2000 ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಕಲೆಯ ಸೊಬಗು: 1.32 ಲಕ್ಷ ಕುಶಲಕರ್ಮಿಗಳಿಗೆ ಮಾರುಕಟ್ಟೆ ಭಾಗ್ಯ
ನವದೆಹಲಿ: ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಕರಕುಶಲ, ಆಹಾರ ಉತ್ಪನ್ನಗಳಿಗೆ ಆದ್ಯತೆ ನೀಡಲಾಗುತ್ತಿದೆ. ವ್ಯಾಪಾರಸ್ಥರಿಗೆ ಮಾರುಕಟ್ಟೆಗೆ ಅವಕಾಶ ನೀಡುವ ಮುಖೇನ ಆಯಾ ಭಾಗದ ಸ್ಥಳೀಯ ವೈವಿಧ್ಯತೆ ಕಲಾ ಪರಂಪರೆ, ಆಹಾರ ಪದ್ಧತಿ, ಕಲೆ, ಸಾಂಸ್ಕೃತಿಯನ್ನು ಪರಿಚಯಿಸಲು ಭಾರತ ಸರ್ಕಾರ 'ಒಂದು ನಿಲ್ದಾಣದ ಒಂದು ಉತ್ಪನ್ನ' (OSOP) ಉಪಕ್ರಮವನ್ನು 2022-23ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿ, ಜಾರಿಗೊಳಿಸಿತು. ಇದರ ಪರಿಣಾಮ ಇಂದು ಸಾವಿರಾರು ರೈಲು ನಿಲ್ದಾಣಗಳಲ್ಲಿ ಸ್ಥಳೀಯರಿಂದ ಚಿಲ್ಲರೆ ಮಳಿಗೆ ತೆರೆಯಲಾಗಿದೆ. ಪ್ರಾದೇಶಿಕ ವೈವಿಧ್ಯತೆ ಲಕ್ಷಾಂತರ ಪ್ರಯಾಣಿಕರಿಗೆ ತಲುಪುವಂತಾಗಿದೆ.
ದೇಶದ ಸುಮಾರು 2000ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಸ್ಥಳೀಯ ಕುಶಲಕರ್ಮಿಗಳು ಮತ್ತು ಸ್ವಸಹಾಯ ಗುಂಪುಗಳಿಗೆ ಮಾರುಕಟ್ಟೆ ಅವಕಾಶ ಒದಗಿಸಲಾಗಿದೆ. ಅವರಿಗಂತಲೇ ಮೀಸಲಾದ ಚಿಲ್ಲರೆ (ಒಎಸ್‌ಒಪಿ ಮಳಿಗೆ) ಮಳಿಗೆಗಳನ್ನು ನಿರ್ಮಿಸಿ ಕೊಡಲಾಗಿದೆ. ಈ ಉಪ್ರಕಮ ಸ್ಥಳೀಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವುದು ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಪ್ರದರ್ಶಿಸುವುದು ಗುರಿ ಸರ್ಕಾರದ ಈ ಯೋಜನೆ ಹೊಂದಿದೆ. ಒಟ್ಟು ಸುಮಾರು 2,326 ಚಿಲ್ಲರೆ ಮಳಿಗೆಗಳು ಸ್ಥಾಪನೆ ಆಗಿವೆ. 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯಡಿ 2026 ರ ಜನವರಿ ಮಧ್ಯಭಾಗದ ಹೊತ್ತಿಗೆ 1.32 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳಿಗೆ ಪ್ರಯೋಜನ ಪಡೆದಿದ್ದಾರೆ. ಕೆಲವು ರಾಜ್ಯಗಳ ಪ್ರಮುಖ ನಿಲ್ದಾಣಗಳ ಮಾಹಿತಿ ಇಲ್ಲಿ ಕೊಡಲಾಗಿದೆ.

