಅಪಘಾತ ವಿಮೆ ರೂ. 10 ರವರೆಗಿನ ಇತರ ಅಪಘಾತ ವಿಮಾ ರಕ್ಷಣೆ

ಸ್ಟಾರ್ ಹೆಲ್ತ್ ಇನ್ಸೂರೆನ್ಸ್ / ಮ್ಯಾಕ್ಸ್ ಭೂಪ / ಚೋಲಮಂಡಲಮ್ (ಚಾನೆಲ್ ಪಾರ್ಟನರ್ಸ್‌) ಇವರಿಂದ ಆರೋಗ್ಯ ವಿಮೆಯ ಪಾಲಿಸಿಯನ್ನು ಕಾರ್ಪೊರೇಟ್ ಮಟ್ಟದಲ್ಲಿ ರಿಯಾಯಿತಿಗಳೊಂದಿಗೆ ಪಡೆಯಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+