Get Updates
Get notified of breaking news, exclusive insights, and must-see stories!

ಭರ್ಜರಿ ಗುಡ್‌ ನ್ಯೂಸ್:‌ ರಾಜ್ಯದ ವಿದ್ಯಾರ್ಥಿನಿಯರಿಗೆ ₹30,000 ವಿದ್ಯಾರ್ಥಿವೇತನ!

ಬೆಂಗಳೂರು, ಸೆಪ್ಟೆಂಬರ್ 19: ರಾಜ್ಯದ ವಿದ್ಯಾರ್ಥಿನಿಯರಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಗಲಿದೆ. ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಅಜೀಂ ಪ್ರೇಂಜಿ ಫೌಂಡೇಶನ್‍ನ ಸಹಭಾಗಿತ್ವದಲ್ಲಿ "ದೀಪಿಕಾ" ವಿದ್ಯಾರ್ಥಿವೇತನವನ್ನು ಸ್ಥಾಪಿಸುವ ಮೂಲಕ ರಾಜ್ಯದ ಉನ್ನತ ಶಿಕ್ಷಣದ ವಿದ್ಯಾರ್ಥಿನಿಯರಿಗಾಗಿ ಹೊಸ ದಿಗಂತವನ್ನು ತೆರೆದಿದೆ. 2025-26ನೇ ಸಾಲಿನಿಂದ ಈ ಆರ್ಥಿಕ ನೆರವು ರಾಜ್ಯದ ವಿದ್ಯಾರ್ಥಿನಿಯರ ಶೈಕ್ಷಣಿಕ ಪಥವನ್ನು ಬೆಳಗಲಿದೆ.

ಅಜೀಂ ಪ್ರೇಂಜಿ ಫೌಂಡೇಶನ್ ರಾಷ್ಟ್ರಾದ್ಯಂತ 18 ರಾಜ್ಯಗಳು ಮತ್ತು 01 ಕೇಂದ್ರಾಡಳಿತ ಪ್ರದೇಶದಲ್ಲಿ ವಿದ್ಯಾರ್ಥಿನಿಯರಿಗಾಗಿ ಉನ್ನತ ಶಿಕ್ಷಣ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, 2025-26ನೇ ಸಾಲಿನಲ್ಲಿ ಒಟ್ಟು 2,50,000 ವಿದ್ಯಾರ್ಥಿವೇತನಗಳನ್ನು ನೀಡಲಿದೆ. ಕರ್ನಾಟಕ ಸರ್ಕಾರ ತನ್ನ ಕೊಡುಗೆಯನ್ನೂ ನೀಡುವ ಮೂಲಕ, 03 ವರ್ಷಗಳ ಅವಧಿಗೆ ಅಜೀಂ ಪ್ರೇಂಜಿ ಫೌಂಡೇಶನ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ದೀಪಿಕಾ ವಿದ್ಯಾರ್ಥಿವೇತನ'ವನ್ನು ಪ್ರಾರಂಭಿಸಿದೆ.

Azim Premji Foundation Offers 30000 Scholarships To Support Girls Education

ಸರಳ ಮಾನದಂಡ, ವಿಪುಲ ವ್ಯಾಪ್ತಿ ಮತ್ತು ಗಣನೀಯ ಮೊತ್ತ ದೀಪಿಕಾ ವಿದ್ಯಾರ್ಥಿವೇತನದ ಪ್ರಮುಖ ಲಕ್ಷಣಗಳು ಎನ್ನಬಹುದು. ಈ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿನಿಯರು 10ನೇ ಮತ್ತು 12ನೇ ತರಗತಿ (ಪಿಯುಸಿ) ಯನ್ನು ರಾಜ್ಯ ICSE/CBSE/ISC ಮೊದಲಾದ ಯಾವುದೇ ಪಠ್ಯಕ್ರಮವನ್ನು ಅನುಸರಿಸಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಪೂರ್ಣಗೊಳಿಸಿ, 2025-26ನೇ ಸಾಲಿನಲ್ಲಿ ಸಾಮಾನ್ಯ ಪದವಿ ಅಥವಾ ವೃತ್ತಿಶಿಕ್ಷಣ ಪದವಿ ಅಥವಾ ಇತರ ಪದವಿ ಅಥವಾ ಡಿಪ್ಲೋಮಾ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ಯಾವುದಾದರೂ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾತಿ ಪಡೆದಿರಬೇಕು. ಈ ಉನ್ನತ ಶಿಕ್ಷಣ ಸಂಸ್ಥೆಗಳು ಸರ್ಕಾರಿ, ಖಾಸಗಿ ಅನುದಾನಿತ ಅಥವಾ ಖಾಸಗಿ ಸಂಸ್ಥೆಗಳಾಗಿರಬಹುದು. ಈ ಕನಿಷ್ಠ ಅರ್ಹತೆಯನ್ನು ಪೂರೈಸುವ ಯಾವುದೇ ವಿದ್ಯಾರ್ಥಿನಿ ದೀಪಿಕಾ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಲು ಅರ್ಹಳಾಗುತ್ತಾಳೆ.

