ಯಡಿಯೂರಪ್ಪ ಸಿಎಂ ಆದ ಮೇಲೆ, ವಿಧಾನಸೌಧದಲ್ಲಿ ದರಿದ್ರ ಲಕ್ಷೀ ಓಡಾಡುತ್ತಿದೆ
ರಾಜ್ಯ ರಾಜಕಾರಿಣಿಗಳ ಪೈಕಿ ಸದ್ಯ ಚರ್ಚೆಯಲ್ಲಿರುವ ಹೆಸರು ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ, ಮಾಜಿ ಕೇಂದ್ರ ಸಚಿವ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಅವರದ್ದು.
ಇದಕ್ಕೆ ಕಾರಣ, ಕಾಂಗ್ರೆಸ್ ಪಕ್ಷದಿಂದ ಇಬ್ರಾಹಿಂ ಈಗಾಗಲೇ ಒಂದು ಕಾಲು ಹೊರಗಿಟ್ಟಿರುವುದು ಮತ್ತು ಜೆಡಿಎಸ್ ಪಕ್ಷಕ್ಕೆ ಹತ್ತಿರವಾಗುತ್ತಿರುವುದು. ಈ ಸಂಬಂಧ ತಮ್ಮ ಅಭಿಮಾನಿಗಳ ಅಭಿಪ್ರಾಯವನ್ನು ಕೇಳಲು ಇಬ್ರಾಹಿಂ ಐದಾರು ಜಿಲ್ಲೆಗಳ ಪ್ರವಾಸವನ್ನೂ ಮಾಡಿದ್ದರು.
ಪ್ರಧಾನಿ ಮೋದಿ ತಮ್ಮ 'ಭಕ್ತ'ರಿಗಾಗಿ ವಿಶೇಷ ಪೆಟ್ರೋಲ್ ಬಂಕ್ ತೆರೆಯಬೇಕಿದೆ
ಸಂಕ್ರಾಂತಿಯ ನಂತರ ಇಬ್ರಾಹಿಂ ಅವರು ಜೆಡಿಎಸ್ ಸೇರುವ ಸಾಧ್ಯತೆಯಿದೆ. ಕಾಂಗ್ರೆಸ್ ತೊರೆಯುವ ಅವರ ಆಲೋಚನೆಗೆ ಕಾರಣವಾದ ಅಂಶಗಳು, ಸದ್ಯದ ರಾಜಕೀಯ, ರಾಜ್ಯ ಮತ್ತು ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಕಾಯಿದೆಯ ಬಗ್ಗೆ ಸಿ.ಎಂ.ಇಬ್ರಾಹಿಂ 'ಒನ್ ಇಂಡಿಯಾ'ಜೊತೆಗಿನ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ. ರಾಜ್ಯದ ಸಂಸದರನ್ನು ಮಂಗಳಮುಖಿಯರಿಗೆ ಇಬ್ರಾಹಿಂ ಹೋಲಿಸಿದ್ದಾರೆ. ಜೊತೆಗೆ, ವಿಧಾನಸೌಧದಲ್ಲಿ ದರಿದ್ರ ಲಕ್ಷ್ಮೀ ಓಡಾಡುತ್ತಿದೆ ಎಂದಿದ್ದಾರೆ. ಅವರ ಸಂದರ್ಶನದ ಆಯ್ದಭಾಗ ಇಂತಿದೆ:
ಪ್ರ: ಕಾಂಗ್ರೆಸ್ ಪಕ್ಷ ತೊರೆಯುವ ವಿಚಾರದಲ್ಲಿ ಹಲವು ಜಿಲ್ಲೆಗಳಲ್ಲಿ ಪ್ರವಾಸವನ್ನು ಮಾಡಿದ್ದೀರಿ. ಅಭಿಮಾನಿಗಳು ಏನಂತಾರೆ?
ಮಹಾತ್ಮ ಗಾಂಧೀ ಚುನಾವಣೆಗೆ ನಿಂತರೂ ಗೆಲ್ಲೋಕೆ ಐದು ಕೋಟಿ ಬೇಕು
ಇಬ್ರಾಹಿಂ: ಮಿಶ್ರಿತವಾಗಿದೆ. ಕೆಲವರು ವಿರೋಧವನ್ನೂ ವ್ಯಕ್ತ ಪಡಿಸುತ್ತಿದ್ದಾರೆ. ಒಟ್ಟಾರೆಯಾಗಿ, ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಮೋದಿಯವರ ಮೇಲೆ ಏನು ನಿರೀಕ್ಷೆ ಇಟ್ಟುಕೊಂಡಿದ್ದರೋ, ಅದು ಸುಳ್ಳಾಗಿದೆ. ಜನ ಭ್ರಮ ನಿರಸನಗೊಂಡಿದ್ದಾರೆ.

