Dam Water Level: ರಾಜ್ಯದ ಪ್ರಮುಖ ಡ್ಯಾಂಗಳ ಒಳಹರಿವು ಹೆಚ್ಚಳ: 1000 ಕ್ಯೂಸೆಕ್ ನೀರು ರಿಲೀಸ್, ಎಚ್ಚರಿಕೆ

ಬೆಂಗಳೂರು, ಜೂನ್ 03: ಕರ್ನಾಟಕದ ಮಲೆನಾಡು ಸೇರಿದಂತೆ ರಾಜ್ಯದ ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಈ ಕಾರಣದಿಂದ ನದಿಗಳಲ್ಲಿ ಒಳಹರಿವು ಹೆಚ್ಚಾಗಿದೆ. ಮಂಗಳವಾರ ಬೆಳಗ್ಗೆವರೆಗೆ ಕೊಡುಗು, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಸೇರಿದಂತೆ ವಿವಿಧೆ ಜೋರು ಮಳೆ ಆಗಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹಾರಂಗಿ ಡ್ಯಾಂಗೆ ಒಳಹರಿವು ಪ್ರಮಾಣ ಹೆಚ್ಚಾಗಿದ್ದು, ಪ್ರವಾಹ ಎಚ್ಚರಿಕೆ ನೀಡಲಾಗಿದೆ.

ಹವಾಮಾನ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದೆ. ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಜಲಾಶಯವು ಶೀಘ್ರವೇ ಗರಿಷ್ಟ ಮಟ್ಟ ತಲುಪುವುದರಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತದೆ. ಆದ್ದರಿಂದ ಹಾರಂಗಿ ಮತ್ತು ಕಾವೇರಿ ನದಿಯ ಪಾತ್ರದಲ್ಲಿ ಮತ್ತು ನದಿಯ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮ ಇಂದು ಪ್ರಕಟಣೆ ಹೊರಡಿಸಿದೆ.

All Dams Water Level Increased in Karnataka on June 3rd KRS Kabini Basin Heavy Rain

1000 ಕ್ಯೂಸೆಕ್ ನೀರು ಬಿಡುಗಡೆ

ಕೊಡಗಿನ ಕುಶಾಲನಗರದಲ್ಲಿರುವ ಹಾರಂಗಿ ಅಣೆಕಟ್ಟಿನಿಂದ ಇಂದು ಮಧ್ಯಾಹ್ನ 1 ಗಂಟೆಯಿಂದ 1000 ಕ್ಯೂಸೆಕ್ ನೀರು ಹೊರ ಬಿಡಲಾಯಿತು. ಈ ನೀರು ಕುಶಾಲನಗರದ ಕೂಡಿಗೆ ಬಳಿ ಕಾವೇರಿ ನದಿಗೆ ಸೇರುತ್ತದೆ. ಇದರಿಂದ ಕೃಷ್ಣ ರಾಜ ಸಾಗರ (KRS Dam) ಅಣೆಕಟ್ಟಿಗೆ ಸೇರಿಕೊಳ್ಳಲಿದೆ.

ಇದೇ ರೀತಿ ಹೇಮಾವತಿಯಲ್ಲಿ 1931 ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ. ಅದೇ ರೀತಿ ಕೆಆರ್‌ಎಸ್ 9848 ಕ್ಯೂಸೆಕ್, ಕಬಿನಿ ಜಲಾಶಯದಲ್ಲಿ 6238 ಕ್ಯೂಸೆಕ್ಸ್, ಹಾರಂಗಿ 1541 ಕ್ಯೂಸೆಕ್ಸ್ ಒಳಹರಿವು ಹೆಚ್ಚಾಗಿದೆ. ಇದು ಸೇರಿಂತೆ ವಿವಿಧ ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗುತ್ತಿದ್ದು, ಡ್ಯಾಂಗಳ ಒಳಹರಿವು ಹೆಚ್ಚಾಗಿದೆ. ಕೆಲವೆಡೆ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇಂದು ಕರ್ನಾಟಕದ ಯಾವೆಲ್ಲ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂದು ಮಾಹಿತಿ ಇಲ್ಲಿದೆ.