ದೀಪಿಕಾ ವಿದ್ಯಾರ್ಥಿವೇತನದಲ್ಲಿ 02 ಭಾಗಗಳಿವೆ. ಮೊದಲನೆಯದಾಗಿ, ಪ್ರತಿ ವರ್ಷ ಅಜೀಂ ಪ್ರೇಂಜಿ ಫೌಂಡೇಶನ್ ನೀಡುವ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿವೇತನ, ಎರಡನೆಯದಾಗಿ, ಈ ಸಂಖ್ಯೆಯನ್ನು ಮೀರಿ, ಅರ್ಹ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿದಲ್ಲಿ, ಕರ್ನಾಟಕ ಸರ್ಕಾರ ಇವರಿಗೆ ನೀಡುವ ಅದೇ ಮೊತ್ತದ ವಿದ್ಯಾರ್ಥಿವೇತನ 2025-26ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 37,000 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನಗಳನ್ನು ನೀಡಲು ಅಜೀಂ ಪ್ರೇಂಜಿ ಫೌಂಡೇಶನ್ ಉದ್ದೇಶಿಸಿದೆ. ಈ ಸಂಖ್ಯೆಯು 2025-26ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ಮುಂದಿನ ಶೈಕ್ಷಣಿಕೆ ವರ್ಷಗಳಿಗೆ ಪರಿಶೀಲಿಸಿ ಮತ್ತು ಪರಿಷ್ಕರಿಸಲಾಗುತ್ತದೆ.

ಈ ವಿದ್ಯಾರ್ಥಿವೇತನದಡಿ ವಿದ್ಯಾರ್ಥಿನಿಯರಿಗೆ ದೊರೆಯಲಿರುವ ಆರ್ಥಿಕ ನೆರವೂ ಗಣನೀಯವಾಗಿದೆ. ಫಲಾನುಭವಿಗಳು ಕೋರ್ಸ್ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷ ರೂ.30,000/-ವನ್ನು ವಿದ್ಯಾರ್ಥಿವೇತನವಾಗಿ ನೀಡಲಾಗುತ್ತದೆ. ಫಲಾನುಭವಿಗಳು ಈ ವಿದ್ಯಾರ್ಥಿವೇತನವನ್ನು ಕಾಲೇಜಿನ ಅಥವಾ ವಿದ್ಯಾಭ್ಯಾಸಕ್ಕೆ ಪೂರಕವಾದ ಇನ್ನಾವುದೇ ಉದ್ದೇಶಗಳಿಗಾಗಿ ಶುಲ್ಕ ಉಪಯೋಗಿಸಿಕೊಳ್ಳಬಹುದಾಗಿದೆ.

