B Khata: ಬಿ -ಖಾತಾ ಬಿಗ್‌ ಅಪ್ಡೇಟ್ಸ್‌: ಖಾತಾಗೆ ಈ ದಾಖಲೆಗಳು ಕಡ್ಡಾಯ!

ರಾಜ್ಯದ ಎಲ್ಲಾ ಅಕ್ರಮ ಬಡಾವಣೆಗಳು ಹಾಗೂ ಅನಧಿಕೃತ ಆಸ್ತಿಗಳಿಗೆ ಮುಕ್ತಿ ಕಾಣಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಬಿ ಖಾತಾ ಅಭಿಯಾನ ಹಮ್ಮಿಕೊಳ್ಳತ್ತಿರುವುದಾಗಿ ಸರ್ಕಾರ ಹೇಳಿದೆ. ಈ ರೀತಿ ಬಿ ಖಾತಾ ಪಡೆಯುವುದಕ್ಕೆ ಯಾವೆಲ್ಲ ದಾಖಲೆಗಳು ಬೇಕು ಎನ್ನುವ ಮಾಹಿತಿಯನ್ನು ರಾಜ್ಯ ಸರ್ಕಾರವು ಮಂಗಳವಾರ ಹಂಚಿಕೊಂಡಿದೆ. ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಧಿಕೃತ, ರೆವಿನ್ಯೂ ಹಾಗೂ ಬಿ -ಖಾತಾ ಮತ್ತು ಎ - ಖಾತಾಗೆ ಸಂಬಂಧಿಸಿದಂತೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಮಂಗಳವಾರ ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ರಾಜ್ಯದಲ್ಲಿ ಇನ್ನುಂದೆ ಅನಧಿಕೃತ ಬಡಾವಣೆಗಳಿಗೆ ಅವಕಾಶವಿಲ್ಲ. ಕಾಂಗ್ರೆಸ್ ಸರ್ಕಾರದಿ೦ದ ಬಿ-ಖಾತಾ ಅಭಿಯಾನ ಶುರು ಎಂದು ಸರ್ಕಾರ ಹೇಳಿದೆ. ಇನ್ನು ಇದೇ ಸಂದರ್ಭದಲ್ಲಿ ಬಿ ಖಾತಾ ಪಡೆದುಕೊಳ್ಳಬೇಕಾದರೆ ದುಪ್ಪಟ್ಟು ದಂಡ ಪಾವತಿ ಮಾಡಿ ಅಂತಲೂ ಸೂಚನೆ ನೀಡಲಾಗಿದೆ. ರಾಜ್ಯದಾದ್ಯಂತ ಸಾವಿರಾರು ಆಸ್ತಿಗಳಿಗೆ ಯಾವುದೇ ಖಾತಾ ಇಲ್ಲ. ಇದಕ್ಕೆ ಮುಖ್ಯ ಕಾರಣ ರಾಜ್ಯದಲ್ಲಿ ಹಲವು ಅನಧಿಕೃತ ಬಡಾವಣೆಗಳು ಇವೆ. ಅಂದರೆ ಈ ರೀತಿ ಇರುವ ಬಡಾವಣೆಗಳ ನಿರ್ಮಾಣದ ಸಂದರ್ಭದಲ್ಲಿ ಆಯಾ ಸ್ಥಳೀಯ ಸಂಸ್ಥೆಗಳಿಂದ ಯಾವುದೇ ಅನುಮೋದನೆಯನ್ನು ಪಡೆದುಕೊಂಡಿಲ್ಲ. ಅಲ್ಲದೆ ಸರ್ಕಾರದ ನಿಯಮ ಹಾಗೂ ನಕ್ಷೆ ಯೋಜನೆಗಳು ಸೇರಿದಂತೆ ಹಲವು ನಿಯಮಗಳನ್ನು ಪಾಲನೆ ಮಾಡಿಲ್ಲ.

B Khata Big Updates These Documents are Mandatory For Khata

ಈಚೆಗೆ ರಾಜ್ಯ ಸರ್ಕಾರವು ಇ - ಖಾತಾ ಕಡ್ಡಾಯ ಮಾಡಿದ ಮೇಲೆ ಈ ರೀತಿ ಯಾವುದೇ ಖಾತಾ ಇಲ್ಲದೆ ಇರುವವರು ಖಾತಾ ವ್ಯಾಪ್ತಿಯಿಂದ ಹೊರಗುಳಿದಿದ್ದರು. ಅಲ್ಲದೆ ಇವರಿಂದ ಆಸ್ತಿ ತೆರಿಗೆ ಸಹ ಸಂಗ್ರಹವಾಗದೆ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿತ್ತು. ಹೀಗಾಗಿ, ಈ ರೀತಿ ಬಿ - ಖಾತಾ ಪಡೆದುಕೊಳ್ಳುವುದಕ್ಕೆ ಮೂರು ತಿಂಗಳುಗಳ ಕಾಲಾವಕಾಶವನ್ನು ರಾಜ್ಯ ಸರ್ಕಾರ ನೀಡಿದೆ.