* ಕೃಷ್ಣ ರಾಜ ಸಾಗರ (KRS) ಇಂದಿನ ಮಟ್ಟ

ಎಫ್‌ಆರ್‌ಎಲ್ ಎತ್ತರ: 124.80 ಅಡಿ
ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ನೀರಿನ ಸಂಗ್ರಹ: 27.933 ಟಿಎಂಸಿ
ಒಳಹರಿವು ಪ್ರಮಾಣ: 9484 ಕ್ಯೂಸೆಕ್
ಹೊರಹರಿವು : 749 ಕ್ಯೂಸೆಕ್

* ಹಾರಂಗಿ ಜಲಾಶಯದ ನೀರಿನ ಮಟ್ಟ

ಜಲಾಶಯದ ಒಟ್ಟು ಮಟ್ಟ: 2859 ಅಡಿ
ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 8.5 ಟಿಎಂಸಿ
ಇಂದಿನ ನೀರು ಸಂಗ್ರಹ: 6.169 ಟಿಸಿಎಂ
ಒಳಹರಿವು ಪ್ರಮಾಣ : 1541 ಕ್ಯೂಸೆಕ್ಸ್
ಹೊರ ಹರಿವು: 100 ಕ್ಯೂಸೆಕ್ಸ್

All Dams Water Level Increased in Karnataka on June 3rd KRS Kabini Basin Heavy Rain

* ಕಬಿನಿ ಡ್ಯಾಂನಲ್ಲಿ ಎಷ್ಟಿದೆ ನೀರು?

ಡ್ಯಾಂ ಒಟ್ಟು ಎತ್ತರ : 2284 ಅಡಿ
ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ನೀರಿನ ಸಂಗ್ರಹ : 17.48 ಟಿಎಂಸಿ
ಒಳಹರಿವು : 5625 ಕ್ಯೂಸೆಕ್ಸ್
ಹೊರ ಹರಿವು: 5625 ಕ್ಯೂಸೆಕ್ಸ್

* ಹೇಮಾವತಿ ಡ್ಯಾಂ ನೀರಿನ ಮಟ್ಟ

ಡ್ಯಾಂ ಒಟ್ಟು ಎತ್ತರ: 2922 ಅಡಿ
ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 37.10 ಟಿಎಂಸಿ
ಇಂದಿನ ನೀರಿನ ಸಂಗ್ರಹ: 23.838 ಟಿಎಂಸಿ
ಒಳಹರಿವು ಎಷ್ಟಿದೆ: 1931 ಕ್ಯೂಸೆಕ್ಸ್
ಹೊರ ಹರಿವು ಪ್ರಮಾಣ: 1200 ಕ್ಯೂಸೆಕ್ಸ್

ಎಲ್ಲೆಲ್ಲಿ ಜೋರು ಮಳೆ?

ಇಂದು ಬೆಳಗ್ಗೆವರೆಗೆ ಉಡುಪಿಯಲ್ಲಿ 63ಮಿ.ಮೀ, ಕೊಡಗು 63 ಮಿ.ಮೀ, ಉತ್ತರ ಕನ್ನಡ 58 ಮಿ.ಮೀ, ಶಿವಮೊಗ್ಗ 49 ಮಿ.ಮೀ, ದಕ್ಷಿಣ ಕನ್ನಡ 49 ಮಿ.ಮೀ, ಚಿಕ್ಕಮಗಳೂರು 42 ಮಿ.ಮೀ, ಹಾಸನ 39 ಮಿ.ಮೀ. ಮಳೆ ಆಗಿದೆ. ಕೊಡಗು ಭಾಗದಲ್ಲಿ ವ್ಯಾಪಕ ಮಳೆ ಆಗಿದೆ. ಕೇರಳದ ವಯನಾಡಿನಲ್ಲೂ ಕಳೆದ ವಾರ ಉತ್ತಮ ಮಳೆ ಆಗಿತ್ತು. ಈ ಕಾರಣಗಳಿಂದ ಕಾವೇರಿ ಹಾಗೂ ಅದರ ಉಪ ನದಿಗಳಲ್ಲಿ ಒಳಹರಿವು ಹೆಚ್ಚಾಗಿದೆ. ಇದು ಆಯಾ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಲು ಕಾರಣವಾಗಿದೆ.

ಕರ್ನಾಟಕ ಮಳೆ ಮುನ್ಸೂಚನೆ

ರಾಜ್ಯದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳಭಾಗ ಕರ್ನಾಟಕ ಬೀದರ್, ಕಲ್ಬುರ್ಗಿ, ರಾಯಚೂರು, ಯಾದಗಿರಿ, ಬಾಗಲಕೋಟೆ, ಗದಗ, ಕೊಪ್ಪಳ, ಹಾವೇರಿ, ಬೆಳಗಾವಿ, ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕೆಲವೆಡೆ ಬಿರುಗಾಳಿ ಸಹಿತ (ಗಂಟೆಗೆ 40-50 ಕಿಮೀ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+