"ಇದು ಕಾಂಗ್ರೆಸ್‌ನ ಮತ್ತೊಂದು ಗ್ಯಾರಂಟಿ!"
ಬೆಂಗಳೂರು, ನವೆಂಬರ್ 12: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ರಾಜಾತಿಥ್ಯ ವಿಡಿಯೋ ವೈರಲ್ ಆಗಿದೆ. ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಮಾತೆತ್ತಿದ್ರೆ ಗ್ಯಾರಂಟಿ ಅಂತಾರೆ, ಕೈದಿಗಳ ಮೋಜು-ಮಸ್ತಿಗೆ ಕಾಂಗ್ರೆಸ್ ಮತ್ತೊಂದು ಗ್ಯಾರಂಟಿ ಕೊಟ್ಟಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮಾಧ್ಯಮಗಳ ಜೊತೆಗೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ರಾಜ್ಯಕ್ಕೆ ಕುಮಾರಣ್ಣ ಅನಿವಾರ್ಯ. ಅವರ ನಾಯಕತ್ವ ಎಲ್ಲರೂ ಒಪ್ಪಿದ್ದಾರೆ. ರಾಜ್ಯಕ್ಕೆ ಕುಮಾರಣ್ಣನ ನಾಯಕತ್ವ ಬೇಕು ಅಂತ ರಾಜ್ಯದ ಜನ ಚರ್ಚೆ ಮಾಡ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು. ನನ್ನ ರಾಜ್ಯ ಪ್ರವಾಸದ ವೇಳೆ ಜೆಡಿಎಸ್ ಬಿಜೆಪಿ ಕಾರ್ಯಕರ್ತರಲ್ಲಿ ಒಳ್ಳೆಯ ಭಾವನೆಯಿದೆ. ರಾಜ್ಯಕ್ಕೆ ಕುಮಾರಣ್ಣನ ನಾಯಕತ್ವ ಬೇಕು ಅಂತ ಜನತೆ ಬೀದಿ ಬೀದಿಯಲ್ಲಿ ಚರ್ಚೆ ಮಾಡ್ತಿದ್ದಾರೆ ಎಂದು ನಿಖಿಲ್ ಅವರು ಹೇಳಿದರು.

ದೆಹಲಿ ಬಾಂಬ್ ಸ್ಫೋಟದಲ್ಲಿ ಯಾರೇ ಭಾಗಿಯಾಗಿದ್ರು ತನಿಖೆ ಮೂಲಕ ಸತ್ಯ ಸತ್ಯಯನ್ನ ಹೊರಗಡೆ ತಂದು ಕಠಿಣ ಶಿಕ್ಷೆಗೆ ವಿಧಿಸಬೇಕು. ಇದೊಂದು ಅತ್ಯಂತ ನೋವಿನ ಸಂಗತಿ. ಅನೇಕ ಸಾವು ನೋವಾಗಿದೆ. ಮೃತರ ಕುಟುಂಬಸ್ಥರಿಗೆ ಆ ನೋವನ್ನ ಭರಿಸುವಂತ ಶಕ್ತಿ ಕೊಡಲಿ ಎಂದು ನಿಖಿಲ್ ಅವರು ಸಂತಾಪ ವ್ಯಕ್ತ ಪಡಿಸಿದರು.
ಬಿಜೆಪಿ ಜೆಡಿಎಸ್ ಮೈತ್ರಿ ಗಟ್ಟಿಯಾಗಿ ಮುಂದುವರಿಯುತ್ತೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಗಟ್ಟಿಯಾಗಿ ನೆಲೆಯೂರಿದೆ. ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಮೈತ್ರಿಯಾಗಿ ಯಾವ ರೀತಿ ಹೋಗಬೇಕೆಂದು ಅತೀ ಶೀಘ್ರದಲ್ಲಿ ಎರಡು ಪಕ್ಷದ ಸಮಿತಿ ಯನ್ನ ರಚನೆ ಮಾಡಿ, ಯಾವ ರೀತಿ ನಮ್ಮ ಮೈತ್ರಿಯನ್ನ ಬಲಪಡಿಸಬೇಕೆಂದು ಎರಡು ಪಕ್ಷದ ನಾಯಕರು ಚರ್ಚೆ ಮಾಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಅನುದಾನದಲ್ಲಿ ತಾರತಮ್ಯ ಹೈಕೋರ್ಟ್ ಮೊರೆ ಹೋದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ವಿಚಾರಕ್ಕೆ ಮಾತನಾಡಿದ ಅವರು. ಇದು ಜೆಡಿಎಸ್ ಬಿಜೆಪಿ ಶಾಸಕರ ಕಥೆಯಲ್ಲ, ಕಾಂಗ್ರೆಸ್ ಶಾಸಕರ ಸ್ಥಿತಿಯು ಚಿಂತಾಜನಕವಾಗಿದೆ ಎಂದು ವಾಗ್ದಾಳಿ ನಡೆಸಿದರು. ನವೆಂಬರ್ ಕ್ರಾಂತಿ ಮಾರ್ಚ್ ವರೆಗೂ ಹೋಗುತ್ತಾ.? ಬಿಹಾರ ಚುನಾವಣೆ ಮುಗಿದ್ಮೇಲೆ ಹೊಸ ಕ್ರಾಂತಿ ಬರುತ್ತೊ, ಯಾರು ಕುರ್ಚಿ ಉಳಿಸಿಕೊಳ್ಳುತ್ತಾರೋ, ಯಾರು ಬಿಡ್ತಾರೋ, ಯಾರು ಕಿತ್ತು ಕೊಳ್ಳುತ್ತಾರೋ ಕಾದು ನೋಡಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ಅನುದಾನ ವಿಚಾರದಲ್ಲಿ ಸಿಎಂ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಅನುದಾನ ವಿಚಾರಕ್ಕೆ ಶ್ವೇತಾ ಪತ್ರ ಹೊರಡಿಸಲು ರೆಡಿ ಇದ್ದೇವೆ. ಕುಮಾರಣ್ಣ ರೈತರ ಸಾಲ ಮನ್ನಾ ಮಾಡಿದರು. ಕುಮಾರಣ್ಣ ಅವರ ಆಡಳಿತದಲ್ಲಿ ಅಭಿವೃದ್ಧಿ ಯಾವತ್ತು ಕುಂಠಿತವಾಗಿಲ್ಲ. ಆ ಪಕ್ಷ ಈ ಪಕ್ಷ ಅಂತ ತಾರತಮ್ಯ ಮಾಡಿದಿರಾ ಕುಮಾರಣ್ಣ ಎಲ್ಲಾ ಶಾಸಕರಿಗೂ ಸರಿಸಾಮವಾಗಿ ಅನುದಾನ ಬಿಡುಗಡೆ ಮಾಡಿದರು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.












Click it and Unblock the Notifications