ತೆಂಕಶಿ ಜಂಕ್ಷನ್ ರೈಲು ನಿಲ್ದಾಣ (ತಮಿಳುನಾಡು)
ತಮಿಳುನಾಡು ವ್ಯಾಪ್ತಿಯಲ್ಲಿ ರೈಲು ಜಾಲದಿಂದ ಪ್ರಾದೇಶಿಕ ಉತ್ಪನ್ನಗಳು ಸುಲಭ ಮಾರುಕಟ್ಟೆಗಳನ್ನು ಪ್ರವೇಶಿಸಿವೆ. ಇಲ್ಲಿನ 19 ನಿಲ್ದಾಣಗಳಲ್ಲಿ ನಡೆಸಲಾದ 15 ದಿನಗಳ ಯಶಸ್ವಿ ಪ್ರಾಯೋಗಿಕ ಯೋಜನೆ ನಂತರ, ಒಎಸ್ಒಪಿ ಯೋಜನೆ ವ್ಯವಸ್ಥಿತವಾಗಿ ವಿಸ್ತರಿಸಲಾಯಿತು. ಕನಿಷ್ಠ ಶುಲ್ಕದೊಂದಿಗೆ ಅನೇಕ ಉತ್ಪಾದಕರಿಗೆ ಅವಕಾಶ ಮಾಡಿಕೊಡಲಾಗಿದೆ. ಏಜೆನ್ಸಿಗಳು, ಸ್ವಸಹಾಯ ಗುಂಪುಗಳು ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಮನ್ವಯದಲ್ಲಿ ನಿಲ್ದಾಣಗಳಲ್ಲಿ ಉಪಕ್ರಮ ಜಾರಿಗೆ ತರಲಾಗಿದೆ.
ಇಲ್ಲಿ ಪ್ರದರ್ಶಿಸಲಾದ ಉತ್ಪನ್ನಗಳು ಪ್ರತಿ ಪ್ರದೇಶದ ವಿಶಿಷ್ಟ ಗುರುತನ್ನು ಪ್ರತಿಬಿಂಬಿಸುತ್ತವೆ. ತಮಿಳುನಾಡಿನ ತೆಂಕಸಿ ಜಂಕ್ಷನ್‌ನಲ್ಲಿ ಅತ್ಯಂತ ನಾಜೂಕಾಗಿ ತಯಾರಿಸಿದ ಬೆತ್ತದ ಸ್ಥಳೀಯ ಉತ್ಪನ್ನಗಳು ಕೌಶಲ ಮತ್ತು ಕರಕುಶಲತೆ ಎತ್ತಿ ತೋರಿಸುತ್ತವೆ. ಹಾಗೆಯೇ, ಪಾಟ್ನಾ ನಿಲ್ದಾಣದಲ್ಲಿನ ಮಳಿಗೆಯು ವಿಶ್ವಪ್ರಸಿದ್ಧ ಮಧುಬನಿ ವರ್ಣಚಿತ್ರಗಳನ್ನು ಪ್ರದರ್ಶಿಸುತ್ತದೆ. ಇದು ಸ್ಥಳೀಯ ಕಲಾವಿದರಿಗೆ ಈ ಸಾಂಪ್ರದಾಯಿಕ ಕಲೆಯನ್ನು ಜನರಿಗೆ ತಲುಪಿಸಲು ಉತ್ತಮ ವೇದಿಕೆಯನ್ನು ನಿಲ್ದಾಣಗಳ ಮೂಲಕ ರೈಲ್ವೆ ಇಲಾಖೆ ಒದಗಿಸಲಾಗಿದೆ.
ಬಿಹಾರದ ಪಾಟ್ನಾ ಜಂಕ್ಷನ್‌ನಲ್ಲಿರುವ ಮಧುಬನಿ ಪೇಂಟಿಂಗ್ಸ್
ಪಾಟ್ನಾದ ಕುಶಲಕರ್ಮಿಗಳು, ನೇಕಾರರು, ರೈತರು ಮತ್ತು ವಿಶೇಷವಾಗಿ ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಆದ್ಯತೆ ನೀಡಲಾಗಿದೆ. ಔಪಚಾರಿಕ ಮಾರುಕಟ್ಟೆಗಳ ಲಭ್ಯತೆ ಇಲ್ಲದವರನ್ನು ಗುರಿತಿಸಿ ಸಾಂಸ್ಥಿಕ ಸಮನ್ವಯದ ಮೂಲಕ ಬೆಂಬಲ ನೀಡಲಾಗಿದೆ. ಯೋಜನೆಯು ತಳಮಟ್ಟದ ಸಮುದಾಯಗಳು ತಮ್ಮ ಸಾಂಪ್ರದಾಯಿಕ ಜೀವನೋಪಾಯವನ್ನು ಉಳಿಸಿಕೊಳ್ಳುವುದರ ಜೊತೆಗೆ ವಿಶಾಲವಾದ ಗ್ರಾಹಕ ಬಳಗದೊಂದಿಗೆ ಸಂಪರ್ಕ ಸಾಧಿಸುವಂತಾಗಿದೆ.
