ಡಿಕೆ ಶಿವಕುಮಾರ್ ಸಿಎಂ ಆಗಲ್ಲ, ಕರ್ನಾಟಕ ಎರಡು ಭಾಗ ಆಗುತ್ತೆ: ಖ್ಯಾತ ಜ್ಯೋತಿಷಿ ಸ್ಫೋಟಕ ಭವಿಷ್ಯ
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆಯ ಚರ್ಚೆಗಳು ಜೋರಾಗಿವೆ. ಇದೇ ವರ್ಷದಲ್ಲಿ ಸಿಎಂ ಬದಲಾಗುತ್ತಾರೆ. ಡಿ.ಕೆ.ಶಿವಕುಮಾರ್ ಅವರು ಹೊಸ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದೆಲ್ಲ ಹೇಳಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಹಾರಿದ್ದಾರೆ. ಇದರ ನಡುವೆ ಖ್ಯಾತ ಜ್ಯೋತಿಷಿಯೊಬ್ಬರು ಸಿಎಂ ಬದಲಾವಣೆ ವಿಚಾರವಾಗಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಸಿಎಂ ಕನಸು ಕಂಡಿರುವ ಡಿ.ಕೆ.ಶಿವಕುಮಾರ್ ಅವರಿಗೆ ಆಘಾತ ನೀಡುವ ಭವಿಷ್ಯವಾಣಿ ನುಡಿದಿರುವ ಈ ಜ್ಯೋತಿಷಿ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದಿಲ್ಲ ಎಂದಿದ್ದಾರೆ. ಇದು ಕರ್ನಾಟಕ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ.
ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿನಿ (Prashanth Kini) ಅವರು ಈ ಭವಿಷ್ಯವಾಣಿ ನುಡಿದಿದ್ದಾರೆ. ಸಿನಿಮಾ, ರಾಜಕೀಯ ಸೇರಿದಂತೆ ಈ ಜ್ಯೋತಿಷಿ ನುಡಿದಿರುವ ಭವಿಷ್ಯವಾಣಿಗಳು ಬಹುತೇಕ ಸತ್ಯವೇ ಆಗಿದ್ದು, ಕರ್ನಾಟಕ ರಾಜಕಾರಣದ ಬಗ್ಗೆ ಈ ಹೊಸ ಭವಿಷ್ಯವು ಸಂಚಲನ ಮೂಡಿಸಿದೆ. ಅಲ್ಲದೆ ಅಖಂಡ ಕರ್ನಾಟಕವು ಸದ್ಯದಲ್ಲೇ ಎರಡು ಭಾಗ ಆಗಲಿದೆ ಎಂದೂ ಪ್ರಶಾಂತ್ ಕಿನಿ ಸುಳಿವು ನೀಡಿದ್ದಾರೆ.

ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ತಾರೆ
ತಮ್ಮ ಸೋಷಿಯಲ್ ಮೀಡಿಯಾದಲ್ಲೇ ಭವಿಷ್ಯವಾಣಿಗಳನ್ನು ಪೋಸ್ಟ್ ಮಾಡುತ್ತಾರೆ. ಈಗ ರಾಜ್ಯ ರಾಜಕಾರಣ ಬಗ್ಗೆ ಸ್ಫೋಟಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ಕರ್ನಾಟಕ ಕಾಂಗ್ರೆಸ್‌ನ ಕೆಟ್ಟ ಆಡಳಿತದಿಂದಾಗಿ ಕರ್ನಾಟಕ ಎರಡು ಭಾಗವಾಗಲಿದೆ. ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳಲಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದಿಲ್ಲ" ಎಂದು ಭವಿಷ್ಯ ನುಡಿದಿದ್ದಾರೆ.
