• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸೋಂಕಿತರಿಗೆ ಬೆಡ್ ಕಾಯ್ದಿರಿಸುವ ಹೊಸ ವ್ಯವಸ್ಥೆಗೆ ಚಾಲನೆ

|
Google Oneindia Kannada News

ಬೆಂಗಳೂರು, ಜೂನ್ 10: ಕೊರೊನಾ ಸೋಂಕಿತರು ಸರತಿ ಸಾಲಿನಲ್ಲಿ ಬೆಡ್ ಕಾಯ್ದಿರುವ ನೂತನ ವ್ಯವಸ್ಥೆಯನ್ನು ಸಚಿವ ಅರವಿಂದ ಲಿಂಬಾವಳಿ ಇಂದು ಲೋಕಾರ್ಪಣೆಗೊಳಿಸಿದರು.

'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬಂದಿದ್ದು ,ಮುಂದಿನ ಕೆಲವೇ ದಿನಗಳಲ್ಲಿ ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುತ್ತದೆ' ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ನೇರ ನಗದು ವರ್ಗಾವಣೆಗೆ 'ಡಿಬಿಟಿ' ಆ್ಯಪ್ ಬಿಡುಗಡೆ ಮಾಡಿದ ಯಡಿಯೂರಪ್ಪನೇರ ನಗದು ವರ್ಗಾವಣೆಗೆ 'ಡಿಬಿಟಿ' ಆ್ಯಪ್ ಬಿಡುಗಡೆ ಮಾಡಿದ ಯಡಿಯೂರಪ್ಪ

ಈ ಹೊಸ ತಂತ್ರಾಂಶ ಸಿದ್ಧಪಡಿಸುವಲ್ಲಿ ನೆರವಾದ ನಂದನ್ ನಿಲೇಕಣಿ, ಐ-ಸ್ಪಿರಿಟ್ ಮತ್ತು ಫ್ರಾಕ್ಟಲ್ ಸಂಸ್ಥೆಗಳಿಗೆ ಹಾಗೂ ಸ್ವಯಂ ಮುಂದೆ ಬಂದ ಅನೇಕ ಐಟಿ ಪರಿಣಿತರಿಗೆ ಕೃತಜ್ಞತೆ ಸಲ್ಲಿಸಿದರು.

'ಈ ಹೊಸ ಸರತಿ ಸಾಲಿನ ವ್ಯವಸ್ಥೆಯು ಹಾಸಿಗೆ ಕಾಯ್ದಿರಿಸುವಿಕೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ನೆರವಾಗುತ್ತದೆ, ಇದು ಸಂಯೋಜಿತ ವ್ಯವಸ್ಥೆಯನ್ನು ಹೊಂದಿದ್ದು ಆಸ್ಪತ್ರೆ ಪ್ರವೇಶ ಪಡೆಯುವ ಎಲ್ಲ ರೋಗಿಗಳಿಗೆ ಸುಲಭವಾಗಿ ಲಭ್ಯವಾಗಲಿದೆ' ಎಂದು ಅವರು ತಿಳಿಸಿದರು.

'ಆಸ್ಪತ್ರೆಯ ಹಾಸಿಗೆ ಹಂಚಿಕೆ ಫಿಸಿಕಲ್ ಟ್ರಯಾಜಿಂಗ್ ಆಧರಿಸಿ ಮಾಡಲಾಗುವುದು,ಕ್ಯೂಯಿಂಗ್ ವ್ಯವಸ್ಥೆಯಿಂದ ಆಸ್ಪತ್ರೆ ಪ್ರವೇಶ ಪಡೆಯಲು ಬಯಸುವ ಎಲ್ಲಾ ರೋಗಿಗಳ ಟ್ರಯಾಜ್ ವಿವರಗಳನ್ನು ಎಲೆಕ್ಟ್ರಾನಿಕ್ ಪದ್ಧತಿ ಮೂಲಕ ದಾಖಲಿಸಲಾಗುತ್ತದೆ' ಎಂದರು.

'ಕ್ಲಿನಿಕಲ್ ಪರಿಸ್ಥಿತಿಗಳ ಆಧಾರದ ಮೇಲೆ ಸೊಂಕಿತರಿಗೆ ಆಸ್ಪತ್ರೆ / ಸಿಸಿಸಿ ಹಾಸಿಗೆ ಯನ್ನು ಶಿಫಾರಸು ಮಾಡಲಾಗುವುದು,ಈ ರೋಗಿಗಳಿಗೆ ನಿರ್ದಿಷ್ಟ ಹಾಸಿಗೆ ಮತ್ತು ವಲಯದ ಪ್ರಕಾರ ಕ್ಯೂ ಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ' ಎಂದು ಅವರು ವಿವರಿಸಿದರು.

Aravind Limbavali Launched New Queue System To Book Beds For Covid-19 Patients

ಕ್ಯೂನ ಕ್ರಮದಲ್ಲಿ ರೋಗಿಗಳ ಮೇಲೆ ಮಾತ್ರ ಕಾರ್ಯನಿರ್ವಹಿಸುವ ವಲಯ, ಅಗತ್ಯವಾದ ಹಾಸಿಗೆಯ ಪ್ರಕಾರದಲ್ಲಿ ಬದಲಾವಣೆಯ ಬೇಕಾದ ಸಂದರ್ಭದಲ್ಲಿ ರೋಗಿಯ ಮರು-ಕ್ಯೂ ಅಥವಾ ಅವರ ಮನೆಯ ಪ್ರತ್ಯೇಕತೆಯನ್ನು ಆರಿಸಿಕೊಳ್ಳುವಾಗ ಅಥವಾ ಖಾಸಗಿ ಪ್ರವೇಶ ಇತ್ಯಾದಿಗಳನ್ನು ಆಯ್ಕೆ ಮಾಡಲು ಆದ್ಯತೆ ನೀಡಿದಾಗ, ಅಂಥವರನ್ನು ಸರದಿ ಯಿಂದ ತೆಗೆದು ಹಾಕಬಹುದು ಎಂದು ಅವರು ಸ್ಪಷ್ಟಪಡಿಸಿದರು.

