ಜ್ಯೋತಿಷಿಗಳ ಸಲಹೆಯಂತೆ ಜ.15ಕ್ಕೆ ಅಸ್ನೋಟಿಕರ್ ಜೆಡಿಎಸ್‌ಗೆ!

Posted By: ಕಾರವಾರ ಪ್ರತಿನಿಧಿ
Subscribe to Oneindia Kannada

ಕಾರವಾರ, ಜನವರಿ 14 : ಮಾಜಿ ಸಚಿವ ಆನಂದ್‌ ಅಸ್ನೋಟಿಕರ್ ಅವರಿಗೆ ದೇವರು, ಜ್ಯೋತಿಷ್ಯ, ಜಾತಕಗಳ ಮೇಲೆ ಭಾರೀ ನಂಬಿಕೆ ಎಂಬ ಗುಮಾನಿ ಕ್ಷೇತ್ರದಲ್ಲಿತ್ತು. ಆದರೆ, ಈಗ ಅದು ನಿಜ ಎಂಬುದು ಸಾಬೀತಾಗಿದೆ.

ಮಾಜಿ ಸಚಿವ ಹಾಗೂ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರುವುದು ಖಚಿತವಾಗಿದೆ. ಹೌದು, ಅವರು ಪಕ್ಷ ಸೇರಲು ಪುರೋಹಿತರು ಮುಹೂರ್ತ ನಿಗದಿ ಮಾಡಿಕೊಟ್ಟಿದ್ದಾರೆ.

ಕಾರವಾರದ ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರ್ಪಡೆ ಖಚಿತ, ಇದು ಅಧಿಕೃತ

ನಿಗದಿತ ಮುಹೂರ್ತದಂತೆ ಜ.15ರ ಸೋಮವಾರ ಬೆಂಗಳೂರಿನಲ್ಲಿ ಆನಂದ್ ಅಸ್ನೋಟಿಕರ್ ಎಚ್‌.ಡಿ.ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರಿದ್ದಾರೆ.

Anand Asnotikar will join JDS on January 15

ಆನಂದ್ ಅಸ್ನೋಟಿಕರ್ ಹೇಳಿದ್ದೇನು? : 'ಬೆಂಬಲಿಗರ ಹಾಗೂ ಕುಟುಂಬದ ಪುರೋಹಿತರ ಸಲಹೆಯಂತೆ, ಬೆಂಗಳೂರಿನಲ್ಲಿ ಜ.15ರಂದು ಬೆಳಗ್ಗೆ 11.30 ಕ್ಕೆ ವಿದ್ಯುಕ್ತವಾಗಿ ಜೆಡಿಎಸ್ ಗೆ ಸೇರ್ಪಡೆಯಾಗುತ್ತೇನೆ' ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ಅಸ್ನೋಟಿಕರ್ ಸವಾರಿ ಯಾವ ಪಕ್ಷದತ್ತ

'ಕಾರವಾರದಲ್ಲಿ ಜ.20 ರಂದು ಬೆಳಗ್ಗೆ 10 ಕ್ಕೆ ಕೋಡಿಬಾಗದ ಮಾರುತಿ ದೇವಸ್ಥಾನದಿಂದ ನಗರಕ್ಕೆ ಬೆಂಬಲಿಗರ ಬೈಕ್‌ ಜಾಥಾ ನಡೆಸುತ್ತೇನೆ‌. ಅದೇ ದಿನ ಅಂಕೋಲಾದಲ್ಲಿ ಮಧ್ಯಾಹ್ನ 3.30 ಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದೇನೆ. ಎರಡೂ ಕಾರ್ಯಕ್ರಮಗಳಲ್ಲಿ ಜೆಡಿಎಸ್‌ನ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಭಾಗವಹಿಸುವರು' ಎಂದು ತಿಳಿಸಿದ್ದಾರೆ.

ಕಳೆದ ನಾಲ್ಕೂವರೆ ವರ್ಷಗಳಿಂದ ಆನಂದ್ ಅಸ್ನೋಟಿಕರ್ ಅವರು ರಾಜಕೀಯ ಹಾಗೂ ಸಾರ್ವಜನಿಕ ಜೀವನದಿಂದ ದೂರ ಉಳಿಯೋಕು ಕೂಡ ಈ ನಂಬಿಕೆಗಳೆ ಕಾರಣವಂತೆ.

ಸಂಕ್ರಾಂತಿ ವಿಶೇಷ ಪುಟ

ಈ ಬಗ್ಗೆ ಅವರೇ ಹೇಳಿಕೊಂಡಿದ್ದರು. "ನನಗೆ ಸಾಡೇ ಸಾತ್ ಇದೆ" ಅಂತ ಅವರೇ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದರು. ಈ ಬಗ್ಗೆ ಶಿರಸಿಯ ಜ್ಯೋತಿಷಿಯೊಬ್ಬರ ಬಳಿ ತಮ್ಮ ಮುಂದಿನ ನಡೆಗಳ ಬಗ್ಗೆ ಕೂಡ ತಿಳಿದುಕೊಂಡಿದ್ದರಂತೆ.

ಇದೀಗ ಅದೇ ಸಂಪ್ರದಾಯ, ನಂಬಿಕೆಗಳು ಮುಂಬರುವ ವಿಧಾನಸಭಾ ಚುನಾವಣೆಗೂ ವರ್ಕೌಟ್ ಆಗುತ್ತಾ ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After getting advice from astrologer Former minister Anand Asnotikar announced that he will join JDS on January 15, 2018 in the presence of party state president H.D.Kumaraswamy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