ಸಿಆರ್‌ಪಿಎಫ್‌ನಲ್ಲಿ 112 ಹುದ್ದೆಗಳಿಗಾಗಿ ನೇಮಕಾತಿ
ಬೆಂಗಳೂರು, ಡಿ.17 : ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಪುರುಷ ಹಾಗೂ ಮಹಿಳೆ ಸೇರಿದಂತೆ ಒಟ್ಟು 112 ಕಾನ್‌ಸ್ಟೆಬಲ್‌ಗಳ (ಟೆಕ್ ಮತ್ತು ಟ್ರೇಡ್ಸ್) ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 20.
ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು 21ರಿಂದ 27 ವರ್ಷದೊಳಗಿದ್ದು, 2 ವರ್ಷಗಳ ಐಟಿಐನಲ್ಲಿ ಉತ್ತೀರ್ಣರಾಗಿರಬೇಕು. ಪುರುಷರ ಅಭ್ಯರ್ಥಿಗಳ ಎತ್ತರ 170 ಸೆಂ.ಮೀ. ಮತ್ತು ಮಹಳಾ ಅಭ್ಯರ್ಥಿಗಳ ಎತ್ತರ 157 ಸೆಂ.ಮೀ. ಇರಬೇಕು. [ಉದ್ಯೋಗದ ಮಾಹಿತಿ ಇಲ್ಲಿದೆ ನೋಡಿ]

ಹುದ್ದೆಗಳು : ಪುರುಷರಿಗೆ ಡ್ರೈವರ್, ಫಿಟ್ಟರ್, ಬಗ್ಲರ್, ಟೈಲರ್, ಕಾಬ್ಲಿರ್, ಕಾರ್‌ಪೆಂಟರ್, ಪೈಂಟರ್, ಗಾರ್ಡನರ್, ಅಡುಗೆಯವರು, ಸಫಾಯಿ ಕರ್ಮಚಾರಿ ಮತ್ತು ಬಾರ್ಬರ್ ಸೇರಿದಂತೆ ಒಟ್ಟು 107 ಹುದ್ದೆಗಳಿವೆ. ಮಹಿಳೆಯರಿಗೆ ಕುಕ್, ಬಗ್ಲರ್, ಹೇರ್‌ಡ್ರೆಸರ್ ಮತ್ತು ಸಫಾಯಿ ಕರ್ಮಚಾರಿ ಸೇರಿ 5 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 20ರೊಳಗೆ ತಮ್ಮ ಅರ್ಜಿಯನ್ನು ದಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್, ಗ್ರೂಪ್ ಸೆಂಟರ್, ಸಿಆರ್‌ಪಿಎಫ್, ಬೆಂಗಳೂರು-64 ಅವರಿಗೆ ಸಲ್ಲಿಸಬೇಕಾಗಿದೆ. ಇವುಗಳನ್ನು ಓದಿ












Click it and Unblock the Notifications