• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಡುಪಿ ಬಿಜೆಪಿ ಶಾಸಕ ಕೆ ರಘುಪತಿ ಭಟ್ ಸಂದರ್ಶನ

By ಬಾಲರಾಜ್ ತಂತ್ರಿ
|
   ಉಡುಪಿ ಬಿಜೆಪಿ ಶಾಸಕ ಕೆ ರಘುಪತಿ ಭಟ್ ಸಂದರ್ಶನ | Oneindia Kannada

   ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಐದಕ್ಕೆ ಐದೂ ಕ್ಷೇತ್ರಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿತ್ತು. ಆ ಮೂಲಕ, ಬಿಜೆಪಿ ಭರ್ಜರಿಯಾಗಿ ತನ್ನ ಕೋಟೆಯನ್ನು ಮರುವಶ ಮಾಡಿಕೊಂಡಿತ್ತು.

   ಕಾರ್ಕಳ ಮತ್ತು ಕುಂದಾಪುರದಲ್ಲಿ ಬಿಜೆಪಿಗೆ ನಿರಾಯಾಸ ಗೆಲುವು, ಇನ್ನುಳಿದ ಉಡುಪಿ, ಬೈಂದೂರು ಮತ್ತು ಕಾಪು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಇರಲಿದೆ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಆದರೆ, ಈ ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆದು ಬಿಜೆಪಿ ಎಲ್ಲಾ ಕ್ಷೇತ್ರದಲ್ಲಿ ಜಯಗಳಿಸಿತ್ತು.

   ಕೊನೆಯ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ರಘುಪತಿ ಭಟ್, ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು 12,044 ಮತಗಳ ಅಂತರದಿಂದ ಸೋಲಿಸಿ ಮತ್ತೆ ವಿಧಾನಸಭೆಗೆ ಆಯ್ಕೆಯಾಗಿದ್ದರು.

   ಉಪನಿಷತ್, ವೇದಾಂತ ಮೆಚ್ಚುವ ನನ್ನ ಮೇಲೇಕೆ ಸಿಟ್ಟು?: ಭಗವಾನ್ ಸಂದರ್ಶನ

   ಬಜೆಟ್ ನಲ್ಲಿ ಕರಾವಳಿ ನಿರ್ಲಕ್ಷ್ಯ, ಉಡುಪಿ ಅಷ್ಟಮಠ, ಹಲಸಿನ ಹಣ್ಣಿನ ವಿಚಾರದಲ್ಲಿ ತಾವು ನೀಡಿದ ಹೇಳಿಕೆ ಟ್ರೋಲ್ ಆಗಿದ್ದು, ಈ ಎಲ್ಲಾ ವಿಚಾರದ ಬಗ್ಗೆ ಉಡುಪಿ ಶಾಸಕ ಕೆ ರಘುಪತಿ ಭಟ್, 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಆಯ್ದಭಾಗ ಇಂತಿದೆ:

   ಪ್ರ: ಬಜೆಟ್ ನಲ್ಲಿ ಕರಾವಳಿ ನಿರ್ಲಕ್ಷ್ಯ ಎನ್ನುವ ಆ ಭಾಗದ ಶಾಸಕರ ಟೀಕೆಗೆ, ಕನ್ನಡ ಬರೋಲ್ವಾ ಅಂದಿದ್ದಾರಲ್ಲಾ ಸಿಎಂ?
   ಭಟ್: ನಮಗೆ ಕನ್ನಡವೂ ಬರುತ್ತೆ, ಇಂಗ್ಲಿಷ್ ಕೂಡಾ ಬರುತ್ತೆ. ಹಿಂದಿನ ಸರಕಾರದ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ. ಮೀನುಗಾರರಿಗೆ ಹಿಂದಿನ ಬಜೆಟಿನಲ್ಲಿ ಕೊಟ್ಟದ್ದು ಸಾಕಾಗುವುದಿಲ್ಲ ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದೇವೆ. ಮೀನುಗಾರರ ಡೀಸೆಲ್ ಮೇಲೆ ಸಬ್ಸಿಡಿಯನ್ನು ಎರಡು ಲಕ್ಷಕ್ಕೆ ಏರಿಸಬೇಕೆಂದು ವಿನಂತಿಸಿಕೊಂಡಿದ್ದೆವು.

