ಆಸ್ತಿದಾರರಿಗೆ ಮತ್ತೊಂದು ಶಾಕ್: ಇ ಸ್ವತ್ತು ಪಡೆಯಲು ಹೊಸ ಪ್ರಮಾಣಪತ್ರ ಕಡ್ಡಾಯ!
ಕರ್ನಾಟಕ ಸರ್ಕಾರವು ಆಸ್ತಿಗೆ ಸಂಬಂಧಿಸಿದಂತೆ ರೂಪಿಸುತ್ತಿರುವ ಕಾನೂನು ಹಲವು ತೊಡಕುಗಳನ್ನು ಸೃಷ್ಟಿ ಮಾಡಿದೆ. ರಾಜ್ಯ ಸರ್ಕಾರವು ಇ ಖಾತಾ, ಬಿ ಖಾತಾ ಹಾಗೂ ಇ ಸ್ವತ್ತುಗಳಿಗೆ ಸಂಬಂಧಿಸಿದಂತೆ ಹೊಸ ಕಾನೂನುಗಳನ್ನು ರೂಪಿಸುತ್ತಿದೆ. ಇದು ಭಾರೀ ಸಂಕಷ್ಟಕ್ಕೆ ಕಾರಣವಾಗಿದೆ. ಇ ಸ್ವತ್ತು ವಿಚಾರದಲ್ಲಿ ಹೊಸ ಬದಲಾವಣೆಗಳನ್ನು ತಂದಿರುವುದು ಆಸ್ತಿದಾರರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಇದೀಗ ಬಿ ಖಾತಾ ಅವಧಿಯನ್ನು ವಿಸ್ತರಿಸಿದೆಯಾದರೂ ಅದರಕ್ಕೂ ತೊಡಕು ಎದುರಾಗಿದೆ. ಇದೀಗ ಇ ಸ್ವತ್ತು ಪಡೆಯುವುದಕ್ಕೆ ಮತ್ತೊಂದು ಪ್ರಮಾಣಪತ್ರವನ್ನು ಕಡ್ಡಾಯ ಮಾಡಲಾಗಿದೆ. ಇದರಿಂದ ಇ ಸ್ವತ್ತು ಪಡೆಯಲು ಸಮಸ್ಯೆ ಆಗುತ್ತಿದೆ.
ಇ-ಸ್ವತ್ತು ಮಾಡಲು- ಎನ್ಕಂಬರೆನ್ಸ್ (ENCUMBRANCE) ಪ್ರಮಾಣ ಪತ್ರ ಕಡ್ಡಾಯ ಮಾಡಲಾಗಿದೆ. ಆದರೆ ಇದರಿಂದ ಭಾರೀ ಸಮಸ್ಯೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದ ವಿವಿಧ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದನ್ನು ಕಡ್ಡಾಯ ಮಾಡಲಾಗಿದೆ. ಇದೀಗ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಮಾಡಲು ಇಲ್ಲ ಸಲ್ಲದ ದಾಖಲೆಗಳನ್ನು ಕೇಳುತ್ತಿದ್ದಾರೆ. ಈಗ ಋಣಭಾರ ಪ್ರಮಾಣ ಪತ್ರ ಬೇಕು ಎನ್ನುತ್ತಿದ್ದಾರೆ. ಇದನ್ನು ಕೂಡಲೆ ರದ್ದು ಮಾಡಲು ಮಹಾನಗರ ಪಾಲಿಕೆಗೆ ಹಾಗೂ ಸರಕಾರಕ್ಕೆ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಮಾಜಿ ಅಧ್ಯಕ್ಷ ಸುರೇಶ ಎಂ ಕಿರೇಸೂರ ಒತ್ತಾಯಿಸಿದ್ದಾರೆ.

ಇ-ಸ್ವತ್ತು ಮಾಡಲು ಮಹಾನಗರ ಪಾಲಿಕೆಯು ದಿನಕ್ಕೊಂದು ದಾಖಲೆ ಕೇಳುತ್ತಿದ್ದಾರೆ ಜನರು ಇ- ಸ್ವತ್ತು ಮಾಡಲು ಅಲೆದಾಡುತ್ತಿದ್ದಾರೆ. ಒಂದು ಎನ್ಕಂಬರೆನ್ಸ್ ಪ್ರಮಾಣ ಪತ್ರ ಪಡೆಯಲು ಸುಮಾರು 4-5 ದಿನಗಳು ಬೇಕು ಅಲ್ಲದೇ 500 ರಿಂದ 1000 ರೂಪಾಯಿ ಹಣ ಖರ್ಚು ಆಗುತ್ತದೆ. ಇದು ಜನರಿಗೆ ಹೊರೆಯಾಗುತ್ತದೆ.
ಇ-ಸ್ವತ್ತನ್ನು ಮಾಡಲು ಹಾಗೂ ಋಣಭಾರ ಪತ್ರಕ್ಕೆ ಏನು ಸಂಬಂಧ ತಿಳಿಯತ್ತಿಲ್ಲ. ಈ ಎನ್ಕಂಬರೆನ್ಸ್ ಪ್ರಮಾಣ ಪತ್ರ ಖರೀದಿ ಮಾಡಲು ಹಾಗೂ ಮಾರಾಟ ಮಾಡಲು ಮಾತ್ರ ಅವಶ್ಯವಿದೆ ಅಥವಾ ಬ್ಯಾಂಕ ಸಾಲಕ್ಕೆ ಬೇಕಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಪ್ರತಿ ಸಲ ಒಂದೊಂದು ದಾಖಲೆ ಬೇಕು, ಎಂದು ಜನರನ್ನು ಅಲೆದಾಡಿಸುತ್ತಿದ್ದಾರೆ ಈ ಹಿಂದೆ ಈ ಪ್ರಮಾಣ ಪತ್ರ ಕೇಳುತ್ತಿದ್ದಿಲ್ಲ, ಈಗ ಏಕೆ ಎಂದು ಅವರು ಪ್ರಶ್ನೆ ಮಾಡಿರುವ ಅವರು, ಇ-ಸ್ವತ್ತು ಮಾಡಲು ಎನ್ಕಂಬರೆನ್ಸ್ ಪ್ರಮಾಣ ಪತ್ರ ಕಡ್ಡಾಯ ರದ್ದತಿ ಮಾಡಬೇಕೆಂದು ಮಹಾನಗರ ಪಾಲಿಕೆ ಒತ್ತಾಯಿಸಿದ್ದಾರೆ.
ಇ - ಸ್ವತ್ತು: ಇನ್ನು ಗ್ರಾಮೀಣ ಪ್ರದೇಶದಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ನೀಡುವುದಕ್ಕೆ ಕರಡು ನಿಯಮಾವಳಿ ಮಾಡಲಾಗುತ್ತಿದೆ. ಇದು ಜುಲೈ ಒಳಗೆ ಪೂರ್ಣಗೊಳ್ಳಲಿದೆ. ಜುಲೈ ಎರಡನೆಯ ವಾರದಲ್ಲಿ ಅಂತಿಮ ನಿಯಮಾವಳಿ ಪ್ರಕಟಿಸಲಾಗುವುದು.ಇದಾದ ನಂತರ ಇ-ಸ್ವತ್ತು ವಿತರಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.












Click it and Unblock the Notifications