ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾಹೇತರ ಸಂಬಂಧ ಹೊಂದಿ ದೂರಾದರೂ ಕೊಡಬೇಕು ಜೀವನಾಂಶ

|
Google Oneindia Kannada News

ಬೆಂಗಳೂರು, ಡಿಸೆಂಬರ್ 23: ಮದುವೆಯಾಗಿ ನಂತರ ವಿಚ್ಛೇದನ ಪಡೆದರೆ ಮಡದಿಗೆ ಜೀವನಾಂಶ ಕೊಡುವುದು ಕಾನೂನು. ಆದರೆ ಲಿವ್‌ ಇನ್‌ ರಿಲೇಷನ್‌ಶಿಪ್ (ಮದುವೆ ಆಗದೆ ಸಹಜೀವನ) ಹಾಗೂ ವಿವಾಹೇತರ ಸಂಬಂಧದಲ್ಲಿದ್ದು ಬೇರೆಯಾದರೂ ಜೀವನಾಂಶ ಕೊಡಬೇಕಾಗುತ್ತದೆ.

ಹೌದು, ಪ್ರಕರಣವೊಂದರ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್‌, ಲಿವ್ ಇನ್ ರಿಲೇಶನ್‌ಶಿಪ್‌ ನಲ್ಲಿದ್ದು ಅಥವಾ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿ ನಂತರ ಏಕಾಏಕಿ ಮಹಿಳೆಯನ್ನು ತೊರೆದರೆ ಆ ಮಹಿಳೆಗೆ ಪುರುಷನು ಜೀವನಾಂಶ ನೀಡಬೇಕು ಎಂದು ಆದೇಶ ನೀಡಿದೆ.

ವಿವಾಹಿತ ಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಬೆಂಗಳೂರಿನ 46 ವರ್ಷದ ಮಹಿಳೆಯೊಬ್ಬರು ತಮಗೆ ಮೋಸ ಆಗಿದೆ. ಸಂತ್ರಸ್ತೆ ಆಗಿದ್ದೇನೆ ಎಂದು ಅಳಲು ತೋಡಿಕೊಂಡು ಹೈಕೋರ್ಟ್‌ ಗೆ ಮನವಿ ಸಲ್ಲಿಸಿದ್ದರು. ಆಕೆಯ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್‌ ವಿಚಾರಣೆ ನಡೆಸಿ ಆದೇಶ ಹೊರಡಿಸಿದೆ.

Alimony Should Give In Extra Marital Affair Also

58 ವರ್ಷದ ವ್ಯಕ್ತಿಯೊಬ್ಬರು 1985 ರಲ್ಲಿ ಮದುವೆ ಆಗಿ ಮೂರು ಮಕ್ಕಳನ್ನು ಹೊಂದಿದ್ದರು. ಅದೇ ವ್ಯಕ್ತಿ ನಂತರ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿ, ಇಬ್ಬರು ಮಕ್ಕಳನ್ನೂ ಹೊಂದಿದ್ದರು.

ಆದರೆ ಏಕಾ-ಏಕಿ 2012 ರಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯನ್ನು ತೊರೆದರು. ನಂತರ ಆ ಮಹಿಳೆ ಸೆಷನ್ಸ್‌ ಕೋರ್ಟ್ ಮೆಟ್ಟಿಲೇರಿದ್ದರು. ಸೆಷನ್ಸ್ ಕೋರ್ಟ್ ಮಹಿಳೆಯ ಅರ್ಜಿಯನ್ನು ತಳ್ಳಿ ಹಾಕಿತ್ತು, ನಂತರ ಅದೇ ಮಹಿಳೆ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಮಾನ್ಯ ಮಾಡಿದ ಹೈಕೋರ್ಟ್‌, ಮಹಿಳೆಯೊಂದಿಗೆ ವ್ಯಕ್ತಿಗೆ ಗಾಡ ಸಂಬಂಧ ಇತ್ತು. ಮಕ್ಕಳ ಶಾಲಾ ದಾಖಲೆಯಲ್ಲಿ ತಂದೆಯ ಹೆಸರು ಈತನದ್ದೇ ದಾಖಲಿಸಲಾಗಿದೆ. ವ್ಯಕ್ತಿಯೂ ಸಹ ವಿವಾಹೇತರ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹಾಗಾಗಿ ಮಹಿಳೆಗೆ ಪ್ರತಿ ತಿಂಗಳು ಐದು ಸಾವಿರ ಕೊಡಬೇಕು, ಮೂರು ಸಾವಿರ ಬಾಡಿಗೆಗೆ ಕೊಡಬೇಕು, ಅಷ್ಟೆ ಅಲ್ಲದೆ ಈ ಹಣವನ್ನು ಸಂತ್ರಸ್ತೆಯು ಎಂದು ಸೆಷನ್ಸ್‌ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರೋ ಅಂದಿನಿಂದಲೂ ಕೊಡಬೇಕು. ಶೇ 7 ಬಡ್ಡಿ ದರ ಸೇರಿಸಿ ಕೊಡಬೇಕು ಎಂದು ಆದೇಶ ಹೊರಡಿಸಿದೆ.

ಇದೊಂದು ಅಪರೂಪದ ಪ್ರಕರಣ ಎಂದು ಬಣ್ಣಿಸಿದ ಹೈಕೋರ್ಟ್‌, ಸುಪ್ರೀಂಕೋರ್ಟ್‌ ನ ಹಲವು ಪ್ರಕರಣಗಳನ್ನು ಉಲ್ಲೇಖಿಸಿ ಜೀವನಾಂಶ ನೀಡಲು ಆದೇಶಿಸಿತು. ಅಲ್ಲದೆ ಸಂತ್ರಸ್ತೆಯು ನ್ಯಾಯಾಲಯದ ಮೆಟ್ಟಿಲೇರಿದ ಧೈರ್ಯವನ್ನೂ ಶ್ಲಾಘಿಸಿದರು.

English summary
Alimony should give to woman in extra marital affair said Karnataka high court. It ordered in a Bengaluru woman case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X