ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್‌ನ ಎಲ್ಲಾ ಸಚಿವರ ರಾಜೀನಾಮೆ : ಎಚ್.ಡಿ.ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಜುಲೈ 08 : 'ಕಾಂಗ್ರೆಸ್ ಪಕ್ಷದ 21 ಸಚಿವರು ರಾಜೀನಾಮೆ ಸಲ್ಲಿಸಿರುವ ರೀತಿಯಲ್ಲೇ ಜೆಡಿಎಸ್ ಪಕ್ಷದ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ. ಸಚಿವ ಸಂಪುಟವನ್ನು ಶೀಘ್ರವೇ ಪುನಾರಚಿಸಲಾಗುವುದು' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಸೋಮವಾರ ಮಧ್ಯಾಹ್ನ ಎಚ್.ಡಿ.ಕುಮಾರಸ್ವಾಮಿ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ 21 ಸಚಿವರು ಸೋಮವಾರ ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಜೆಡಿಎಸ್ ಸಚಿವರ ಸರದಿ.

ನನ್ನ ರಾಜೀನಾಮೆ ತೆಗೆದುಕೊಳ್ಳಿ, ಸರ್ಕಾರವನ್ನು ಉಳಿಸಿ : ಪರಮೇಶ್ವರನನ್ನ ರಾಜೀನಾಮೆ ತೆಗೆದುಕೊಳ್ಳಿ, ಸರ್ಕಾರವನ್ನು ಉಳಿಸಿ : ಪರಮೇಶ್ವರ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಟ್ಟು ಎಲ್ಲಾ ಸಚಿವರು ರಾಜೀನಾಮೆ ನೀಡಲಿದ್ದು, ಹೊಸದಾಗಿ ಸಂಪುಟವನ್ನು ಪುನಾರಚನೆ ಮಾಡಲಾಗುತ್ತದೆ. ಜೆಡಿಎಸ್ ಶಾಸಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ರೆಸಾರ್ಟ್‌ಗೆ ತೆರಳಲಿದ್ದಾರೆ.

ಸರ್ಕಾರ ಉಳಿಸಲು ಕೈ ಸಚಿವರ 'ತ್ಯಾಗ': ಸಾಮೂಹಿಕ ರಾಜೀನಾಮೆಸರ್ಕಾರ ಉಳಿಸಲು ಕೈ ಸಚಿವರ 'ತ್ಯಾಗ': ಸಾಮೂಹಿಕ ರಾಜೀನಾಮೆ

ಈಗಾಗಲೇ ಕಾಂಗ್ರೆಸ್‌ನ 9 ಶಾಸಕರು, ಜೆಡಿಎಸ್‌ನ 3 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರು ಮಂಗಳವಾರ ಎಲ್ಲಾ ಶಾಸಕರ ರಾಜೀನಾಮೆಯನ್ನು ಪರಿಶೀಲನೆ ನಡೆಸಲಿದ್ದಾರೆ.

ಎಚ್.ನಾಗೇಶ ಬೆಂಬಲ, 106ಕ್ಕೇರಿದ ಬಿಜೆಪಿ ಸದಸ್ಯರ ಬಲ!ಎಚ್.ನಾಗೇಶ ಬೆಂಬಲ, 106ಕ್ಕೇರಿದ ಬಿಜೆಪಿ ಸದಸ್ಯರ ಬಲ!

ಸಚಿವರ ಪಟ್ಟಿ

ಸಚಿವರ ಪಟ್ಟಿ

* ಸಿ.ಎಸ್.ಪುಟ್ಟರಾಜು
* ಎಚ್.ಡಿ.ರೇವಣ್ಣ
* ಸಾ.ರಾ.ಮಹೇಶ್
* ಬಂಡೆಪ್ಪ ಕಾಶೆಂಪೂರ್
* ಜಿ.ಟಿ.ದೇವೇಗೌಡ
* ಡಿ.ಸಿ.ತಮ್ಮಣ್ಣ
* ಎಸ್.ಆರ್.ಶ್ರೀನಿವಾಸ್

ಮುಖ್ಯಮಂತ್ರಿಗಳು ಮಾತ್ರ ಉಳಿದಿದ್ದಾರೆ

ಮುಖ್ಯಮಂತ್ರಿಗಳು ಮಾತ್ರ ಉಳಿದಿದ್ದಾರೆ

ಜೆಡಿಎಸ್‌ನ ಎಲ್ಲಾ ಸಚಿವರು ರಾಜೀನಾಮೆ ನೀಡಿದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತ್ರ ಉಳಿಯಲಿದ್ದಾರೆ. ಉಳಿದಂತೆ ಸಚಿವ ಸಂಪುಟ ಸಂಪೂರ್ಣ ಖಾಲಿಯಾಗಲಿದ್ದು, ಸಂಪುಟವನ್ನು ಪುನಾರಚನೆ ಮಾಡಬೇಕಿದೆ.

ಕಾಂಗ್ರೆಸ್‌ನ ಎಲ್ಲಾ ಸಚಿವರ ರಾಜೀನಾಮೆ

ಕಾಂಗ್ರೆಸ್‌ನ ಎಲ್ಲಾ ಸಚಿವರ ರಾಜೀನಾಮೆ

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ 21 ಸಚಿವರು ಸೋಮವಾರ ಬೆಳಗ್ಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಫರ್ ನೀಡಿದ್ದಾರೆ.

ಮಂಗಳವಾರ ನಿರ್ಣಾಯಕ ದಿನ

ಮಂಗಳವಾರ ನಿರ್ಣಾಯಕ ದಿನ

ಕರ್ನಾಟಕದ ಮೈತ್ರಿ ಸರ್ಕಾರದ ಪಾಲಿಗೆ ಮಂಗಳವಾರ ನಿರ್ಣಾಯಕ ದಿನವಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರು ಮಂಗಳವಾರ ಕಚೇರಿಗೆ ಬರಲಿದ್ದು ಎಲ್ಲಾ 13 ಶಾಸಕರ ರಾಜೀನಾಮೆಯನ್ನು ಪರಿಶೀಲನೆ ನಡೆಸಲಿದ್ದಾರೆ. ರಾಜೀನಾಮೆ ಅಂಗೀಕರಿಸಲಿದ್ದಾರೆಯೇ? ಎಂದು ಕಾದು ನೋಡಬೇಕು.

English summary
Karnataka Chief Minister H.D.Kumaraswamy tweeted that all JD(S) MLA's will quit the minister post. Congress 21 ministers submitted the resignation on July 8, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X