Get Updates
Get notified of breaking news, exclusive insights, and must-see stories!

ಕೋಟಾದಲ್ಲಿ ಕೊರಗ ಸಮುದಾಯದವರ ಮೇಲೆ ದೌರ್ಜನ್ಯ: ಪೊಲೀಸರ ವಿರುದ್ಧ ದೂರು ದಾಖಲು

ಬೆಂಗಳೂರು, ಡಿ. 30: ಆದಿವಾಸಿ ಅಸ್ಪೃಶ್ಯ ಕೊರಗ ಸಮುದಾಯದ ಮೇಲೆ ಅಮಾನುಷ ಹಲ್ಲೆ ಮಾಡಿದ ಕರಾವಳಿಯ ಕೋಟಾ ಠಾಣೆ ಪೊಲೀಸರ ವಿರುದ್ಧ ಮೂರು ಪ್ರತ್ಯೇಕ ದೂರುಗಳನ್ನು ಸಲ್ಲಿಸಲಾಗಿದೆ.

ರಾಜ್ಯ ಮಾನವ ಹಕ್ಕು ಆಯೋಗ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಮತ್ತು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಯೋಗಕ್ಕೆ ಅಲೆಮಾರಿ ಬುಡಕಟ್ಟು ಮಹಾಸಭಾದ ಗೌರವಾಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ದೂರು ನೀಡಿದ್ದಾರೆ.

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಆದಿವಾಸಿ ಕೊರಗ ಸಮುದಾಯದ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಮದುವೆ ಭಾಗವಾಗಿ ಮೆಹಂದಿ ಶಾಸ್ತ್ರ ನಡೆಸುವಾಗ ವೇಳೆ ಧ್ವನಿ ವರ್ಧಕ ಬಳಸಲಾಗಿತ್ತು. ಸಹಜವಾಗಿ ಎಲ್ಲಾ ಸಮುದಾಯದವರು ಮದುವೆ ಕಾರ್ಯಕ್ರಮಕ್ಕೆ ಧ್ವನಿವರ್ಧಕ ಹಾಕಿ ಸಂಭ್ರಮಿಸುತ್ತಾರೆ. ಆದರೆ ಕೊರಗ ಸಮುದಾಯ ಇದನ್ನು ಆಚರಿಸುವಂತಿಲ್ಲ. ಕೊರಗ ಸಮುದಾಯದ ವಿರುದ್ಧ ಬಲಿಷ್ಠ ಜಾತಿಗಳು ಅಸ್ಪೃಶ್ಯತೆ ಆಚರಿಸುತ್ತಿವೆ. ಕೊರಗರು ಶಾಲೆಗೆ ಹೋಗುವುದನ್ನು, ಹೊಸ ಬಟ್ಟೆ ಹಾಕುವುದನ್ನು, ನೌಕರಿ ಪಡೆಯುವುದನ್ನು ಇಲ್ಲಿನ ಬಲಿಷ್ಠ ಜಾತಿಗಳು ಸಹಿಸುವುದಿಲ್ಲ. ಕೊರಗರ ಧ್ವನಿವರ್ಧಕ ಹಾಕಿ ಸಂಭ್ರಮಿಸುವುದನ್ನು ಸಹಿಸದ ಕೆಲವು ಬಲಿಷ್ಠ ಜಾತಿಗಳು ನೀಡಿದ ದೂರಿನ ಮೇರೆಗೆ ಕೋಟಾ ಪೊಲೀಸರು ಗಂಡಿನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಸೂ. ಮಕ್ಕಳೇ, ಬೋ. ಮಕ್ಕಳೇ ಕೊರಗರಿಗೆ ನಿಮಗ್ಯಾಕೆ ಮೆಹಂದಿ ಶಾಸ್ತ್ರ? ನಿಮ್ಮದು ಅತಿ ಆಯಿತು ಎಂದು ಪೊಲೀಸರು ಹಲ್ಲೆ ಮಾಡಿದ್ದಾರೆ. ಬೂಟು ಕಾಲಿನಿಂದ ಒದ್ದು ಲಾಕಪ್ ಗೆ ಹಾಕಿ ವಿವಸ್ತ್ರಗೊಳಿಸಿ ಹಿಂಸೆ ನೀಡಿದ್ದಾರೆ. ಯಾರಿಗಾದರೂ ದೂರು ನೀಡಿದರೆ ನಿಮ್ಮನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Alemari Budakattu Mahasabha president Dwarakanath file Complaint against Police

