ಶ್ರಾವಣದಲ್ಲಿ ಮಠದೊಳಗೆ ಎಣ್ಣೆ ಪಾರ್ಟಿ: ಮತ್ತಿನಲ್ಲಿ 'ಯಾರಿವಳು' ಎಂದು ಹಾಡಿದ ಸ್ವಾಮೀಜಿ ವಿಡಿಯೋ ವೈರಲ್

ಅಫಜಲಪುರ: ನಾಡಿನಲ್ಲಿ ದೇವರಿಗೆ, ದೇವಸ್ಥಾನಗಳಿಗೆ ಹಾಗೂ ಸ್ವಾಮೀಜಿಗಳಿಗೆ ಪೂಜ್ಯನೀಯ ಸ್ಥಾನವಿದೆ. ಭಕ್ತರು ಈಗಲೂ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಅಂಥದರಲ್ಲಿ ಇಲ್ಲೊಬ್ಬ ಸ್ವಾಮೀಜಿ ಮದ್ಯ ಸೇವಿಸಿ, ಬಾಟಲಿ ಮುಂದಿಟ್ಟುಕೊಂಡು 'ಯಾರಿವಳು...ಯಾವರಿವಳು...' ಹಾಡು ಹಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಅನೇಕರು ಇಂಥಹ ಸ್ವಾಮೀಜಿ ಈ ಸಮಾಜಕ್ಕೆ ಬೇಕಾಗಿಲ್ಲ ಎಂದು ಬೇಸರ ಹೊರ ಹಾಕುತ್ತಿದ್ದಾರೆ.

ವಿಡಿಯೋದಲ್ಲಿ ಹಾಡಿದವರು ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿಯಾದ ಮರುಳಾರಾಧ್ಯ ಸ್ವಾಮೀಜಿಗಳು. ಇವರು ಮದ್ಯ ಸೇವಿಸಿ, ಹಾಡು ಹಾಡಿದ್ದಾರೆ ಎನ್ನಲಾಗಿದ್ದು, ಅದು ಇಂಟರ್‍‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ಇದು ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ.

Afzalpur Swamiji Viral Video

ಶ್ರಾವಣ ಮಾಸದಲ್ಲಿ ಸ್ವಾಮಿಜಿ ಎಣ್ಣೆ ಪಾರ್ಟಿ!

ಶ್ರಾವಣ ಮಾಸದಲ್ಲಿ ಭಕ್ತರೇ ಊಟ, ಎಣ್ಣೆ ವಿಚಾರದಲ್ಲಿ ಮಡಿ ಕಾಯ್ದುಕೊಳ್ಳುತ್ತಾರೆ. ಅಂಥದರಲ್ಲಿ ಈ ಸ್ವಾಮೀಜಿ ಶ್ರಾವಣ ಮಾಸದಲ್ಲಿ ಅದರಲ್ಲೂ ಮಠದ ಒಳಗೆ ಮದ್ಯದ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಮದ್ಯ ಬಾಟಲಿ ಮುಂದಿಟ್ಟುಕೊಂಡು ನಶೆಯಲ್ಲಿ ಜೋರಾಗಿ ಸಿನಿಮಾ ಹಾಡು ಹಾಡಿದ್ದಾರೆ. ಸ್ವಾಮೀಜಿಯ ಬಿಂದಾಸ್ ಲೈಫ್ ಸ್ಟೈಲ್‌ಗೆ ಹೊಸ ಚರ್ಚೆ ಹುಟ್ಟು ಹಾಕಿದ್ದು, ನೆಟ್ಟಿಗರು ಕಿಡಿ ಕಾರಿದ್ದಾರೆ.

ಸ್ವಾಮೀಜಿ ವಿರುದ್ಧ 2-3 ಪ್ರಕರಣಗಳು

'ಹಿಂದೂ ಧರ್ಮದ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ ಬದಲಿಗೆ ಖಡ್ಗ ಕೊಡಿ' ಎಂದು ಕೆಲವು ದಿನಗಳ ಹಿಂದೆ ಇದೇ ಸ್ವಾಮೀಜಿ ಭಾಷಣ ಮಾಡಿದ್ದರು. ಅದು ವಿವಾದ ಎಬ್ಬಿಸಿತ್ತು. ಅನ್ಯ ಸಮುದಾಯದ ಕುರಿತು ತೀರಾ ಕೆಳಮಟ್ಟದಲ್ಲಿ ಮಾತನಾಡಿದ್ದು ಸೇರಿ ಈ ಸ್ವಾಮೀಜಿ ವಿರುದ್ಧ ಈಗಾಗಲೇ ಎರಡೂರು ಪ್ರಕರಣಗಳು ದಾಖಲಾಗಿವೆ. ಸದ್ಯ ಹಳೆಯ ರಾಮಾಚಾರಿ ಸಿನಿಮಾದ 'ಯಾರಿವಳು' ಹಾಡಿನ ಮೂಲಕ ಸ್ವಾಮೀಜಿ ವೈರಲ್ ಆಗಿದ್ದು, ಸಾರ್ವಜನಿಕರಿಗೆ ದೇವಸ್ಥಾನ, ಸ್ವಾಮೀಜಿಗಳ ಮೇಲಿನ ಭಕ್ತಿ, ಭಾವ, ಗೌರವ ಕಡಿಮೆಯಾಗಲು ಕಾರಣವಾಗಿದೆ.

ವಿಡಿಯೋದಲ್ಲಿ ಏನಿದೆ?

ದೇವಸ್ಥಾನದ ಒಳಗೆ ಮುಂದೆ ಮದ್ಯದ ಬಾಟಲಿಗಳು ಇವೆ. ಅದರ ಮುಂದೆ ಸೋಫಾ ಮೇಲೆ ಕೂತ ಸ್ವಾಮೀಜಿಯು ಮ್ಯೂಸಿಕ್ ಸಹಿತ ಒಂದು ಕೈಲಿ ಮೈಕ್ ಇನ್ನೊಂದು ಕೈಲಿ ಮೊಬೈಲ್‌ನಲ್ಲಿ ಸಾಹಿತ್ಯ ನೋಡಿಕೊಂಡು ಹಾಡುತ್ತಿರುವುದು ಕಾಣಿಸುತ್ತದೆ.

ಸ್ವಾಮೀಜಿಗಳಿಂದ ಮಠ-ಮಂದಿರಗಳನ್ನು ಮೇಲೆ ಭಕ್ತಿ ಭಾವದಿಂದ ಕಾಣುವ ನಮ್ಮಂತಹ ಲಕ್ಷಾಂತರ ಭಕ್ತರ ಭಾವನೆಗೆ ಧಕ್ಕೆ ಬರುತ್ತಿದೆ. ಕೂಡಲೇ ಈ ಸ್ವಾಮೀಜಿಯನ್ನು ಮಠದಿಂದ ತೆಗೆದು ಹಾಕಬೇಕು ಎಂದು ಶಿವು ಪ್ಯಾಟಿ ಸೇರಿದಂತೆ ಮಾಶಾಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+