ಅಡಿಕೆ ಎಲೆಚುಕ್ಕಿ ರೋಗಕ್ಕೆ ಖಾಸಗಿ ಸಂಶೋಧನಾ ಕೇಂದ್ರದಿಂದ ಔಷಧಿ: ಸಹಕಾರ ಸಂಘಗಳ ಮಹತ್ವದ ನಿರ್ಧಾರ
ಮಲೆನಾಡು ಮತ್ತು ಕರಾವಳಿಯ ಅಡಿಕೆ ಬೆಳೆಗಾರರನ್ನು ತೀವ್ರವಾಗಿ ಹೈರಾಣಾಗಿಸಿದ ಭಯಾನಕ ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಔಷಧಿ ಕಂಡುಹಿಡಿಯಲು ಖಾಸಗಿ ಸಂಶೋಧನಾ ಕೇಂದ್ರಕ್ಕೆ ಜವಾಬ್ದಾರಿ ನೀಡಲು ರಾಜ್ಯ ಅಡಿಕೆ ಸಹಕಾರ ಮಹಾಮಂಡಳದ ನೇತ್ರತ್ವದಲ್ಲಿ ಅಡಿಕೆ ಸಹಕಾರ ಸಂಘಗಳು ನಿರ್ಧಾರ ಕೈಗೊಂಡಿವೆ. ಮಲೆನಾಡು ಮತ್ತು ಕರಾವಳಿ ಜನ ಜೀವನ ಅಸ್ತವ್ಯಸ್ತಗೊಳ್ಳುವಂತೆ ರೈತರ ಬದುಕು, ಸಾಮಾಜಿಕ, ಆರ್ಥಿಕ ವ್ಯವಹಾರಗಳ ಮೇಲೆ ಪರಿಣಾಮ ಬೀರುವಂತೆ ಅಡಿಕೆ ಎಲೆಚುಕ್ಕಿ ರೋಗ ಗಂಭೀರ ಪರಿಣಾಮ ಉಂಟು ಮಾಡಿದೆ. ಅಡಿಕೆ ಬೆಳೆಗಾರರು ಕಾತರದಿಂದ ಗಮನಿಸುತ್ತಿರುವ ಈ ಮಹತ್ವದ ವಿದ್ಯಮಾನ ಇದು. ಈ ಬೆಳವಣಿಗೆಯ ಬಗ್ಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಕೃಷಿಕ ಮತ್ತು ಬರಹಗಾರ ಅರವಿಂದ ಮೇಲುಕೊಪ್ಪ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

ನಿರ್ಧಾರದ ಹಿಂದಿರುವ ಕಾರಣಗಳಿವು
ಖಾಸಗಿ ಸಂಸ್ಥೆಗೆ ಜವಾಬ್ದಾರಿ ನೀಡಲು ಕಾರಣವಾಗಿರುವ ಹಲವು ಅಂಶಗಳನ್ನು ಅರವಿಂದ ಸಿಗದಾಳ್ ನೆನಪಿಸಿಕೊಂಡು ಪಟ್ಟಿ ಮಾಡಿದ್ದಾರೆ.
