ಬೆಳಗಾವಿ ನಂತರ ಕರ್ನಾಟಕದ ಮತ್ತೊಂದು ಪ್ರಮುಖ ಜಿಲ್ಲೆ ವಿಭಜನೆ!
ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ಬೆಳಗಾವಿ ಜಿಲ್ಲೆಯ ವಿಭಜನೆಗೆ ರಾಜ್ಯ ಸರ್ಕಾರವು ಮುಂದಾಗಿದೆ. ಆದರೆ ಇದೇ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದ ಮತ್ತೊಂದು ಪ್ರಮುಖ ಜಿಲ್ಲೆಯ ವಿಭಜನೆಗೆ ಸಂಬಂಧಿಸಿದಂತೆ ಚರ್ಚೆ ಶುರುವಾಗಿದೆ. ಹೌದು ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳನ್ನು ವಿಭಜನೆ ಮಾಡಿ ಹೊಸ ಜಿಲ್ಲೆಗಳನ್ನು ರಚನೆ ಮಾಡಬೇಕು ಎನ್ನುವ ಚರ್ಚೆಯು ಹಲವು ವರ್ಷಗಳಿಂದ ನಡೆದಿದೆ. ಇದೀಗ ಮತ್ತೊಂದು ಜಿಲ್ಲೆ ವಿಭಜನೆಯ ಬಗ್ಗೆ ಚರ್ಚೆ ನಡೆದಿದೆ.
ಬೆಂಗಳೂರಿನ ಸಮೀಪದಲ್ಲೇ ಇರುವ ಹಾಗೂ ದಕ್ಷಿಣ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ತುಮಕೂರು ಜಿಲ್ಲೆಯ ವಿಭಜನೆಯ ಬಗ್ಗೆ ಚರ್ಚೆ ಶುರುವಾಗಿದೆ. ತುಮಕೂರು ಜಿಲ್ಲೆಯನ್ನು ಎರಡು ಭಾಗವಾಗಿ ವಿಭಜನೆ ಮಾಡುವ ಹಾಗೂ ಮಧುಗಿರಿ, ತಿಪಟೂರು ಪ್ರತ್ಯೇಕ ಜಿಲ್ಲೆ ಘೋಷಣೆ ಮಾಡಬೇಕು ಎನ್ನುವ ಆಗ್ರಹ ಇದೀಗ ಕೇಳಿ ಬಂದಿದೆ.

ಬೆಂಗಳೂರು ನಗರದ ಸಮೀಪದಲ್ಲೇ ಇರುವ ತುಮಕೂರು ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂದು ಹಲವು ವರ್ಷಗಳಿಂದ ಚರ್ಚೆ ನಡೆದಿದೆ. ಈ ಜಿಲ್ಲೆಯಲ್ಲಿ ಇದೀಗ ಹತ್ತು ತಾಲ್ಲೂಕುಗಳಿವೆ. ಈ ಜಿಲ್ಲೆಯಲ್ಲಿ ಹೆಚ್ಚು ತಾಲ್ಲೂಕುಗಳಿರುವುದರಿಂದ ಆಡಳಿತಾತ್ಮಕ ಸಮಸ್ಯೆಗಳಾಗುತ್ತಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲೆಯನ್ನು ಎರಡು ಭಾಗವಾಗಿ ವಿಭಜನೆ ಮಾಡಬೇಕು ಎನ್ನುವ ಚರ್ಚೆ ನಡೆದಿದೆ. ಮೊದಲಿನಿಂದಲೂ ಜಿಲ್ಲೆಗಳ ವಿಭಜನೆ ಮಾಡಬೇಕು ಎಂದು ಚರ್ಚೆ ನಡೆದಿದೆಯಾದರೂ ಯಾವ ತಾಲ್ಲೂಕು ಕೇಂದ್ರವನ್ನು ಹೊಸ ಜಿಲ್ಲಾ ಕೇಂದ್ರವಾಗಿಸಬೇಕು ಎನ್ನುವ ಚರ್ಚೆ ಮುಂದುವರಿದಿದೆ.
ಮಧುಗಿರಿ ಮತ್ತು ತಿಪಟೂರು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಮಧುಗಿರಿ, ತಿಪಟೂರು ಲಿಸ್ಟ್‌ನಲ್ಲಿ ಇದೆ. ಆದರೆ ಇದೇ ಸಂದರ್ಭದಲ್ಲಿ ಶಿರಾ ಸಹ ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಆಗುತ್ತಿರುವುದರಿಂದ ಇದನ್ನೂ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಒತ್ತಡ ಈಗ ಹೆಚ್ಚಾಗುತ್ತಿದೆ.