   350 ಎಚ್ಪಿಗೂ ಹೆಚ್ಚು ಇಂಜಿನ್ ಗಳು ಇರುವಾಗ ಪ್ರತೀದಿನ ಅದರೆ ಮೊತ್ತವನ್ನು ಹೆಚ್ಚಿಸಬೇಕು ಎಂದು ಕೇಳಿಕೊಂಡಿದ್ದೆವು. ಸಾಲಮನ್ನಾವನ್ನು ಮೀನುಗಾರ ಮಹಿಳೆಯರಿಗೂ ವಿಸ್ತರಿಸಬೇಕು. ನಮಗೆ ಬೇಸರವೇನೆಂದರೆ, ಎಲ್ಲಾ ಜಿಲ್ಲೆಗಳಿಗೆ ಸ್ವಲ್ಪವಾದರೂ ಕೊಟ್ಟಿದ್ದಾರೆ, ಕರಾವಳಿಯ ಬಗ್ಗೆ ಬಜೆಟಿನಲ್ಲಿ ಉಲ್ಲೇಖವನ್ನೂ ಮಾಡಿಲ್ಲ.

    ಸಿಎಂ ಅವರಿಂದ ಖಚಿತ ಭರವಸೆ ಏನಾದರೂ ಸಿಕ್ಕಿತ್ತಾ?

   ಸಿಎಂ ಅವರಿಂದ ಖಚಿತ ಭರವಸೆ ಏನಾದರೂ ಸಿಕ್ಕಿತ್ತಾ?

   ಪ್ರ: ಮೀನುಗಾರರ ಸಾಲಮನ್ನಾ ವಿಚಾರದಲ್ಲಿ ಸಿಎಂ ಅವರಿಂದ ಖಚಿತ ಭರವಸೆ ಏನಾದರೂ ಸಿಕ್ಕಿತ್ತಾ?
   ಭಟ್: ಇದರ ಬಗ್ಗೆ ಪರಿಶೀಲಿಸುತ್ತೇನೆಂದು ಮುಖ್ಯಮಂತ್ರಿಗಳು ಹೇಳಿದ್ದರು. ಬಡ್ಡಿಮನ್ನಾವನ್ನು ಯಡಿಯೂರಪ್ಪನವರ ಅವಧಿಯಲ್ಲಿ ಮೀನುಗಾರರಿಗೂ ವಿಸ್ತಾರ ಮಾಡಿದ್ದರು. ಪ್ರಮುಖವಾಗಿ ಮಹಿಳಾ ಮೀನುಗಾರರ ಸಾಲದ ಬಡ್ಡಿಮನ್ನಾ ಕೆಲಸ ನಿಮ್ಮ ಸರಕಾರದಿಂದ ಆಗಬೇಕು ಎಂದು ಮನವಿ ಮಾಡಿದ್ದೇವೆ.

   ಉಡುಪಿ ಬಿಜೆಪಿ ಶಾಸಕ ಕೆ ರಘುಪತಿ ಭಟ್ ಸಂದರ್ಶನ

   ಉಡುಪಿ ಬಿಜೆಪಿ ಶಾಸಕ ಕೆ ರಘುಪತಿ ಭಟ್ ಸಂದರ್ಶನ

   ಪ್ರ: ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಸಾಧನೆ, ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ಆಗುತ್ತಾ?
   ಭಟ್: ಮುಂದಿನ ಚುನಾವಣೆಯಲ್ಲೂ ಇದೇ ಫಲಿತಾಂಶ ಬರುತ್ತದೆ. ಮೋದಿಯವರ ನಾಯಕತ್ವದ ಮೇಲೆ ಕರಾವಳಿ ಭಾಗದ ಜನರಿಗೆ ಭಾರೀ ನಂಬಿಕೆಯಿದೆ. ಅದೇ ನಂಬಿಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಂದುವರಿಯಲಿದೆ. ಜನರು ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ.

   ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ಪ್ಲ್ಯಾನ್ ಇದೆಯಾ?

   ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ಪ್ಲ್ಯಾನ್ ಇದೆಯಾ?

   ಪ್ರ: ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ಪ್ಲ್ಯಾನ್ ಇದೆಯಾ?
   ಭಟ್: ಅವರು ಬರುವ ಪ್ರಯತ್ನ ಮಾಡುತ್ತಿರಬಹುದು, ಅದರೆ ಬಗ್ಗೆ ನನಗೆ ಸ್ಪಷ್ಟನೆಯಿಲ್ಲ. ಹಿಂದೆಯೂ ಈ ರೀತಿಯ ಸುದ್ದಿಗಳು ಹರಿದಾಡುತ್ತಿದ್ದವು. ನಮ್ಮ ಪಕ್ಷದ ವಲಯದಲ್ಲಿ ಅವರು ಬಿಜೆಪಿ ಸೇರುವ ಬಗ್ಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ. ಅವರು ಬರುವ ಅವಶ್ಯಕತೆಯೂ ನಮಗೆ ಕಾಣುತ್ತಿಲ್ಲ. ಅವರಲ್ಲಿ ಅಂತಾ ದೊಡ್ಡ ನಾಯಕತ್ವದ ಗುಣವೂ ಇಲ್ಲ. ಹಾಗಾಗಿ ಅವರನ್ನು ಬಿಜೆಪಿಗೆ ಸೇರಿಸುವ ಪ್ರಯತ್ನ ನಮ್ಮ ಕಡೆಯಿಂದ ಆಗುವುದಿಲ್ಲ.

   ಅಷ್ಟಮಠಗಳ ಸಹಕಾರ ಎಷ್ಟರ ಮಟ್ಟಿಗೆ ನಿಮಗೆ ಸಿಗುತ್ತಿದೆ?

   ಅಷ್ಟಮಠಗಳ ಸಹಕಾರ ಎಷ್ಟರ ಮಟ್ಟಿಗೆ ನಿಮಗೆ ಸಿಗುತ್ತಿದೆ?

   ಪ್ರ: ಉಡುಪಿಯ ಅಷ್ಟಮಠಗಳ ಸಹಕಾರ ಎಷ್ಟರ ಮಟ್ಟಿಗೆ ನಿಮಗೆ ಸಿಗುತ್ತಿದೆ? ಶಿರೂರು ಶ್ರೀಗಳ ಬಗ್ಗೆ?
   ಭಟ್: ನಾವು ಅಷ್ಟಮಠಗಳ ನೆರಳಿನಲ್ಲೇ ಬೆಳೆದವರು, ಅಷ್ಟಮಠದವರು ಯಾವುದೇ ರಾಜಕೀಯಕ್ಕೆ ತಲೆಹಾಕುವುದಿಲ್ಲ. ಎಲ್ಲರಿಗೂ ಆಶೀರ್ವಾದ ಮಾಡುತ್ತಾರೆ, ನಾವು ಕೃಷ್ಣಮುಖ್ಯಪ್ರಾಣ, ಅಷ್ಟಮಠದ ಯತಿಗಳ ಆಶೀರ್ವಾದ ಪಡೆದುಕೊಂಡೇ, ವ್ಯಾವಹಾರಿಕವಾಗಿ ಮತ್ತು ರಾಜಕೀಯದಲ್ಲಿ ಮೇಲೆ ಬಂದವರು.

