ಬೀಳಗಿ ಮಾಜಿ ಶಾಸಕ ಎಸ್ಎಸ್ ಪಾಟೀಲ್ ನಿಧನ
ಬಾಗಲಕೋಟೆ, ಜುಲೈ 9: ಬೀಳಗಿ ಮಾಜಿ ಶಾಸಕ ಎಸ್ಎಸ್ ಪಾಟೀಲ್ ಇಂದು ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 89 ನೇ ಜನ್ಮ ದಿನದಂದೇ ಅಸುನೀಗಿದ್ದಾರೆ.
9 ಜುಲೈ 1928ರಲ್ಲಿ ಸಿದ್ಧನಗೌಡ ಸೋಮನಗೌಡ ಪಾಟೀಲ್ ಜನಿಸಿದ್ದರು. 1978 ಮತ್ತು 1983ರಲ್ಲಿ ಬೀಳಗಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದರು. ನಂತರದ ದಿನಗಳಲ್ಲಿ ಅವರು ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದರು.

ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದು, ಇಂದು ಸಂಜೆ 5 ಗಂಟೆಗೆ ಬೀಳಗಿಯಲ್ಲಿ ಎಸ್ಎಸ್ ಪಾಟೀಲರ ಅಂತ್ಯಕ್ರಿಯೆ ನಡೆಯಲಿದೆ.












Click it and Unblock the Notifications