ಉಡುಪಿ : ಅಬಕಾರಿ ಇಲಾಖೆಯಲ್ಲಿ ಡ್ರೈವರ್ ಕೆಲಸ ಖಾಲಿ ಇದೆ
ಉಡುಪಿ, ಫೆ.3 : ಉಡುಪಿ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 4 ವಾಹನ ಚಾಲಕರ (ಗ್ರೂಪ್ -ಸಿ) ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 24.
ಒಟ್ಟು ನಾಲ್ಕು ಹುದ್ದೆಗಳಿದ್ದು ಸಾಮಾನ್ಯ ಅಭ್ಯರ್ಥಿಗೆ 2, ಮಹಿಳೆಗೆ 1, ಪರಿಶಿಷ್ಟ ಪಂಗಡಕ್ಕೆ 1 ಮತ್ತು ಪ್ರವರ್ಗ -1 ರ ಅಭ್ಯರ್ಥಿಗಳಿಗೆ 1 ಹುದ್ದೆಗಳು ಮೀಸಲಾಗಿವೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35, ಪರಿಶಿಷ್ಟ ಪಂಗಡ/ಪ್ರವರ್ಗ -1ರ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 7ನೇ ತರಗತಿ ಉತ್ತೀರ್ಣರಾಗಿರಬೇಕು. 7ನೇ ತರಗತಿಗಿಂತ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವವರಿಗೂ ಆದ್ಯತೆ ನೀಡಲಾಗುತ್ತದೆ. [ನೇಮಕಾತಿ ಆದೇಶ ಇಲ್ಲಿದೆ ನೋಡಿ]
ಅರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಚಾಲ್ತಿಯಲ್ಲಿರುವ 4 ಚಕ್ರ ಮೋಟಾರ್ ವಾಹನದ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಪ್ರಥಮ ಚಿಕಿತ್ಸೆಯ ದೃಢೀಕೃತ ಪತ್ರವನ್ನು ಹೊಂದರಿತಕ್ಕದ್ದು. [ಉಡುಪಿಯಲ್ಲಿ ಫೆ.5ರಿಂದ ಉದ್ಯೋಗ ಮೇಳ]
ಅರ್ಜಿ ಶುಲ್ಕ 5 ರೂ., ಕ್ರಾಸ್ಡ್ ಇಂಡಿಯನ್ ಪೋಸ್ಟಲ್ ಆರ್ಡ್‌ರ್‌ಅನ್ನು ವಾಹನ ಚಾಲಕರ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಡೆಪ್ಯೂಟಿ ಕಮೀಷನರ್ ( ಅಬಕಾರಿ) ಉಡುಪಿ, ಉಡುಪಿ ಜಿಲ್ಲೆ ಇವರ ಹೆಸರಿನಲ್ಲಿ ಪಡೆಯತಕ್ಕದ್ದು. (ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ -1ರ ಅಭ್ಯರ್ಥಿಗಳಿಗೆ ಶುಲ್ಕ ವಿರುವುದಿಲ್ಲ).
ಅರ್ಜಿಯನ್ನು www.udupi.nic.in ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಫೆಬ್ರವರಿ 24ರ ಸಂಜೆ 5.30ರೊಳಗೆ ಕಳುಹಿಸಬೇಕಾಗಿದೆ.
ವಿಳಾಸ : Office of Deputy Commissioner of Excise, Abakari Bhavan, 1st Floor, Ajjarakadu, Udupi District, Udupi.












Click it and Unblock the Notifications