ರೋಗಲಕ್ಷಣವಿಲ್ಲದ ಸೋಂಕಿತರ ಡಿಸ್‌ಚಾರ್ಜ್: ಸರ್ಕಾರದ ಹೊಸ ಆದೇಶ
ಬೆಂಗಳೂರು, ಜೂ. 24: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಲೇ ಆಸ್ಪತ್ರೆಗಳು ತುಂಬುತ್ತಿವೆ. ಹೀಗಾಗಿ ಸೋಂಕು ದೃಢಪಟ್ಟಿದ್ದರೂ ಯಾವುದೇ ರೋಗಲಕ್ಷಣಗಳಿಲ್ಲದ ಸೋಂಕಿತರ ಬಿಡುಗಡೆಗೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.
Recommended Video
ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಸೋಂಕಿತರಿಗೆ ಚಕಿತ್ಸೆ ಕೊಡುವುದು ಸರ್ಕಾರಿ ಆಸ್ಪತ್ರೆಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಿಕಿತ್ಸೆ ಬಳಿಕ ಬಿಡುಗಡೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡುವ ಮೊದಲು ಎರಡು ಬಾರಿ ಸೋಂಕು ನೆಗಟಿವ್ ಬರಬೇಕಿತ್ತು. ಆದರೆ ಇದೀಗ ಮಾರ್ಗಸೂಚಿ ಬದಲಿಸಿರುವ ಸರ್ಕಾರ ಸತತ 10 ದಿನಗಳ ಕಾಲ ಯಾವುದೇ ರೋಗಲಕ್ಷಣಗಳನ್ನು (asymptomatic) ತೋರಿಸದ ರೋಗಿಗಳನ್ನು ಮತ್ತೆ ಸ್ವಾಬ್ ಪರೀಕ್ಷೆ ಮಾಡದೇ ಬಿಡುಗಡೆ ಮಾಡಬಹುದು ಎಂದು ಸೂಚಿಸಲಾಗಿದೆ.

ಜೊತೆಗೆ ರೋಗ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾದವರು ಸತತ 13 ದಿನಗಳ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಬಳಿಕ ಪರೀಕ್ಷಾ ವರದಿಗೆ ಕಾಯದೆ ಬಿಡುಗಡೆ ಮಾಡಬಹುದು. ಆದರೆ 14 ದಿನಗಳ ಬಳಿಕವೂ ಕೊರೊನಾ ವೈರಸ್ ಲಕ್ಷಣಗಳನ್ನು ತೋರಿಸುವ ರೋಗಿಗಳನ್ನು ಸಂಪೂರ್ಣ ಗುಣಮುಖರಾದ ಬಳಿಕವೇ ಬಿಡುಗಡೆ ಮಾಡಬೇಕೆಂದು ಸೂಚಿಸಲಾಗಿದೆ.












Click it and Unblock the Notifications