ಬಿ-ಖಾತಾ ಪಡೆಯಲು ಬೇಕಾಗುವ ದಾಖಲೆಗಳ ವಿವರ ಇಲ್ಲಿದೆ

* ಸ್ವತ್ತಿನೊಂದಿಗೆ ಮಾಲೀಕರ ಫೋಟೋ

* ಆಧಾರ್ ಕಾರ್ಡ್

* ಮಾಲೀಕರ ಪಾಸ್‌ಪೋರ್ಟ್ ಅಳತೆಯ ಫೋಟೋ

* ಕೈ ಬರಹದ ನಮೂನೆ -3 ಪ್ರತಿ

* ಇ.ಸಿ.ಪ್ರತಿ

* 2015-16ರಿಂದ ಚಾಲ್ತಿ ಅಥವಾ ಪ್ರಸಕ್ತ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಿರುವ ಎಸ್‌ಎಎಸ್ ಫಾರಂ ಮತ್ತು ಚಲನ್ ಸಲ್ಲಿಸಬೇಕು.

* ಭೂ ಪರಿವರ್ತನೆ ಆದೇಶ ಪ್ರತಿ

* ಹಕ್ಕುಪತ್ರ - ನಿವೇಶನ ಹಂಚಿಕೆ ಪ್ರತಿ

* ನೀರಿನ ತೆರಿಗೆ ಪಾವತಿ ಚಲನ್

* ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪ್ರತಿ

* ಗ್ರಾಮ ಠಾಣಾ ವ್ಯಾಪ್ತಿಗೆ ಒಳಪಟ್ಟಿದ್ದರೆ ದಿಶಾಂಕ್ ಆ್ಯಪ್ ಪ್ರತಿ

* ವಿದ್ಯುತ್ ಬಿಲ್‌ನ ಪ್ರತಿ

ಎರಡು ಪಟ್ಟು ದಂಡ ಪಾವತಿ: ಇನ್ನು ಈ ರೀತಿ ಯಾವುದೇ ಖಾತಾ ಇಲ್ಲದ ಸಾವಿರಾರು ಆಸ್ತಿಗಳಿಗೆ ಇದೀಗ ಬಿ - ಖಾತಾ ನೀಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದರು. ಆಸ್ತಿ ಮಾಲೀಕರಿಗೆ ದುಪ್ಪಟ್ಟು ಟ್ಯಾಕ್ಸ್‌ ಕಟ್ಟುವುದಕ್ಕೆ ಸೂಚನೆ ನೀಡಲಾಗಿದೆ. ಯಾಕೆಂದರೆ ಈ ಆಸ್ತಿ ಮಾಲೀಕರು ಇಲ್ಲಿಯ ವರೆಗೆ ಯಾವುದೇ ಆಸ್ತಿ ತೆರಿಗೆಯನ್ನು ಪಾವತಿ ಮಾಡಿಲ್ಲ.

ಒಂದು ಬಾರಿ ಮಾತ್ರ ಅವಕಾಶ: ಇನ್ನು ಈಗಾಗಲೇ ಇರುವ ಅನಧಿಕೃತ ಬಡಾವಣೆಗಳಿಗೆ ಮಾತ್ರ ಇದೀಗ ಬಿ - ಖಾತಾ ಸೌಲಭ್ಯ ಸಿಗಲಿದೆ. ಅಲ್ಲದೆ ಬಿ - ಖಾತಾ ಸೌಲಭ್ಯವನ್ನು ಒಂದು ಬಾರಿ ಮಾತ್ರ ನೀಡಲಾಗುವುದು ಎಂದೂ ಸಹ ಕರ್ನಾಟಕ ಸರ್ಕಾರ ಹೇಳಿದೆ. ಹೀಗಾಗಿ, ಬಿ - ಖಾತಾಗೆ ಬೇಡಿಕೆ ಹೆಚ್ಚಾಗಿ ಇದ್ದು. ಇದಕ್ಕೆ ಮೂರು ತಿಂಗಳುಗಳ ಕಾಲಾವಕಾಶವನ್ನು ಸರ್ಕಾರ ನೀಡಿದೆ. ಇದಾದ ಮೇಲೆ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಬಿ - ಖಾತಾ ನೀಡುವುದಿಲ್ಲ ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+