ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಕಟ್ಟುನಿಟ್ಟಿನ ಫರ್ಮಾನಿಗೆ ರಾಜ್ಯ ಬಿಜೆಪಿ ಮುಖಂಡರು ಬೇಸ್ತು

|
Google Oneindia Kannada News

ಎಲ್ಲದಕ್ಕೂ, ಅಮಿತ್ ಶಾ ಮತ್ತು ಕೇಂದ್ರದ ನಾಯಕರನ್ನು ಅವಲಂಬಿಸಿರುವ ರಾಜ್ಯ ಬಿಜೆಪಿ ಮುಖಂಡರಿಗೆ, ದೆಹಲಿಯಿಂದ ಬಂದಿರುವ ಕಟ್ಟುನಿಟ್ಟಿನ ಫರ್ಮಾನು ಚಿಂತೆಗೀಡಾಗುವಂತೆ ಮಾಡಿದೆ.

Recommended Video

ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ಅಸ್ವಸ್ಥ | Oneindia Kannada

ಪ್ರಮಾಣವಚನದಿಂದ ಹಿಡಿದು, ಸಚಿವ ಸಂಪುಟ ರಚನೆ, ಡಿಸಿಎಂಗಳ ನೇಮಕ, ಇದಾದ ನಂತರ, ಖಾತೆ ಹಂಚಿಕೆ, ಎಲ್ಲದಕ್ಕೂ, ಯಡಿಯೂರಪ್ಪ, ಅಮಿತ್ ಶಾ ಅವರ ಗ್ರೀನ್ ಸಿಗ್ನಲ್ ಗೆ ಕಾಯುವಂತಹ ಪರಿಸ್ಥಿತಿಯಿತ್ತು.

ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಕೈಬಿಟ್ಟರೂ, ಬಿಜೆಪಿ ಅವರ ಕೈಬಿಡುವುದಿಲ್ಲ!ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಕೈಬಿಟ್ಟರೂ, ಬಿಜೆಪಿ ಅವರ ಕೈಬಿಡುವುದಿಲ್ಲ!

ಇನ್ನೂ, ಯಡಿಯೂರಪ್ಪನವರ ಸರಕಾರ ಟೇಕ್ ಆಫ್ ಆಗಲೇ ಇಲ್ಲ ಎನ್ನುವ ವಿರೋಧ ಪಕ್ಷಗಳ ಟೀಕೆಯ ನಡುವೆ, ಹಿರಿಯ ಬಿಜೆಪಿ ಮುಖಂಡರು, ಖಾತೆ ಹಂಚಿಕೆಯ ನಂತರ, ಮುನಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ಪರಿಶಿಷ್ಟ ಪಂಗಡಕ್ಕೆ ಸಿಹಿ ಸುದ್ದಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪಪರಿಶಿಷ್ಟ ಪಂಗಡಕ್ಕೆ ಸಿಹಿ ಸುದ್ದಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ

ಇವೆಲ್ಲದರ ನಡುವೆ, ಅಮಿತ್ ಶಾ ಕಡೆಯಿಂದ, ಹೊಸ ಸೂಚನೆ ಹೊರಬಿದ್ದಿದ್ದು, ಮುಖ್ಯಮಂತ್ರಿಗಳು ಮತ್ತು ಸಚಿವರುಗಳು ಮಾತ್ರ ಆಡಳಿತ ನಡೆಸಬೇಕು. ಅವರ ಕುಟುಂಬದವರು ಯಾರೂ ಆಡಳಿತದ ವಿಚಾರದಲ್ಲಿ ಮೂಗು ತೂರಿಸಬಾರದು ಎನ್ನುವ ಸೂಚನೆ ಬಂದಿದೆ, ಎನ್ನುವ ಮಾಹಿತಿಯಿದೆ. ಅಮಿತ್ ಶಾ ಸೂಚನೆ ಯಾರಿಗೆಲ್ಲಾ?

ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ

ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ

ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ, ಆಡಳಿತ ಯಂತ್ರದಲ್ಲಿ ಹಸ್ತಕ್ಷೇಪ ಮಾಡುತ್ತಾರೆಂದು, ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. "ವಿಜಯೇಂದ್ರ, ಯಾವಯಾವ ಗುತ್ತಿಗೆದಾರರನ್ನು ಭೇಟಿಯಾಗುತ್ತಿದ್ದಾರೆ, ಏನು ಡಿಮಾಂಡ್ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿದೆ. ಸದ್ಯದಲ್ಲೇ ಎಲ್ಲಾ ವಿಷಯವನ್ನು ಹೊರಹಾಕಲಿದ್ದೇನೆ" ಎಂದು ಡಿಕೆಶಿ ಹೇಳಿದ್ದರು.

