Trend: ಗ್ಲಾಸ್ ನೀರಿನಲ್ಲಿ ಅರಿಶಿಣ ಬೆರೆಸುವ 'ಮಾಟ ಪದ್ಧತಿ'ಯ ವಿಡಿಯೋ ಮಾಡಬೇಡಿ: ನೆಗಟಿವ್ ಶಕ್ತಿ, ಭೂತ ಆಕರ್ಷಣೆ..!
Trending Reels Video Viral: ಸಾಮಾಜಿಕ ಜಾಲತಾಣ ಸಕ್ರಿಯವಾಗಿರುವ ಇಂದಿನ ಸನ್ನಿವೇಶದಲ್ಲಿ ಎಲ್ಲರ ಕೈಲು ಮೊಬೈಲ್ ಇದೆ. ಕ್ಷಣ ಮಾತ್ರದಲ್ಲಿ ಸುದ್ದಿ, ವಿಡಿಯೋ, ಹೊಸ ಬಗೆಯ ಕಂಟೆಂಟ್ ವೈರಲ್ ಆಗಿ ಬಿಡುತ್ತವೆ. ಅದೇ ರೀತಿ ಮನೆಯ ಕತ್ತಲ ಕೋಣೆಯಲ್ಲಿ ಒಂದು ಗ್ಲಾಸ್ ನೀರಿನಲ್ಲಿ ಅರಿಶಿಣ ಪುಡಿ ಹಾಕಿ, ಅದಕ್ಕೊಂದು ವಿಡಿಯೋ ಎಡಿಟ್ ಮಾಡಿ ಅಪ್ಲೋಡ್ ಮಾಡುವ ರೀಲ್ಸ್ ವಿಡಿಯೋ ಟ್ರೆಂಡ್ ಆಗಿದೆ. ಅಸಲಿಗೆ ಇಂಥ ವಿಡಿಯೋಗಳನ್ನು ಮನೆಯಲ್ಲಿ, ಅದರಲ್ಲೂ ಸಣ್ಣ ಮಕ್ಕಳು ಇರುವ ಮನೆಯಲ್ಲಂತೂ ಮಾಡಲೇಬಾರದು? ಯಾಕೆ ಅಂತಿರಾ? ಜ್ಯೋತಿಷ್ಯ ತಿಳಿದವರು ಹೇಳುವ ಸಂಗತಿಗಳು ಇಲ್ಲಿವೆ ನೋಡಿ.
ಮೊಬೈಲ್, ಇಂಟರ್‌ನೆಟ್ ಯುಗದಲ್ಲಿ ನಾವಿದ್ದೇವೆ. ಇನ್ಸಸ್ಟಾ ರೀಲ್ಸ್ ಬಂದ ಮೇಲಂತೂ ಜನರು ನಿತ್ಯ ಹೊಸ ಹೊಸ ಟ್ರೆಂಡ್ ಬಗ್ಗೆ ಹುಡುಕುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೇ ಕಾಮಿಡಿ ವಿಡಿಯೋ, ಡೈಲಾಗ್, ಹಾಡು, ಯಾವುದೇ ಟ್ರೆಂಡ್ ಆದರೂ ತಮ್ಮದೊಂದು ಇರಲಿದೆ ಎಂದು ರೀಲ್ಸ್ ಮಾಡಿ ಅಪ್ಲೋಡ್ ಮಾಡುವುದು ರೂಢಿಯಾಗಿಬಿಟ್ಟಿದೆ. ಅದೇ ರೀತಿ ಕತ್ತಲ ಕೋಣೆಯಲ್ಲಿ ಮೊಬೈಲ್ ಟಾರ್ಚ್ ಆನ್ ಮಾಡಿಟ್ಟು ಒಂದು ಗ್ಲಾಸ್ ನೀರಿಗೆ ಅರಿಶಿಣ ಹಾಕಿ, ತಮ್ಮ ಮಕ್ಕಳೊಂದಿಗೆ ವಿಡಿಯೋ ಮಾಡುತ್ತಿದ್ದಾರೆ. ಅದಕ್ಕೆ ಟ್ರೆಂಡಿಂಗ್ ಸಾಂಗ್ ಹಾಕಿ ಶೇರ್ ಮಾಡುತ್ತಿದ್ದಾರೆ. ಇಂತಹ ವಿಡಿಯೋಗಳೇ ಹೆಚ್ಚು ಟ್ರೆಂಡ್ ಆಗುತ್ತಿವೆ.

ಅಸಲಿಗೆ ಈ ರೀತಿ ನೀರಿನಲ್ಲಿ ಕತ್ತಲ ಕೋಣೆಯಲ್ಲಿ ಅರಿಶಿಣ ಹಾಕುವುದು ಮಾಟ ಪದ್ಧತಿಯಾಗಿದೆ. ಬ್ಲಾಕ್ ಮ್ಯಾಜಿಕ್ ಮಾಡುವ ವಿಧಾನಗಳಲ್ಲಿ ಒಂದು ಒಂದಾಗಿದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ. ಅಲ್ಲದೇ ಮಕ್ಕಳಿಗೆ ಇದರಿಂದ ತೊಂದರೆ ಅಗಬಹುದೆಂದು ಜ್ಯೂತಿಷ್ಯರೇ ಮಾಹಿತಿ ಹಂಚಿಕೊಂಡಿದ್ದಾರೆ.