   ಶಿರೂರು ಶ್ರೀಗಳು ಬೇರೆ ನಿಲುವು ಹೊಂದಿರುವಂತವರು. ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ, ಅವರಿಂದಲೂ ಸಹಕಾರ ಪಡೆದುಕೊಂಡಿದ್ದೇನೆ.

   ರಾಜಕೀಯದಲ್ಲಿ ನಿಮಗೆ ಬೇಸರ ತಂದಿತ್ತಾ?

   ರಾಜಕೀಯದಲ್ಲಿ ನಿಮಗೆ ಬೇಸರ ತಂದಿತ್ತಾ?

   ಪ್ರ: ಬಿಎಸ್ವೈ ವಿಶ್ವಾಸಮತಯಾಚನೆಯ ಸುತ್ತಮುತ್ತ ನಡೆದ ರಾಜಕೀಯ ಪ್ರಹಸನ, ರಾಜಕೀಯದಲ್ಲಿ ನಿಮಗೆ ಬೇಸರ ತಂದಿತ್ತಾ?
   ಭಟ್: ಯಡಿಯೂರಪ್ಪನವರು ಮಾಡಿದ್ದು ಸರಿಯಾಗಿಯೇ ಇದೆ. 104ಕ್ಷೇತ್ರವನ್ನು ಗೆದ್ದು, ಅಧಿಕಾರಕ್ಕೆ ಪ್ರಯತ್ನ ಮಾಡದೇ ಇದ್ದಿದ್ದರೆ, ಈ ರಾಜ್ಯದ ಜನತೆ, ಏಳೆಂಟು ಸ್ಥಾನಕ್ಕೆ ಪ್ರಯತ್ನವನ್ನೇ ಮಾಡಿಲ್ಲ ಎಂದು ಆಡಿಕೊಳ್ಳುತ್ತಿದ್ದರು. ನಮ್ಮ ಪ್ರಯತ್ನವನ್ನು ನಾವು ಮಾಡಿದ್ದೆವು, ಅವರು ಅಡ್ಡದಾರಿ ಹಿಡಿದಿರಲಿಲ್ಲ. ವಾಜಪೇಯಿಯವರು ರಾಜಧರ್ಮ ಈ ಹಿಂದೆ ಹೇಗೆ ಪಾಲಿಸಿದ್ದರೋ, ಅದನ್ನೇ ಯಡಿಯೂರಪ್ಪನವರು ಮಾಡಿದ್ದಾರೆ.

   ಹಲಸಿನ ಹಣ್ಣು ತಿಂದರೆ ಏಡ್ಸ್ ಬರುವುದಿಲ್ಲ

   ಹಲಸಿನ ಹಣ್ಣು ತಿಂದರೆ ಏಡ್ಸ್ ಬರುವುದಿಲ್ಲ

   ಪ್ರ: ಹಲಸಿನ ಹಣ್ಣು ತಿಂದರೆ ಏಡ್ಸ್ ಬರುವುದಿಲ್ಲ ಎನ್ನುವ ನಿಮ್ಮ ಹೇಳಿಕೆಯನ್ನು ತಿರುಚಲಾಗಿತ್ತಾ?
   ಭಟ್: ನನ್ನ ಹೇಳಿಕೆಯ ವಿಡಿಯೋವನ್ನು ನೋಡಿದಂತವರಿಗೆ ಅದಕ್ಕೆ ಸರಿಯಾದ ಉತ್ತರ ಸಿಗುತ್ತದೆ. ಹಲಸಿನ ಹಣ್ಣು ತಿಂದರೆ ಏಡ್ಸ್ ಬರುವುದಿಲ್ಲ ಎನ್ನುವುದು ಸತ್ಯವೋ ಸುಳ್ಳೋ ಗೊತ್ತಿಲ್ಲ ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದೇನೆ. ಹಲಸಿನ ಹಣ್ಣಿಗೆ ಪ್ರಚಾರ ಆಗಲಿ ಎನ್ನುವುದು ನನ್ನ ಉದ್ದೇಶವಾಗಿತ್ತು.