ದೀಪಿಕಾ ವಿದ್ಯಾರ್ಥಿವೇತನ ವಿದ್ಯಾರ್ಥಿನಿಯರಿಗಾಗಿಯೇ ಮುಡಿಪಾಗಿರುವುದು ಇದರ ಮೊದಲ ವೈಶಿಷ್ಟ್ಯ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸುವ ಬಹುತೇಕ ವಿದ್ಯಾರ್ಥಿನಿಯರು ಗ್ರಾಮೀಣ ಪ್ರದೇಶಗಳ ಹಿನ್ನೆಲೆ ಉಳ್ಳವರಾಗಿದ್ದು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಕೌಟುಂಬಿಕ ಪರಿಸರಕ್ಕೆ ಸೇರಿದವರಾಗಿರುತ್ತಾರೆ. ಸಾಮಾಜಿಕವಾದ ನಿಬರ್ಂಧಗಳು ಮತ್ತು ತಾರತಮ್ಯದ ಶೃಂಖಲೆಗಳಿಂದ ಅದಾಗಲೇ ಸೀಮಿತ ಅವಕಾಶಗಳಿರುವ ಈ ಹುಡುಗಿಯರಿಗೆ ಬಹುಮಟ್ಟಿಗೆ ಉನ್ನತ ಶಿಕ್ಷಣ ಗಗನ ಕುಸುಮವೇ ಸರಿ.

ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗವನ್ನು ಆರ್ಥಿಕ ಮುಗ್ಗಟ್ಟಿನಿಂದ ಅರ್ಧಕ್ಕೇ ಮೊಟಕುಗೊಳಿಸುವ ವಿದ್ಯಾರ್ಥಿನಿಯರ ಸಂಖ್ಯೆಯೂ ಕಡಿಮೆಯೇನಲ್ಲ, ಹೀಗೆ ಉನ್ನತ ವ್ಯಾಸಂಗವನ್ನು ಮಧ್ಯದಲ್ಲೇ ತೊರೆದುಹೋದ ವಿದ್ಯಾರ್ಥಿನಿಯರು ಸಾಮಾನ್ಯವಾಗಿ ಎದುರಿಸುವ ನಿರಾಶಾದಾಯಕ ಸನ್ನಿವೇಶಗಳಲ್ಲಿ ಅಲ್ಪವಯಸ್ಸಿನಲ್ಲಿ ವಿವಾಹ, ತಾಯ್ತನದ ಹೊಣೆ, ನನಸಾಗದ ಕನಸುಗಳ ಹತಾಶೆ, ಆರ್ಥಿಕವಾಗಿ ಉತ್ತಮ ಮಟ್ಟಕ್ಕೆ ಬರಲಾರದ ಅಸಹಾಯಕತೆ, ದೈನಂದಿನ ಜೀವನದಲ್ಲಿ ದೌರ್ಜನ್ಯ, ಕ್ರೌರ್ಯ, ಪಾರತಂತ್ರ್ಯ, ದಾಸ್ಯಗಳ ವ್ಯಕ್ತಿಗತ ಅನುಭವ ಇವು ಕೆಲವೇ ಕೆಲವು ಎನ್ನಬೇಕು. ಇನ್ನು ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಎಡೆ ಮಾಡಿಕೊಡುವ ಆರ್ಥಿಕ ಸ್ವಾತಂತ್ರ್ಯ ಮರೀಚಿಕೆಯೇ ಸರಿ. ಇಂಥ ಕತ್ತಲಾಳಕ್ಕೆ ಕುಸಿಯದಂತೆ ಕೈಹಿಡಿದು ಮೇಲೆತ್ತುವ ಬೆಂಬಲ ದೀಪಿಕಾ ವಿದ್ಯಾರ್ಥಿವೇತನ' ಎನ್ನಬಹುದು.

ಈ ವಿದ್ಯಾರ್ಥಿವೇತನದ ಇನ್ನೊಂದು ವೈಶಿಷ್ಟ್ಯ ಇದಕ್ಕಾಗಿ ನಿಗದಿಪಡಿಸಿರುವ ಮಾನದಂಡದ ಸುಲಭತೆ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ, ಯಾವುದೇ ಜ್ಞಾನಶಾಖೆಯಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನವನ್ನು ಪಡೆಯಬಹುದು. ಎಂದಾಗ, ಆರ್ಥಿಕ ನೆರವಿನ ಅಗತ್ಯವಿರುವ ಬಹುತೇಕ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನದ ಪರಿಧಿಯೊಳಗೆ ಸೇರಿಕೊಳ್ಳುತ್ತಾರೆ. ಅಗತ್ಯವಿರುವ 'ದೀಪಿಕಾ'ದ ದೀಪ್ತಿ ಹಲವು ಯುವತಿಯರ ಬಾಳುಗಳಿಗೆ ಬೆಳಕಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+