ಎರಡು ತಿಂಗಳ ಹಿಂದೆಯೂ ಪ್ರಶಾಂತ್ ಕಿನಿ ಭವಿಷ್ಯ ನುಡಿದಿದ್ದರು. ಕರ್ನಾಟಕ ಕಾಂಗ್ರೆಸ್ ಎರಡು ಭಾಗವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ. ಕರ್ನಾಟಕದ ಜನರು ಇದಕ್ಕೆ ಬೆಲೆ ತೆರಲಿದ್ದಾರೆ. ಮೈಸೂರು ತೊಂದರೆಗಳನ್ನು ಎದುರಿಸಲಿದೆ. ಭವಿಷ್ಯದಲ್ಲಿ ಕರ್ನಾಟಕ ಎರಡು ಭಾಗವಾಗಲಿದೆ" ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದರು. ಈಗ ಮತ್ತೊಮ್ಮೆ ಹೊಸ ಭವಿಷ್ಯ ನುಡಿದಿದ್ದಾರೆ.
"ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಜುಲೈ ತಿಂಗಳಲ್ಲೇ ಭವಿಷ್ಯ ಹೇಳಿದ್ದರು. ಗಾಂಧಿ ಕುಟುಂಬವಲ್ಲದ ಬೇರೆ ಯಾರಾದರೂ ಕಾಂಗ್ರೆಸ್ಸಿನ ನಾಯಕತ್ವ ವಹಿಸಿಕೊಂಡರೆ ಕಾಂಗ್ರೆಸ್ಸಿನ ಪುನರುಜ್ಜೀವನ ಸಾಧ್ಯ. ರಾಹುಲ್ ಗಾಂಧಿ ಸಕ್ರಿಯ ರಾಜಕಾರಣದಿಂದ ನಿರ್ಗಮಿಸುವ ದಿನ ಬಿಜೆಪಿಗೆ ಕೆಟ್ಟ ದಿನಗಳು ಎದುರಾಗಲಿವೆ" ಎಂದೂ ಪೋಸ್ಟ್ ಹಂಚಿಕೊಂಡಿದ್ದಾರೆ.
ದರ್ಶನ್-ಯಶ್ ಬಗ್ಗೆಯೂ ಅಚ್ಚರಿ ಭವಿಷ್ಯ!
ನಟ ದರ್ಶನ್ ಕೇಸ್ ವಿಚಾರವಾಗಿಯೂ ಪ್ರಶಾಂತ್ ಕಿನಿ ಅಚ್ಚರಿ ಭವಿಷ್ಯ ನುಡಿದಿದ್ದರು. ದರ್ಶನ್ ಅವರು ಶುಭ್ರವಾಗಿ ಹೊರಬರುತ್ತಾರೆ ಎಂದು ನಾನು ಈಗಾಗಲೇ ಭವಿಷ್ಯ ನುಡಿದಿದ್ದೇನೆ. ನಾನು ಯಾವಾಗಲೂ ಸರಿ ಎಂದು ಪ್ರಶಾಂತ್ ಕಿನಿ ಹೇಳಿದ್ದಾರೆ. ಯಶ್ ಅವರ 'ಟಾಕ್ಸಿಕ್' ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗುತ್ತೆ. ಯಶ್ ಅವರ ಸಿನಿಮಾ ಬಾಕ್ಸ್ ಆಫೀಸ್ ನಷ್ಟ ಅನುಭವಿಸಲಿದೆ, ಅವರು ಇನ್ನಷ್ಟು ಉತ್ತುಂಗಕ್ಕೇರಿದ ನಂತರ ಮತ್ತೆ ಕೆಳಗೆ ಇಳಿಯುತ್ತಾರೆ, ತೊಂದರೆ ಎದುರಿಸಬೇಕಾಗುತ್ತೆ ಎಂದೂ ಹೇಳಿದ್ದಾರೆ. ಈಗ ನುಡಿದಿರುವ ರಾಜಕೀಯದ ಭವಿಷ್ಯವಾಣಿಯು ಎಷ್ಟರಮಟ್ಟಿಗೆ ನಿಜವಾಗುತ್ತೆ? ಎಂಬುದು ಸದ್ಯದಲ್ಲೇ ತಿಳಿಯಲಿದೆ.












Click it and Unblock the Notifications