ಪೊಲೀಸರಿಂದ ಹಲ್ಲೆಗೆ ಒಳಗಾಗಿರುವ ರಾಜೇಶ್ ಬಿನ್ ಗಣಪ, ತಾಯಿ ಗಿರಿಜಾ, ಚಿಕ್ಕ ತಾಯಿ ಬೇಬಿ, ಸುದರ್ಶನ, ಗಿರೀಶ್ಮ ಸಚಿನ್ ಅವರಿಗೆ ಮಾರಣಾಂತಿಕ ಗಾಯಗಳಾಗಿವೆ. ಕೋಟಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಪದೆ ಇಲ್ಲದಿದ್ದಾಗಿಯೂ ಪುರುಷ ಪೊಲೀಸರ ಕೊರಗ ಸಮುದಾಯದ ಹೆಣ್ಣು ಮಕ್ಕಳ ಮೇಲೆ ದಾಳಿ ಮಾಡಿದ್ದಾರೆ. ಕೋಟಾ ಠಾಣಾಧಿಕಾರಿ ಸಂತೋಷ್, ಮುಖ್ಯಪೇದೆ ರಾಮಣ್ಣ, ಅಶೋಕ್ ಶೆಟ್ಟಿ, ಜೀಪ್ ಚಾಲಕ ಮಂಜುನಾಥ್ ಅವರು ದೌರ್ಜನ್ಯ ಎಸಗಿದ್ದಾರೆ. ಈ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದ್ದಾರೆ ಮಹಿಳಾ ಹಕ್ಕುಗಳಿಗೆ ಧಕ್ಕೆ ಯಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರುದಾರರಾಗಿರುವ ಗೌರವಾಧ್ಯಕ್ಷ ಡಾ. ಸಿ.ಎಸ್. ದ್ವಾರಕಾನಾಥ್ ಮನವಿ ಮಾಡಿದ್ದಾರೆ.

Alemari Budakattu Mahasabha president Dwarakanath file Complaint against Police

ಆದಿ ವಾಸಿಗಳಲ್ಲಿ ಕೊರಗ ಸಮುದಾಯ ಮಾತ್ರ ಅಸ್ಪಶ್ಯರು. ಬಲಿಷ್ಠರ ಸಮುದಾಯ ಇವರನ್ನು ಗುಲಾಮರನ್ನಾಗಿ ನಡೆಸಿಕೊಂಡು ಬರುತ್ತಿದ್ದರು. ಊಟದಲ್ಲಿ ಕೂದಲು ಮತ್ತು ಉಗುರು ಹಾಕಿ ಕೊಡುವ ಪರಿಸ್ಥಿತಿ ಇತ್ತು. ಈಗಲೂ ಅದೇ ಪರಿಸ್ಥಿತಿ ಇದೆ. ಕೊರಗ ಸಮುದಾಯದ ಮಂದಿ ಮೆಹಂದಿ ಶಾಸ್ತ್ರಕ್ಕೆ ಧ್ವನಿ ವರ್ಧಕ ಬಳಸಬಾರದು ಎಂದರೆ ಯಾವ ಪರಿಸ್ಥಿತಿ ಇದೆ ಎಂಬುದನ್ನು ಆಲೋಚಿಸಬೇಕು ಎಂದು ಡಾ. ಸಿ.ಎಸ್. ದ್ವಾರಕಾನಾಥ್ 'ಒನ್ ಇಂಡಿಯಾ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
Alemari Budakattu Mahasabha president Dwarakanath file Complaint against Police

ನಡೆದ ಘಟನೆ:

ಕೊರಗ ಕಾಲೋನಿಯಲ್ಲಿ ಮೆಹಂದಿ ಶಾಸ್ತ್ರ ಮಾಡುವಾಗ ಧ್ವನಿ ವರ್ಧಕ ಹಾಕಿ ಕುಣಿದ ಕಾರಣಕ್ಕೆ ಪೊಲೀಸರು ಕಾಲೋನಿಗೆ ನುಗ್ಗಿ ಲಾಠಿ ಚಾರ್ಜ್ ಮಾಡಿದ್ದಾರೆ. ಘಟನೆ ಬೆಳಕಿಗೆ ಬಂದ ಕೂಡಲೇ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಇನ್ನು ಹಲ್ಲೆ ಮಾಡಿದ ಆರೋಪಕ್ಕೆ ಒಳಗಾಗಿರುವ ಠಾಣಾಧಿಕಾರಿ ಸಂತೋಷ್ ಸೇರಿದಂತೆ ಪೊಲೀಸ್ ಸಿಬ್ಬಂದಿಯನ್ನು ಕೋಟಾ ಠಾಣೆಗೆ ಹೋಗದಂತೆ ನಿಷೇಧ ಹೇರಲಾಗಿದೆ. ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹುಟ್ಟೂರಿನಲ್ಲೇ ಈ ಘಟನೆ ನಡೆದಿದ್ದು, ಕೊರಗ ಸಮುದಾಯಕ್ಕೆ ರಕ್ಷಣೆ ಎಲ್ಲಿದೆ ಎಂಬ ಪ್ರಶ್ನೆ ಎದ್ದಿದೆ. ಈ ಪ್ರಕರಣದಲ್ಲಿ ನ್ಯಾಯ ಸಿಗುವ ವರೆಗೂ ಹೋರಾಟ ನಡೆಸುತ್ತೇವೆ ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಘಟನೆ ಕುರಿತು ತನಿಖೆ ನಡೆಸಿ ವರದಿ ಆಧರಿಸಿ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಉಡುಪಿ ಎಸ್ಪಿ ಭರವಸೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+