1) ಮಲೆನಾಡು ಮತ್ತು ಕರಾವಳಿಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಹಾಗು ರಾಜ್ಯ/ಕೇಂದ್ರ ತೋಟಗಾರಿಕಾ/ಕೃಷಿ ಸಚಿವರುಗಳು ಅಡಿಕೆ ಎಲೆಚುಕ್ಕಿ ಸಂತ್ರಸ್ತ ಮಲೆನಾಡು ಕರಾವಳಿಯ ರೈತರ ಪರವಾಗಿ ಪರಿಹಾರ ಕಂಡು ಹಿಡಿಯಲು, ಧ್ವನಿ ಎತ್ತಲು, ಇದೊಂದು ಗಂಭೀರ ಸಮಸ್ಯೆ ಎಂದು ಹೋರಾಟ ಮಾಡಲು ಎಳ್ಳಿನಿತು ಇಚ್ಚಾಶಕ್ತಿ ಪ್ರದರ್ಶಿಸದೆ, ಸಂಪೂರ್ಣ ನಿಷ್ಕ್ರಿಯರಾದ ಪರಿಣಾಮ,
2) ಎಲೆಚುಕ್ಕಿ ಭಾದಿತ ಅಡಿಕೆ ತೋಟಗಳ ಮಧ್ಯೆಯೇ ಇರುವ ಶೃಂಗೇರಿ ಮತ್ತು ತೀರ್ಥಹಳ್ಳಿ ಅಡಿಕೆ ಸಂಶೋಧನಾ ಕೇಂದ್ರಗಳು ಉದ್ದೇಶಿತ ಸಂಶೋಧನೆಯನ್ನು ಸಂಪೂರ್ಣ ನಿಲ್ಲಿಸಿ, ಸಂಶೋಧನಾ ಕೇಂದ್ರಗಳನ್ನು ಮದುವೆ ಛತ್ರವಾಗಿ ಬದಲಿಸಬಹುದೇನೋ ಎಂಬಂತೆ ಕೇವಲ ಅಲಂಕಾರಿಕ ಕಟ್ಟಡವಾಗಿಸಿದ ಪರಿಣಾಮ,
3) ಸಂಶೋಧನೆಗೆ ಸರಕಾರದಿಂದ ಹಣ ಕೇಳಿ, ಸರಕಾರ ಕೊಟ್ಟ ಅಲ್ಪ ಹಣದಿಂದ ಯಾವ ಸಂಶೋಧನೆ, ಅಧ್ಯಯನಗಳನ್ನೂ ಮಾಡದೆ, ಮಾಡಿದ್ದರೂ ಅದರ ಮಾಹಿತಿಯನ್ನು ರೈತರಿಗಾಗಲಿ, ಸ್ಥಳೀಯ ಪ್ರತಿನಿಧಿಗಳಿಗಾಗಲಿ ಕಿಂಚಿತ್ತೂ ತಿಳಿಸದೆ (ಈ ಬಗ್ಗೆ ಶೃಂಗೇರಿ ಶಾಸಕರು ಅಸಂಬ್ಲಿಯಲ್ಲಿ ಜಸ್ಟ್ ಪ್ರಶ್ನೆ ಕೇಳಿದ್ದರು!! ನಂತರ ಅವರಿಗೂ ಉತ್ತರ ಸಿಕ್ಕಿದ ಮಾಹಿತಿ ಇಲ್ಲ!!) ಮತ್ತೆ ಸಂಶೋಧನೆಗೆ ಬೇಕಾದ ಹಣವನ್ನೂ ಸರಕಾರಕ್ಕೆ ಕೇಳದೆ, ಯಾವ ಔಷಧಿಯನ್ನೂ ಕಂಡು ಹಿಡಿಯುವ ಪ್ರಯತ್ನವನ್ನೂ ಮಾಡದೆ, "ಅಡಿಕೆ ಗರಿ ಕತ್ತರಿಸಿ, ಸುಟ್ಹಾಕಿ, ಸುಣ್ಣ ಹಾಕಿ, ಪ್ರಾಪಿಕೊನಾಸೋಲ್ ಸ್ಪ್ರೇ ಮಾಡಿ..." ಎಂಬಿತ್ಯಾದಿ ಯಾವುದೇ ದೊಡ್ಡ ಫಲಿತಾಂಶ ಕೊಡದ, ಎಲೆಚುಕ್ಕಿಯಿಂದ ತೋಟಗಳು ICU ರೆಡ್ ಜೋನ್ನಲ್ಲಿದ್ದರೂ ಕೇವಲ ಪ್ರಥಮ ಚಿಕಿತ್ಸೆ ಮಾಹಿತಿಗಳನ್ನು ಅಲ್ಲಲ್ಲಿ ಫಲಾವ್, ಮೊಸರನ್ನ, ಚಟ್ಟಂಬಡೆಗಳೊಂದಿಗೆ ವ್ಯರ್ಥ ಶಿಬಿರಗಳನ್ನು ಮಾಡಿ ಕೊಡುತ್ತ, ಮಲೆನಾಡು ಕರಾವಳಿಯಲ್ಲಿ ಈ ವರ್ಷದ ಅಡಿಕೆ ಬೆಳೆಯನ್ನು 50-60% ನಷ್ಟ ಆಗಲು ಕಾರಣವಾದ ಶಿವಮೊಗ್ಗ ಕೃಷಿ ವಿಶ್ವ ವಿದ್ಯಾಲಯದ ಗಂಭೀರ ನಿಷ್ಕ್ರಿಯತೆಯ ಪರಿಣಾಮ,