ಜೆಡಿಎಸ್ ಪಕ್ಷ ಯಾಕೆ ಪರ್ಯಾಯವಾಯಿತು
ಪ್ರ: ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಿದಾಗ, ಜೆಡಿಎಸ್ ಪಕ್ಷ ಯಾಕೆ ಪರ್ಯಾಯವಾಯಿತು. ಬಿಜೆಪಿಯಲ್ಲೂ ಅಲ್ಪಸಂಖ್ಯಾತ ಮುಖಂಡರಿದ್ದಾರೆ ಅಲ್ಲವೇ?
ಇಬ್ರಾಹಿಂ: ಬಿಜೆಪಿಯಲ್ಲಿ ಕಾರ್ಯಕ್ರಮ ಅನ್ನೋದೇ ಇಲ್ಲ. ಕೃಷಿಕರ ಬಗ್ಗೆ ಏನೂ ಕಾರ್ಯಕ್ರಮವಿಲ್ಲ.ಇಂತದ್ದೊಂದು ಸಾಧನೆಯನ್ನು ಕಳೆದ ಆರು ವರ್ಷದಲ್ಲಿ ಮಾಡಿದ್ದೇನೆ ಎನ್ನುವುದಕ್ಕೆ ಮೋದಿಯವರ ಬಳಿ ಏನಿದೆ. ಭಾವನಾತ್ಮಕವಾಗಿ ಜನರನ್ನು ಒಡೆಯುವುದು ಅವರ ಕೆಲಸ. ಕಾಂಗ್ರೆಸ್ ಕೆಲ ವಿಚಾರದಲ್ಲೂ ಸರಿಯಿಲ್ಲ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಇದುವರೆಗೆ ಒಬ್ಬರೂ ಅಲ್ಪಸಂಖ್ಯಾತ ಮುಖಂಡರು ಆಯ್ಕೆಯಾಗಿಲ್ಲ.

ಬಿಜೆಪಿ ಕೋಮುವಾದಿಯಲ್ಲ, ದೇಶವನ್ನೇ ಕೋಮುವಾದಿ ಮಾಡುತ್ತಿದೆ
ಪ್ರ: ಕಾಂಗ್ರೆಸ್ಸಿನಲ್ಲೇ ಇಷ್ಟು ತೊಂದರೆಯಾಗಿರುವಾಗ, ಬಿಜೆಪಿಯನ್ನು ಕೋಮುವಾದಿ ಎಂದು ಕರೆಯುವುದು ಸರೀನಾ?
ಇಬ್ರಾಹಿಂ: ಬಿಜೆಪಿ ಕೋಮುವಾದಿಯಲ್ಲ, ದೇಶವನ್ನೇ ಕೋಮುವಾದಿ ಮಾಡುತ್ತಿದೆ. ಮೋದಿ ಸರಕಾರದಿಂದಾಗಿ ದೇಶಕ್ಕೆ ಯಾರೂ ಮಿತ್ರರು ಇಲ್ಲದಂತಾಗಿದೆ. ಅಬ್ ಕೀ ಬಾರ್ ಟ್ರಂಪ್ ಸರಕಾರ ಎನ್ನುವ ಅವಶ್ಯಕತೆ ಏನಿತ್ತು. ಬೈಡೆನ್ ಈಗ ಗೆದ್ದಿದ್ದಾರಲ್ಲಾ, ಈಗ ನಾವೆಲ್ಲಾ ಏನು ಮಾಡಬೇಕು. ಹೊಸ ಭಿಕ್ಷುಕನಿಗೆ ಭಿಕ್ಷೆ ಬೇಡುವ ಅರ್ಜೆಂಟ್ ಎನ್ನುವ ಹಾಗೇ, ಮೋದಿ ಸರಕಾರದ ಆವಾಂತರದಿಂದ ದೇಶ ಸುಧಾರಿಸಬೇಕಾದರೆ, ಇನ್ನು ಹತ್ತು ವರ್ಷ ಬೇಕಾದೀತು.

ಸಿ.ಎಂ.ಇಬ್ರಾಹಿಂ 'ಒನ್ ಇಂಡಿಯಾ'ಜೊತೆಗಿನ ಸಂದರ್ಶನ
ಪ್ರ: ಕಾಂಗ್ರೆಸ್ಸಿನ ಸರಣಿ ಸೋಲು, ಪಕ್ಷದ ಹೈಕಮಾಂಡ್ ನಲ್ಲಿ ಏನಾದರೂ ತೊಂದರೆ ಇದೆ ಎಂದು ಅನಿಸುತ್ತದೆಯೇ?
ಇಬ್ರಾಹಿಂ: ಕಾಂಗ್ರೆಸ್ಸಿನವರು ನೆಲದ ಮೇಲೆ ಶಕ್ತಿ ಇರುವಂತದನ್ನು ಹುಡುಕಬೇಕು. ಹಳ್ಳಿಯ ಜನರ ಜೊತೆ ಒಡನಾಟವಿರಬೇಕು.
