ಆಗಸ್ಟ್‌ 1ರಿಂದ ಕಲಬುರಗಿಯಲ್ಲಿ ಸೇನಾ ನೇಮಕಾತಿ

ಕಲಬುರಗಿ, ಜುಲೈ 31 : ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಪುರುಷ ಅಭ್ಯರ್ಥಿಗಳ ನೇಮಕಾತಿಗಾಗಿ ಆಗಸ್ಟ್ 1ರಿಂದ 8ರ ತನಕ ಕಲಬುರಗಿಯಲ್ಲಿ ಸೇನಾ ನೇಮಕಾತಿ ನಡೆಯಲಿದೆ.

ಕಲಬುರಗಿಯ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ನೇಮಕಾತಿ ನಡೆಯಲಿದೆ ಎಂದು ಬೆಂಗಳೂರು ಹೆಡ್‍ಕ್ವಾರ್ಟರ್ಸ್ ರಿಕ್ರೂಟಿಂಗ್ ಝೋನ್ ನೇಮಕಾತಿ ನಿರ್ದೇಶಕ ಕರ್ನಲ್ ದುಶ್ಯಂತ ಸಿಂಗ್ ಹೇಳಿದ್ದಾರೆ. ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಟೆಕ್ನಿಕಲ್ ಹಾಗೂ ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಮತ್ತು ಟೆಕ್ನಿಕಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

army

ಆಗಸ್ಟ್ 1ರ ಶನಿವಾರ ಯಾದಗಿರಿ ಹಾಗೂ ರಾಯಚೂರ ಜಿಲ್ಲೆಯ ಅಭ್ಯರ್ಥಿಗಳು, ಆಗಸ್ಟ್ 2 ರಂದು ಬೀದರ್, ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು, ಆಗಸ್ಟ್ 3ರಂದು ಬೆಳಗಾವಿ ತಾಲೂಕಿನ ಅಭ್ಯರ್ಥಿಗಳು, ಆಗಸ್ಟ್ 4ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ಹಾಗೂ ಬೈಲಹೊಂಗಲ ತಾಲೂಕಿನ ಅಭ್ಯರ್ಥಿಗಳು ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು. [1401 ವೈದ್ಯರ ನೇಮಕಾತಿಗೆ ಅಧಿಸೂಚನೆ ಪ್ರಕಟ]

ಆಗಸ್ಟ್ 5 ರಂದು ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಹುಕ್ಕೇರಿ ತಾಲೂಕಿನ ಅಭ್ಯರ್ಥಿಗಳು, ಆಗಸ್ಟ್ 6 ರಂದು ಬೆಳಗಾವಿ ಜಿಲ್ಲೆಯ ಸವದತ್ತಿ ಹಾಗೂ ಚಿಕ್ಕೋಡಿ ತಾಲೂಕಿನ ಅಭ್ಯರ್ಥಿಗಳು, ಆಗಸ್ಟ್ 7 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ಹಾಗೂ ರಾಮದುರ್ಗ ತಾಲೂಕಿನ ಅಭ್ಯರ್ಥಿಗಳು ಹಾಗೂ ಆಗಸ್ಟ್ 8 ರಂದು ಬೆಳಗಾವಿ ಜಿಲ್ಲೆಯ ರಾಯಬಾಗ, ಕಿತ್ತೂರ ಹಾಗೂ ಉಳಿದ ತಾಲೂಕಿನ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.

ಆಗಸ್ಟ್ 8ರ ಕೊನೆಯ ದಿನದಂದು ಮಾತ್ರ ಡಿ.ಎಸ್.ಸಿ. ಹುದ್ದೆಗಳ ಭರ್ತಿ ನಡೆಯಲಿದ್ದು, ಸದರಿ ಜಿಲ್ಲೆಗಳ 48 ವರ್ಷದೊಳಗಿನ ನಿವೃತ್ತ ಸೈನಿಕ ಅಭ್ಯರ್ಥಿಗಳು ಮಾತ್ರ ಭಾಗವಹಿಸಬೇಕು. ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಜವಾನರಿಗೆ 1 ವರ್ಷಗಳ ತರಬೇತಿ ನೀಡಲಾಗುತ್ತದೆ ಹಾಗೂ ಪ್ರತಿ ತಿಂಗಳು ಭತ್ಯೆ ಸೇರಿದಂತೆ ಸುಮಾರು 25 ಸಾವಿರ ಸಂಬಳ ನೀಡಲಾಗುತ್ತದೆ.

ವಿದ್ಯಾರ್ಹತೆ : ಸೋಲ್ಜರ್ ಕ್ಲರ್ಕ್/ಎಸ್.ಕೆ.ಟಿ, ಸೋಲ್ಜರ್ ಟೆಕ್ನಿಕಲ್ ಹುದ್ದೆಗಳಿಗೆ ಹದಿನೇಳುವರೆ ವರ್ಷದಿಂದ 23 ವರ್ಷ ವರ್ಷದವರೆಗಿನ ಹಾಗೂ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಹದಿನೇಳುವರೆ ವರ್ಷದಿಂದ 21 ವರ್ಷದವರೆಗಿನ ವಯೋಮಿತಿ ಹೊಂದಿರಬೇಕು.

ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ 10ನೇ ಉತ್ತೀರ್ಣರಾಗಿದ್ದು ಶೇ.45 ಅಂಕ ಪಡೆದ ಪಡೆದಿರಬೇಕು. ಸೋಲ್ಜರ್ ಟೆಕ್ನಿಕಲ್ ಹುದ್ದೆಗೆ 10+2 ಉತ್ತೀರ್ಣರಾಗಿದ್ದು, ಶೇ.45 ಅಂಕ ಪಡೆದಿರಬೇಕು. ಸೋಲ್ಜರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ ಪ್ರತಿ ವಿಷಯದಲ್ಲಿ ಶೇ.40 ಅಂಕ ಪಡೆದು 12ನೇ ತರಗತಿ ಉತ್ತೀರ್ಣರಾಗಿರಬೇಕು.

kalaburagi

ಕಲಬುರಗಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ಈ ಕುರಿತು ನೇಮಕಾತಿ ಬಗ್ಗೆ ಮಾಹಿತಿ ನೀಡಿದ್ದು, ಸೇನೆ ನೇಮಕಾತಿಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ನೇಮಕಾತಿಗಾಗಿ ಬೇರೆ ಜಿಲ್ಲೆಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಹಾಗೂ ಸೇನೆಯ ಸಿಬ್ಬಂದಿಗಳಿಗೆ ಜಿಲ್ಲಾಡಳಿತದಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+