4) ಅಡಿಕೆ ಬೆಳೆಗಾರರು ಅನುಭವ ಪ್ರಯೋಗ ಸತ್ಯದಿಂದ ಅಡಿಕೆ ಎಲೆ ಚುಕ್ಕಿಗೆ "ಇದು ಉಪಯೋಗವಿಲ್ಲ" ಎಂದು ಕಂಡುಕೊಂಡ ಹೆಕ್ಸಾಕೊನಸೋಲ್ ಮತ್ತು ಅದರ ಸಹೋದರಿ ಔಷಧಿಗಳನ್ನು ಅದೂ ಕೇವಲ ₹.300 ಬೆಲೆಯದ್ದಾಗಿದ್ದು ಅದನ್ನು ರೈತರು ಬೇಡ ಬೇಡ ಅಂತ ಹೇಳಿದರೂ ಉಚಿತವಾಗಿ ಹಂಚಿಕೆ ಮಾಡಿದ ಮತ್ತು ಎಕರೆಗೆ ₹.300 ದಾಖಲೆ, + ರೈತರಿಗೆ ₹.200 ಖರ್ಚು ಮಾಡಿಸಿ, ₹.600 ಮೈಲುತುತ್ತ ಸಬ್ಸಿಡಿ ಎಂದು ಭಿಕ್ಷೆ ನೀಡಿದ ತೋಟಗಾರಿಕೆ ಇಲಾಖೆಯ ಮಹಾ ವ್ಯರ್ಥ ವಿಜ್ರಂಬಣೆಯ ಉಪಯೋಗ ರಹಿತ ಸಹಾಯದಿಂದ ರೈತರು ಎಲೆ ಚುಕ್ಕಿ ರೋಗದಿಂದ ಫಸಲು-ತೋಟ ಕಳೆದುಕೊಳ್ಳುತ್ತಿರುವುದರ ಪರಿಣಾಮ,
5) ಎಲೆ ಚುಕ್ಕಿ ಬಾಧಿತ ಅಡಿಕೆ ಬೆಳೆಗಾರರಿಗೆ ಬಿಗ್ ರಿಲೀಫ್ ಪ್ಯಾಕೇಜ್ನ ಧನ ಸಹಾಯ ನೀಡಲು, ರಾಜ್ಯ ಸರಕಾರ 2023 ರಲ್ಲಿ (ಅಡಿಕೆ ಬೆಳೆಗಾರರಿಗೆ ನೇರ ಧನ ಸಹಾಯ) 225.73 ಕೋಟಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕೇಂದ್ರ ಸರಕಾರ 60:40 ಪ್ರಮಾಣದಲ್ಲಿ ಭರಿಸಲು ಒಪ್ಪಿಗೆ ಕೊಟ್ಟು, ರಾಜ್ಯ ಸರಕಾರ 40% ನೀಡುವಂತೆ ಪತ್ರ ಬರೆದಿದ್ದು, ಆ ಪತ್ರಕ್ಕೆ ರಾಜ್ಯ ಸರಕಾರದ ಮೌನ ಅಭಿನಯ, ಅದರಂತೆ ಮತ್ತೆ ಈ ವರ್ಷ ರಾಜ್ಯ ಸರಕಾರ ಹೊಸಾ 175 ಕೋಟಿಗೆ ಹೊಸ ಪ್ರಸ್ತಾವನೆ (ಇದು 2024-25 ರ ಎಲೆಚುಕ್ಕಿ ಬಾಧಿತ ರೈತರಿಗೆ ನೇರ ಹಂಚಲು!!) ಸಧ್ಯಕ್ಕೆ ಕೇಂದ್ರ ಸರಕಾರದ ಮೌನ ಅಭಿನಯಗಳ ನಾಟಕದಿಂದ ಒಂದು ಬಿಡಿಗಾಸೂ ಒಬ್ಬ ಸಂತ್ರಸ್ತ ರೈತನಿಗೂ ಸಿಗದಿರುವದರ ಪರಿಣಾಮ,