ಕೃಷ್ಣ ಕಚೇರಿಯನ್ನು ಮಾರ್ಕೆಟ್ ದಂಧೆ ಮಾಡಿಕೊಂಡು ಕುಳಿತಿದ್ದೀರಿ

ಕೃಷ್ಣ ಕಚೇರಿಯನ್ನು ಮಾರ್ಕೆಟ್ ದಂಧೆ ಮಾಡಿಕೊಂಡು ಕುಳಿತಿದ್ದೀರಿ

ಇದರ ಬೆನ್ನಲ್ಲೇ ಕುಮಾರಸ್ವಾಮಿ ಇದೇ ರೀತಿ ಆರೋಪಿಸಿದ್ದರು. "ಕೃಷ್ಣ ಕಚೇರಿಯನ್ನು ಮಾರ್ಕೆಟ್ ದಂಧೆ ಮಾಡಿಕೊಂಡು ಕುಳಿತಿದ್ದೀರಿ. ನಿಮ್ಮ ಹಾಗೇ, ನನ್ನ ಮಗನನ್ನು ಹತ್ತಿರಕ್ಕೆ ನಾನು ಸೇರಿಸಿಲ್ಲ. ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದಿದ್ದರೆ ನೀವು ಮತ್ತೆ ಜೈಲಿಗೆ ಹೋಗಲಿದ್ದೀರಾ" ಎಂದು ಎಚ್ಡಿಕೆ, ಬಿಎಸ್ವೈಗೆ ಎಚ್ಚರಿಕೆಯನ್ನು ನೀಡಿದ್ದರು.

ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವೆಂಬುದು ಇಡೀ ರಾಜ್ಯಕ್ಕೇ ತಿಳಿದಿದೆ

"ಕಮಿಷನ್ ದಂಧೆ , ವರ್ಗಾವಣೆ ದಂಧೆ, ನೇಮಕಾತಿ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವೆಂಬುದು ಇಡೀ ರಾಜ್ಯಕ್ಕೇ ತಿಳಿದಿದೆ ಕುಮಾರ ಸ್ವಾಮಿಯವರೇ, "ಕೋತಿ ತಾನು ತಿಂದು ಮೇಕೆ ಬಾಯಿಗೆವರೆಸಿದಂತಿದೆ "ನಿಮ್ಮ ಮಾತುಗಳು. CBI ತನಿಖೆಗೆ ಹೆದರಿ ಹತಾಶ ಹೇಳಿಕೆ ನೀಡುತ್ತಿದ್ದೀರಿ ವಿಷಯಾಂತರಗೊಳಿಸಿ ಜನತೆಯ ಧಿಕ್ಕು ತಪ್ಪಿಸುವ ಕುತಂತ್ರದ ಮಾತು ನಿಲ್ಲಿಸಿ" - ಎಚ್ಡಿಕೆ ಹೇಳಿಕೆಗೆ ವಿಜಯೇಂದ್ರ ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು.

ದೆಹಲಿಯಲ್ಲಿ ಬಿಜೆಪಿ ವರಿಷ್ಟರಿಗೆ ವಿಚಾರವನ್ನು ಮುಟ್ಟಿಸಿದ್ದಾರೆ

ದೆಹಲಿಯಲ್ಲಿ ಬಿಜೆಪಿ ವರಿಷ್ಟರಿಗೆ ವಿಚಾರವನ್ನು ಮುಟ್ಟಿಸಿದ್ದಾರೆ

ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮುಖಂಡರೊಬ್ಬರು, ದೆಹಲಿಯಲ್ಲಿ ಬಿಜೆಪಿ ವರಿಷ್ಟರಿಗೆ ಈ ವಿಚಾರವನ್ನು ಮುಟ್ಟಿಸಿದ್ದಾರೆ. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿರುವ ಅಮಿತ್ ಶಾ, ಐದು ಜನ, ಪಕ್ಷದ ಹಿರಿಯ ಮುಖಂಡರಿಗೆ, ಕಟ್ಟುನಿಟ್ಟಿನ ಸೂಚನೆಯನ್ನು ಹೊರಡಿಸಿದ್ದಾರೆ. ಕುಟುಂಬದ ಸದಸ್ಯರು, ಆಡಳಿತದಲ್ಲಿ ತಲೆಹಾಕದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್

ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್

ಯಡಿಯೂರಪ್ಪನವರ ಪುತ್ರ ವಿಜಯೇಂದ್ರ, ಈಶ್ವರಪ್ಪ, ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಗೋವಿಂದ ಕಾರಜೋಳ ಅವರಿಗೆ ಅಮಿತ್ ಶಾ, ಈ ಸೂಚನೆಯನ್ನು ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕುಟುಂಬದ ಸದಸ್ಯರು ಆಡಳಿತ ಯಂತ್ರದಲ್ಲಿ ಪದೇ ಪದೇ ಮೂಗು ತೂರಿಸುವುದರಿಂದ ಸರ್ಕಾರಕ್ಕೆ ಕಪ್ಪುಚುಕ್ಕೆ ಬೀಳುತ್ತದೆ. ಹಾಗಾಗಿ, ವಿರೋಧ ಪಕ್ಷಗಳಿಗೆ ಸುಮ್ಮನೆ ಆಹಾರವಾಗಬೇಡಿ ಎನ್ನುವ ಸೂಚನೆ, ದೆಹಲಿಯಿಂದ ರವಾನೆಯಾಗಿದೆ ಎಂದು ಹೇಳಲಾಗುತ್ತಿದೆ.

English summary
BJP National President Amit Shah Ordered State BJP Leaders Don't Allow To Interfere Your Family Members In Government Works, sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X