ಪ್ರ: ಗೌಡ್ರು ಮತ್ತು ಕುಮಾರಣ್ಣನ ಭೇಟಿಯಾಗಿದ್ರಿ. ರಾಜ್ಯಾಧ್ಯಕ್ಷ ಹುದ್ದೆ ಮತ್ತು ಭದ್ರಾವತಿ ಚುನಾವಣೆಯಲ್ಲಿ ಟಿಕೆಟ್ ಡಿಮಾಂಡ್ ಮಾಡಿದ್ದೀರಾ?
ಇಬ್ರಾಹಿಂ: ಹಾಗೇನಿಲ್ಲ, ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೇನೆ. ಸಂಕ್ರಾಂತಿ ನಂತರ ಪ್ರವಾಸ ಮಾಡಿ, ಜನಾಭಿಪ್ರಾಯ ಪಡೆದು ತಿಳಿಸುತ್ತೇನೆ ಎಂದು ಹೇಳಿದ್ದೆ. ಇದಾದ ನಂತರ ನನ್ನದೇ ಆದ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ.

ಜೆಡಿಎಸ್ ಪಕ್ಷ ಬಿಜೆಪಿ ಜೊತೆ ವಿಲೀನಗೊಂಡರೆ
ಪ್ರ: ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ವಿಲೀನಗೊಂಡರೆ?
ಇಬ್ರಾಹಿಂ: ಬಿಜೆಪಿ ಜೊತೆ ವಿಲೀನಗೊಳ್ಳುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ದಿನೇದಿನೇ ಬಿಜೆಪಿ ಕ್ಷೀಣಿಸುತ್ತಿದೆ. ಬಿಜೆಪಿ ಜೊತೆ ಸೇರಿ ಸರಕಾರ ರಚಿಸುವ ಪ್ರಶ್ನೆಯೇ ಬರುವುದಿಲ್ಲ.
ಪ್ರ: ಕೇಂದ್ರ ಮತ್ತು ರಾಜ್ಯ ಸರಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇಬ್ರಾಹಿಂ: ಮೋದಿಯವರಿಗೆ ಬಹುದೊಡ್ಡ ಅವಕಾಶವಿತ್ತು, ಈಗಲೂ ಇದೆ. ದೇಶ ಕಟ್ಟುವ ಅವಕಾಶವಿದೆ, ಇಂದಿರಾ ಗಾಂಧಿಗಿಂತಲೂ ಹೆಚ್ಚಿನ ಪವರ್ ಇವರಿಗೆ ಸಿಕ್ಕಿದೆ. ತಮಗೆ ಸಿಕ್ಕ ಜನಾದೇಶ ಎನ್ನುವ ವಜ್ರಾಯುಧವನ್ನು ಧರ್ಮಕ್ಕೆ ಬಳಸಿಕೊಂಡರು. ಎಲ್ಲಾ ಸರಕಾರೀ ಸಂಸ್ಥೆಗಳನ್ನು ಮಾರಲು ಹೊರಟಿದ್ದಾರೆ. ಈಗಲೂ ಆರ್ಥಿಕ ನೀತಿಯನ್ನು ಬದಲಾಯಿಸಿ ದೇಶವನ್ನು ಮುನ್ನಡೆಸಬಹುದು.
ಯಡಿಯೂರಪ್ಪನವರಿಗೆ ಒಳ್ಳೆಯ ಸರಕಾರ ನೀಡಬೇಕೆನ್ನುವ ಚಿಂತೆಯೇ ಇಲ್ಲ. ಅವರು ಡ್ಯಾಮೇಜ್ ಕಂಟ್ರೋಲರ್, ಡ್ಯಾಂ ತೂತಾಗಿದೆ, ಆ ತೂತನ್ನು ಮುಚ್ಚುವುದಷ್ಟೇ ಅವರ ಕೆಲಸ. ಬಿಎಸ್ವೈ ಸಿಎಂ ಆದ ಮೇಲೆ, ವಿಧಾನಸೌಧದಲ್ಲಿ ದರಿದ್ರ ಲಕ್ಷೀ ಓಡಾಡುತ್ತಿದೆ. ಮೋದಿ ಏ ಎಂದರೆ ಸಾಕು, ಜಿಎಸ್ಟಿ ದುಡ್ಡು ಕೇಳದೇ ಬಿಜೆಪಿ ಸಂಸದರು ವಾಪಸ್ ಬರ್ತಾರೆ. ಏನು 25 ಸಂಸದರಿದ್ದರೋ, ಅವರು ಗಂಡಸರಲ್ಲ, ಮಂಗಳಮುಖಿಯರು.