ಬೆಂಗಳೂರು-ವಾಸ್ಕೋ ರೈಲಿಗಿದ್ದ ಅಡೆತಡೆ ನಿವಾರಣೆ

ಬೆಂಗಳೂರು, ಫೆಬ್ರವರಿ 28 : ಯಶವಂತಪುರ-ವಾಸ್ಕೋ ನಡುವಿನ ಹೊಸ ರೈಲು ಸಂಚಾರಕ್ಕೆ ಐಆರ್‌ಟಿಸಿ ಒಪ್ಪಿಗೆ ನೀಡಿದೆ. ಕರಾವಳಿ- ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸಲು ಈ ರೈಲನ್ನು ಘೋಷಣೆ ಮಾಡಲಾಗಿತ್ತು.

ಬೆಂಗಳೂರಿನಲ್ಲಿ ನಡೆದ ಇಂಡಿಯನ್ ರೈಲ್ವೆ ಟೈಮ್ ಟೇಬಲ್ ಕಮಿಟಿ ಕಾನೂನಾತ್ಮಕ ಸಭೆಯಲ್ಲಿ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಲಾಗಿದೆ. ಯಶವಂತಪುರ-ವಾಸ್ಕೋ ರೈಲನ್ನು ಘೋಷಣೆ ಮಾಡಿದರೂ ಕೊಂಕಣ ರೈಲ್ವೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸೂಚನೆ ಅನ್ವಯ ಹೊಸ ರೈಲು ಸಂಚಾರಕ್ಕೆ ಒಪ್ಪಿಗೆ ಕೊಡಲಾಗಿದೆ. ಬೆಂಗಳೂರು-ಗೋವಾ ನಡುವೆ ಈ ರೈಲು ಸಂಪರ್ಕ ಕಲ್ಪಿಸಲಿದ್ದು, ರೈಲು ಸಂಚಾರ ಆರಂಭದ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು ಗೋವಾದ ವಾಸ್ಕೋ ತನಕ ಸಂಚಾರ ನಡೆಸುತ್ತದೆ. 696 ಕಿ. ಮೀ. ದೂರವನ್ನು ರೈಲು 16ಗಂಟೆಗಳಲ್ಲಿ ಕ್ರಮಿಸಲಿದೆ. ಹಲವು ವರ್ಷಗಳಿಂದ ಬೆಂಗಳೂರು-ವಾಸ್ಕೋ ನಡುವಿನ ರೈಲಿಗಾಗಿ ಬೇಡಿಕೆ ಇಡಲಾಗಿತ್ತು.

ಬೆಂಗಳೂರು-ವಾಸ್ಕೋ ರೈಲು

ಬೆಂಗಳೂರು-ವಾಸ್ಕೋ ರೈಲು

ಯಶವಂತ-ವಾಸ್ಕೋ ರೈಲು ಮಂಗಳೂರು ಜಂಕ್ಷನ್ ಅಥವ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ತಲುಪುವುದಿಲ್ಲ. ಪಡೀಲ್ ಮೂಲಕ ಕೊಂಕಣ ಮಾರ್ಗದಲ್ಲಿ ಸಂಚಾರ ನಡೆಸುವುದಿಲ್ಲ. ಆದ್ದರಿಂದ, ಕೊಂಕಣ ರೈಲ್ವೆ ನೂತನ ರೈಲಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಕೊಂಕಣ ರೈಲ್ವೆ ಆಕ್ಷೇಪಣೆ ಏಕೆ?

ಕೊಂಕಣ ರೈಲ್ವೆ ಆಕ್ಷೇಪಣೆ ಏಕೆ?

ಬೆಂಗಳೂರು-ವಾಸ್ಕೋ ರೈಲಿಗೆ ಕೊಂಕಣ ರೈಲ್ವೆ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಕೊಂಕಣ ಮಾರ್ಗದಲ್ಲಿ ಈಗಾಗಲೇ ನಿಗದಿಗಿಂತ ಹೆಚ್ಚು ರೈಲು ಸಂಚಾರ ನಡೆಸುತ್ತಿವೆ. ಆದ್ದರಿಂದ, ಹೊಸ ರೈಲಿಗೆ ಮಾರ್ಗದಲ್ಲಿ ಸಂಚಾರ ನಡೆಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕೊಂಕಣ ರೈಲ್ವೆ ಹೇಳಿತ್ತು.

ಎಲ್ಲೆಲ್ಲಿ ನಿಲುಗಡೆಗೊಳ್ಳಲಿದೆ?

ಎಲ್ಲೆಲ್ಲಿ ನಿಲುಗಡೆಗೊಳ್ಳಲಿದೆ?

ಬೆಂಗಳೂರು-ಯಶವಂತಪುರ ನಡುವಿನ ರೈಲು ಮಲೆನಾಡು, ಕರಾವಳಿಯನ್ನು ಬೆಂಗಳೂರು ನಗರದ ಜೊತೆ ಸಂಪರ್ಕ ಕಲ್ಪಿಸುತ್ತದೆ. ಚನ್ನರಾಯಪಟ್ಟಣ, ಹಾಸನ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು, ಸುರತ್ಕಲ್, ಉಡುಪಿ, ಕುಂದಾಪುರ, ಕಾರವಾರ, ಮಡ್ಗಾಂವ್ ಮೂಲಕ ವಾಸ್ಕೋಗೆ ತಲುಪಲಿದೆ.

ರೈಲಿನ ವೇಳಾಪಟ್ಟಿ

ರೈಲಿನ ವೇಳಾಪಟ್ಟಿ

ಯಶವಂತಪುರ-ವಾಸ್ಕೋ ರೈಲು ಸಂಚಾರದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ, ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ರೈಲು ನಂಬರ್ 06587/06588 ಯಶವಂತಪುರ-ವಾಸ್ಕೋ ನಡುವೆ ಸಂಚಾರ ನಡೆಸಲಿದೆ. ಯಶವಂತಪುರದಿಂದ ಪ್ರತಿದಿನ ಸಂಜೆ 6.45ಕ್ಕೆ ಹೊರಡುವ ರೈಲು ಕಾರವಾರಕ್ಕೆ ಮರುದಿನ ಬೆಳಗ್ಗೆ 8.25ಕ್ಕೆ ತಲುಪಲಿದೆ. ವಾಸ್ಕೋಗೆ 10.30ಕ್ಕೆ ತಲುಪಲಿದೆ. ವಾಸ್ಕೋದಿಂದ ಪ್ರತಿದಿನ ಸಂಜೆ 4.40ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 8.32ಕ್ಕೆ ಯಶವಂತಪುರಕ್ಕೆ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+