ಪ್ರಾದೇಶಿಕ ಅಸ್ಮಿತೆಯ ಪ್ರದರ್ಶನ
ಒಎಸ್‌ಒಪಿ ಮಳಿಗೆಗಳು ಪ್ರಯಾಣಿಕರಿಗೆ ಆಯಾ ಭಾಗದ ಸ್ಥಳೀಯ ಕಲೆ ಸಂಸ್ಕೃತಿಗಳ ಉತ್ಪನ್ನಗಳನ್ನು ನೆನಪಿನ ಕಾಣಿಕೆ ರೀತಿಯಲ್ಲಿ ಖರೀದಿ ಅವಕಾಶ ನೀಡುತ್ತವೆ. ಇದು ಪ್ರತಿ ರಾಜ್ಯದ ವಿಶಿಷ್ಟ ಸಾಂಸ್ಕೃತಿಕ ಮತ್ತು ಆರ್ಥಿಕ ಗುರುತನ್ನು ಬಿಂಬಿಸುವುದಲ್ಲದೆ, ತಳಮಟ್ಟದ ಜನರ ಜೀವನ ನಿರ್ವಹಣೆಗೆ, ಸ್ಥಳೀಯ ಭಾಗದ ಕಲೆ,ಉತ್ಪನ್ನಗಳು ನಶಿಸದಂತೆ ತಡೆಯುತ್ತದೆ ಎಂದು ಈ ಹಿಂದೆ ರೈಲ್ವೆ ಸಚಿವಾಲಯ ತಿಳಿಸಿತ್ತು.
ಪಶ್ಚಿಮ ಬಂಗಾಳದ ಅಸನ್ಸೋಲ್ ನಿಲ್ದಾಣ
ಪಶ್ಚಿಮ ಬಂಗಾಳದ ಅಸನ್ಸೋಲ್ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 4ರಲ್ಲಿ ಒಎಸ್‌ಒಪಿ ಕಿಟಕಿ (ಕಿಯೋಸ್ಕ್), ಕೈಮಗ್ಗದ ಬ್ಯಾಗ್‌ಗಳು, ಕೈಯಿಂದ ತಯಾರಿಸಿದ ಕಲಾಕೃತಿಗಳು ಮತ್ತು ಕಾರ್ಪೆಟ್‌ಗಳ ಮಾರಾಟ ಮಾಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಆಕರ್ಷಿಸುತ್ತಿರುವ ಈ ಪ್ರಯಾಣಿಕರು ಇವುಗಳನ್ನು ಕೊಳ್ಳುವ ಜೊತೆಗೆ ಆಯಾ ಭಾಗದ ವೈಶಿಷ್ಟ್ಯತೆಗಳನ್ನು ತಿಳಿದುಕೊಳ್ಳುತ್ತಾರೆ.
ಮುಂದಿನ ವರ್ಷಗಳಲ್ಲಿ ದೇಶದ ಮತ್ತಷ್ಟು ರೈಲು ನಿಲ್ದಾಣಗಳಲ್ಲಿ ಈ ಯೋಜನೆ ವಿಸ್ತರಣೆ ಆಗಲಿದೆ. ಇದರಿಂದ ಆಯಾ ಭಾಗದ ಜನರ ಜೀವನೋಪಾಯ ಸುಧಾರಿಸಲಿದೆ.
-
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Indian Railway: ಬಣ್ಣದಿಂದಲೇ ರೈಲುಗಳ ವ್ಯತ್ಯಾಸ ಗುರುತಿಸುವುದು ಹೇಗೆ? -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ












Click it and Unblock the Notifications