   ಏಡ್ಸಿಗೆ ಹಲಸಿನ ಹಣ್ಣು ಮದ್ದು ಎಂದು ನಾನೆಲ್ಲೂ ಹೇಳಿಲ್ಲ. ಹಿಂದೆ ಈ ಮಾತುಗಳು ಇದ್ದವು, ಆದರೆ ವೈಜ್ಞಾನಿಕವಾಗಿ ನಾನು ಹೇಳಿದ್ದಲ್ಲ. ಹಲಸಿನ ಹಣ್ಣಿಗೆ ಪ್ರಚಾರ ಸಿಗಬೇಕಾಗಿತ್ತು, ನನ್ನ ಹೇಳಿಕೆಯಿಂದ ಅದು ಸಿಕ್ಕಿದೆ.

   ಉಡುಪಿ ಅಭಿವೃದ್ದಿ ಏನೇನು ಕನಸು ಕಟ್ಟಿಕೊಂಡಿದ್ದೀರಾ?

   ಉಡುಪಿ ಅಭಿವೃದ್ದಿ ಏನೇನು ಕನಸು ಕಟ್ಟಿಕೊಂಡಿದ್ದೀರಾ?

   ಪ್ರ: ಐದು ವರ್ಷದ ಅವಧಿಯಲ್ಲಿ ಉಡುಪಿ ಅಭಿವೃದ್ದಿ ಏನೇನು ಕನಸು ಕಟ್ಟಿಕೊಂಡಿದ್ದೀರಾ?
   ಭಟ್: ಇಲ್ಲಿನ ಪ್ರಮುಖ ಸಮಸ್ಯೆ ಮೂಲಭೂತ ಸೌಕರ್ಯಗಳು. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಬಹಳವಾಗಿದೆ. ವಾರಾಹಿ ಮುಂತಾದ ಯೋಜನೆಗಳನ್ನು ಅನುಷ್ಟಾನ ಮಾಡಬೇಕಾಗಿದೆ. ಉದ್ಯೋಗವಕಾಶವನ್ನೂ ಸೃಷ್ಟಿಸಬೇಕಾಗಿದೆ.

   ಚೀನಾದ ಮಾದರಿಯಲ್ಲಿ ಕೆಲವು ಯೋಜನೆಗಳನ್ನು ತರುವ ಬಗ್ಗೆ ಸಿಎಂ ಮಾತನ್ನಾಡಿದ್ದಾರೆ. ಫರ್ನಿಚರ್ ತಯಾರಿಕಾ ಘಟಕವನ್ನು ಉಡುಪಿ ಜಿಲ್ಲೆಯಲ್ಲಿ ತರುವ ಪ್ರಯತ್ನವನ್ನು ಮಾಡಬೇಕಾಗಿದೆ. ಅದಕ್ಕೆ ಬೇಕಾದ ಎಲ್ಲಾ ಸವಲತ್ತುಗಳು ನಮ್ಮಲ್ಲಿವೆ. ನಮ್ಮ ಸಲಹೆಗಳನ್ನು ಸರಕಾರಕ್ಕೆ ನೀಡುತ್ತೇವೆ.

   ಕಡಲ್ಕೊರೆತಕ್ಕೆ ಶಾಸ್ವತ ತಡೆಗೋಡೆಯನ್ನು ಹಾಕುವ ಬಗ್ಗೆ ಪ್ರಸ್ತಾವನೆ ನೀಡಿದ್ದೇವೆ. ಈಗಾಗಲೇ ಕೇಂದ್ರ ಸರಕಾರದ ಎಡಿಬಿ ಫಂಡ್ ಮೂಲಕ ಆ ಕೆಲಸವನ್ನು ಮಾಡಲಾಗುತ್ತಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   An exclusive interview with Udupi BJP MLA K Raghupati Bhat. During his interview Raghupati Bhat said, I never said jack fruit is the solution to Aids disease. During in my term, I have lot of plans to improve my constituency.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more