ವಿಶೇಷ ಆದ್ಯತೆ: ಪರಿಸ್ಥಿತಿ ಗಂಭೀರವಾಗಿರುವ ಸೋಂಕಿತರು ಹಾಗೂ ಮಕ್ಕಳ ಚಿಕಿತ್ಸೆ, (ಪೀಡಿಯಾಟ್ರಿಕ್ಸ್,) ಗರ್ಭಿಣಿಯರು, ಶುಶ್ರೂಷಾ ತಾಯಂದಿರು, ಕ್ಯಾನ್ಸರ್, ವಿಶೇಷ ರೋಗಪೀಡಿತರು ಮತ್ತು ವಿಕಲಚೇತನರು ಚಿಕಿತ್ಸೆಗೆ ಬಂದಂತಹ ವಿಶೇಷ ಸಂದರ್ಭಗಳಲ್ಲಿ ಅವರಿಗೆ ತಕ್ಷಣದಲ್ಲಿ ಚಿಕಿತ್ಸೆ ನೀಡಲು ಸೂಪರ್ ಯೂಸರ್ ಗೆ ರೆಫರ್ ಮಾಡಲು ಈ ಕ್ಯೂ ಸಿಸ್ಟಮ್ ನಲ್ಲಿ ಅವಕಾಶ ಇದ್ದು,ಇದು ತುರ್ತುಚಿಕಿತ್ಸೆ ಬೇಕಾಗಿರುವ ರೋಗಿಗಳಿಗೆ ಸಹಾಯಕಾರಿಯಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ವೈದ್ಯರ ಶಿಫಾರಸುಗಳ ಪ್ರಕಾರ ವಲಯ ಮಟ್ಟ ಮತ್ತು ಹಾಸಿಗೆಯ ಪ್ರಕಾರದ ಕ್ಯೂ ಸಂಖ್ಯೆ ರೋಗಿಗಳು ತಮ್ಮ ಬಿಯು ಸಂಖ್ಯೆಗಳು ಅಥವಾ ಎಸ್ ಆರ್ ಎಫ್ ಐಡಿಗಳನ್ನು ಬಳಸಿಕೊಂಡು ಸಾರ್ವಜನಿಕ ಡ್ಯಾಶ್‌ಬೋರ್ಡ್‌ನಲ್ಲಿ ನೈಜ ಸಮಯವನ್ನು ಟ್ರ್ಯಾಕ್ ಮಾಡಬಹುದು ಎಂದು ಅವರು ವಿವರಿಸಿದರು.

ಪ್ರಸ್ತುತ 8 ವಾರ್ ರೂಮ್ , 1912 ಮತ್ತು 108 ನಿಯಂತ್ರಣ ಕೊಠಡಿಗಳಿವೆ, ಇವೆಲ್ಲವೂ ರೋಗಿಗಳ ಪ್ರಶ್ನೆಗಳನ್ನು ಸ್ವೀಕರಿಸುತ್ತಿವೆ ಮತ್ತು ಮನವಿಗಳನ್ನು ನಿರ್ವಹಿಸುತ್ತಿವೆ. ಇವುಗಳನ್ನು ಪ್ರತಿದಿನ 50 ಕ್ಕೂ ಹೆಚ್ಚು ವೈದ್ಯರು ನೋಡಿಕೊಳ್ಳುತ್ತಾರೆ, ರೋಗಿಯು ಯಾವುದೇ ಮಾಧ್ಯಮದ ಮೂಲಕ ಹಾಸಿಗೆಯನ್ನು ಕೋರಿದರೆ, ಮತ್ತು ಒಮ್ಮೆ ಸಿ ಎಚ್ ಬಿ ಎಂ ಎಸ್ ನಲ್ಲಿ ಪರೀಕ್ಷೆಗೆ ಒಳಪಡಿಸಿದರೆ - ಸಿಸ್ಟಂನಲ್ಲಿರುವ ಪ್ರತಿಯೊಬ್ಬರೂ ಮತ್ತು ರೋಗಿಯು ಅವರ ಕ್ಯೂ ಸ್ಥಾನವನ್ನು ನೋಡಲು ಸಾಧ್ಯವಾಗುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಚಿವರೊಂದಿಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

   ಯಾವ್ಯಾವ ಜಿಲ್ಲೆಗಳು Unlock: ಹೊಸ ಮಾರ್ಗಸೂಚಿಯಲ್ಲೇನಿದೆ? | CM Yediyurappa | Oneindia Kannada

   ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, BBMP ವಾರ್ ರೂಮ್ ನಿರ್ವಹಣೆಯ ಹೊಣೆಹೊತ್ತಿರುವ ತುಷಾರ್ ಗಿರಿನಾಥ್, ವಿ ಪೊನ್ನುರಾಜ್, ಕುಮಾರ್ ಪುಷ್ಕರ್, ಬಿಸ್ವಜಿತ್ ಸಿಂಗ್, ವಿಶೇಷ ಆಯುಕ್ತ ರಣದೀಪ್ ಹಾಗು ಡಾ. ಭಾಸ್ಕರ್ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

   English summary
   Arvind Limbavali Launched the 'queue system' to book beds for Covid-19 patients using CHBMS software today at Arogya Soudha, Magadi Road.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X