6) ಕಾಸರಗೋಡು CPCRI ಎಲೆಚುಕ್ಕಿ ಸಂಶೋಧನೆಗೆ ಕೇಂದ್ರದಿಂದ ಸಾಕಷ್ಟು ಹಣ ಹರಿದು ಬಂದಿದ್ದರೂ, ಅಲ್ಲಿಯ ವಿಜ್ಞಾನಿಗಳು ಮತ್ತು ಇತರೆ ಹಲವಾರು ವಿಜ್ಞಾನಿಗಳು ಗ್ರೌಂಡ್ ಲೆವೆಲ್ ಅಧ್ಯಯನ, ರೋಗದ ಕಾರಣ ಹುಡುಕಲು ಬೇರು ಮಟ್ಟದ ಡಯಾಗನೈಸ್, ಪ್ರಯೋಗ, ಸಂಶೋಧನೆ, ಔಷಧಿ ಕಂಡುಹಿಡಿಯುವ ಪ್ರಯತ್ನಗಳನ್ನು ಮಾಡಲು ವಿಫಲರಾದ ಪರಿಣಾಮ,
ಅಂತಿಮವಾಗಿ, ಖಾಸಗೀ ಸಂಶೋಧನಾ ಕೇಂದ್ರದಿಂದ ಔಷಧಿ ಕಂಡು ಹಿಡಿಯುವ ಜವಾಬ್ದಾರಿ ನೀಡಲು ರಾಜ್ಯ ಅಡಿಕೆ ಸಹಕಾರ ಮಹಾಮಂಡಳದ ನೇತ್ರತ್ವದಲ್ಲಿ ಅಡಿಕೆ ಸಹಕಾರ ಸಂಘಗಳು ನಿರ್ಧಾರ ಕೈಗೊಂಡಿವೆ.
ಇದು ಒಂದು ಆಶಾದಾಯಿಕ ಬೆಳವಣಿಗೆ ಅಂತ ಭಾವಿಸೋಣ.
ಖಾಸಗೀ ಸಂಶೋಧನಾ ಕೇಂದ್ರದಿಂದ ಔಷಧಿ ಕಂಡು ಹಿಡಿಯುವ ಪ್ರಯತ್ನಗಳು ಆದಷ್ಟು ಬೇಗ ಮತ್ತು ಪ್ರಾಮಾಣಿಕವಾಗಿ ನೆಡೆಯಲಿ. ಮೇಲಿನ ಆರರ ಜೊತೆಗೆ ಇದು ಏಳನೆಯದು ಅಂತ ಆಗದೆ, ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಒಂದು ಸ್ಪಷ್ಟ ಗ್ರೌಂಡ್ ಲೆವೆಲ್ ಅಧ್ಯಯನ, ರೋಗದ ಕಾರಣ ಹುಡುಕಲು ಬೇರು ಮಟ್ಟದ ಡಯಾಗನೈಸ್, ಪ್ರಯೋಗ, ಸಂಶೋಧನೆ, ಔಷಧಿ ಕಂಡುಹಿಡಿಯುವ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ಭರವಸೆಯೊಂದಿಗೆ ಹಾರೈಸೋಣ.
ಅಡಿಕೆ ಎಲೆಚುಕ್ಕಿ ರೋಗಕ್ಕೆ ಖಾಸಗಿ ಸಂಶೋಧನೆ, ಅಧ್ಯಯನ ಮತ್ತು ಔಷಧಿ-ವ್ಯಾಕ್ಸಿನ್ ಕಂಡು ಹಿಡಿಯುವ ಪ್ರಯತ್ನಕ್ಕೆ ಒಟ್ಟಾಗಿ ಶ್ರಮಿಸುತ್ತಿರುವ ಮ್ಯಾಮ್ಕೋಸ್, ಕ್ಯಾಂಪ್ಕೋ, ತುಮ್ಕೋಸ್, ಆಫ್ಕೋಸ್ ಹಾಗು ಎಲ್ಲ ಇತರ ಸಹಕಾರಿ ಸಂಸ್ಥೆಗಳಿಗೆ ಎಲ್ಲಾ ರೈತರು ಧನ್ಯವಾದಗಳನ್ನು ಹೇಳೋಣ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ













Click it and Unblock the Notifications