ಕತ್ತಲ ಕೋಣೆಯೊಳಗೆ ನೀರಿಗೆ ಅರಿಶಿಣ ಹಾಕುವುದು ಮಾಟದ ಒಂದು ಪದ್ಧತಿಯಾಗಿದ್ದು, ಇದರಿಂದ ನೆಗಟಿವ್ ಎನರ್ಜಿ ಕ್ರಿಯೇಟ್ ಆಗುವುದು ಮಾತ್ರವಲ್ಲದೇ ಭೂತ, ಪ್ರೇತಾತ್ಮ ಆಕರ್ಷಣೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮನೆಯಲ್ಲಿ ಈ ರೀತಿ ಮಾಡಲು ಹೋಗಬೇಡಿ ಎಂದು ಕೆಲವು ಖ್ಯಾತ ಜ್ಯೋತಿಷಿಗಳೇ ಸಲಹೆ ನೀಡುತ್ತಿದ್ದಾರೆ.
ಮನೆಯಲ್ಲಿ ಇತರ ಸಮಸ್ಯೆಗಳು ಸೃಷ್ಟಿ..
ಅಷ್ಟೇ ಅಲ್ಲದೇ ಮನೆಯಲ್ಲಿ ಜಗಳ, ಮನಸ್ಥಾಪ, ಆರ್ಥಿಕ ತೊಂದರೆಗಳು ಉಂಟಾಗಬಹುದು. ಆದ್ದರಿಂದ ನೀವು ಟ್ರೆಂಡಿಂಗ್ ಹುಚ್ಚಿಗೆ ಸಂಕಷ್ಟಕ್ಕೆ ಸಿಲುಕಬೇಡಿ ಎಂದು ಎಚ್ಚರಿಸಿದ್ದಾರೆ. ಇದು ಸಾಮಾನ್ಯ ಪ್ರಕ್ರಿಯೆ ಅಲ್ಲ. ಇದೊಂದು ಬ್ಲ್ಯಾಕ್ ಮ್ಯಾಜಿಕ್‌ನ ಪ್ರಕ್ರಿಯೆಯ ತಾಂತ್ರಿಕ ವಿಷಯವಾಗಿದೆ. ಹೇಗೆ ಪಾಸಿಟಿವ್ ಶಕ್ತಿ ಇರುತ್ತೋ ಅದೇ ರೀತಿ ನೆಗಟಿವ್ ಶಕ್ತಿಯೂ ಇರುತ್ತೆ. ಅದನ್ನು ಕೆಲವರು ನಂಬುತ್ತಾರೆ, ಕೆಲವರು ನಂಬುವುದಿಲ್ಲ. ಅದು ಅವರವರ ಇಷ್ಟ. ಆದರೆ ಮನೆಯಲ್ಲಿ ಚಿಕ್ಕ ಮಕ್ಕಳ ಜತೆ ಇಂತಹ ರೀಲ್ಸ್ ಮಾಡಬೇಡಿ ಎಂದು ಸಲಹೆ ನೀಡಲಾಗಿದೆ.
அழகு 🥰😘 pic.twitter.com/D2G0OtH0Qt
— Rajini (@rajini198080) June 20, 2025
ಬೇರೆ ಬೇರೆ ರೀತಿಯ ರೀಲ್ಸ್‌ಗಳು ವೈರಲ್
ಕೆಲವರು ಇದೇ ರಿಲ್ಸ್ ಅನ್ನು ಬೇರೆ ಬೇರೆ ರೀತಿಯಲ್ಲಿ ಮಾಡುತ್ತಿದ್ದಾರೆ. ದೇವರ ವಿಗ್ರಹಗಳನ್ನು ಆ ಗ್ಲಾಸಿನಲ್ಲಿ ಇಟ್ಟು ಅರಿಶಿಣ ಹಾಕುತ್ತಾರೆ. ಕೆಲವರು ಕೆಸರಿ, ಬಿಳಿ, ಹಸಿರು ಬಣ್ಣ ಹಾಕಿ ಟ್ರೆಂಡ್ ಮಾಡುತ್ತಾರೆ. ಕೆಲವರು ಗ್ಲಾಸ್ ನೀರಿನಲ್ಲಿ ಮದ್ಯ (ಎಣ್ಣೆ ) ಹಾಕಿ ಹಾಸ್ಯಾಸ್ಯಪವಾಗಿ ವಿಡಿಯೋ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆದರೆ ಸಾಕು ತಾವು ಅದನ್ನು ಬೇರೆಯವರಿಗಿಂತ ಮೊದಲೇ ಮಾಡಿಬಿಡಬೇಕು ಎಂಬ ಆತುರ ಇಂದಿನ ರೀಲ್ಸ್ ಪ್ರೇಮಿಗಳಲ್ಲಿ ಹೆಚ್ಚಾಗುತ್ತಿದೆ.












Click it and Unblock the Notifications