ಮಧುಗಿರಿ ಜಿಲ್ಲೆ ರಚನೆಗೆ ಒತ್ತಡ
ಇನ್ನು ಪಾವಗಡದ ತಿರುಮಣಿಯಿಂದ ತುಮಕೂರು ಜಿಲ್ಲಾ ಕೇಂದ್ರಕ್ಕೆ 150 ಕಿ.ಮೀ ದೂರವಿದೆ. ಸಾರ್ವಜನಿಕರು ಸರ್ಕಾರಿ ಕೆಲಸಗಳಿಗೆ ಅಲೆದಾಡುವಂತಾಗಿದೆ. ಮಧುಗಿರಿ ಜಿಲ್ಲೆಯಾದರೆ ಮಧುಗಿರಿ, ಪಾವಗಡ, ಶಿರಾ ಹಾಗೂ ಕೊರಟಗೆರೆ ತಾಲ್ಲೂಕುಗಳನ್ನು ಸೇರ್ಪಡೆ ಮಾಡಬಹುದು ಎಂದು ಕೆಲವರು ಒತ್ತಾಯಿಸಿದ್ದಾರೆ.
ತಿಪಟೂರು ಜಿಲ್ಲೆ ರಚನೆಗೆ ಒತ್ತಡ
ತಿಪಟೂರು ಜಿಲ್ಲಾ ಕೇಂದ್ರವಾಗಿದೆ. ಈ ತಾಲ್ಲೂಕನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವುದರಿಂದ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಹಣ ವ್ಯಯಿಸುವ ಅವಶ್ಯಕತೆ ಇಲ್ಲ. ಮಿನಿ ವಿಧಾನಸೌಧ, ನಗರಸಭೆ ಕಟ್ಟಡ ಹಾಗೂ ಆರ್‌ಟಿಒ ಕಚೇರಿ ಸೇರಿದಂತೆ ಹೊಸ ಜಿಲ್ಲೆಗೆ ಅವಶ್ಯವಿರುವ ಎಲ್ಲಾ ಮಾದರಿಯ ಕಟ್ಟಡಗಳು ಪ್ರಗತಿಯಲ್ಲಿವೆ. ತಿಪಟೂರಿನ ಗಡಿ ಭಾಗದಿಂದ ತುಮಕೂರು ಜಿಲ್ಲಾ ಕೇಂದ್ರಕ್ಕೆ ಹೋಗಲು ನೂರಕ್ಕೂ ಹೆಚ್ಚು ಕಿ.ಮೀ. ಹೋಗಬೇಕು ಈ ಕಾರಣಕ್ಕೆ ಈ ತಾಲ್ಲೂಕನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವುದು ಸೂಕ್ತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ನಾಯಕರ ಒತ್ತಡ: ಇನ್ನು ತುಮಕೂರು ಜಿಲ್ಲೆಯನ್ನು ವಿಭಜನೆ ಮಾಡಬೇಕು ಹಾಗೂ ಹೊಸದಾಗಿ ಎರಡು ಜಿಲ್ಲೆಗಳನ್ನು ರಚನೆ ಮಾಡಬೇಕು ಎನ್ನುವ ಒತ್ತಡವು ಇದೀಗ ಸಾರ್ವಜನಿಕ ವಲಯದಿಂದ ರಾಜಕೀಯ ಅಂಗಳಕ್ಕೂ ತಲುಪಿದೆ. ರಾಜಕೀಯ ನಾಯಕರು ಸಹ ಇದೀಗ ಹೊಸ ಜಿಲ್ಲೆ ರಚನೆಗೆ ಆಗ್ರಹಿಸುತ್ತಿದ್ದಾರೆ.
ಬೆಳಗಾವಿ ಮೂರು ವಿಭಜನೆ: ಇನ್ನು ಬೆಂಗಳೂರು ನಗರವನ್ನು ಮೂರು ಜಿಲ್ಲೆಗಳಾಗಿ ವಿಭಜನೆ ಮಾಡುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಆದರೆ ರಾಜ್ಯ ಕಾಂಗ್ರೆಸ್ ನಿರ್ಧಾರವನ್ನು ಕೆಲವು ಕನ್ನಡಪರ ಸಂಘಟನೆಗಳು ವಿರೋಧಿಸಿವೆ.











Click it and Unblock the Notifications