Ramya: ಸಿಎಂ ಕುರ್ಚಿ ಕಿತ್ತಾಟ: ಯಾರಾಗ್ಬೇಕು ಸಿಎಂ? ಶಾಕಿಂಗ್ ಹೇಳಿಕೆ ಕೊಟ್ಟ ನಟಿ ರಮ್ಯಾ!
ಬೆಂಗಳೂರು, ನವೆಂಬರ್ 27: ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಖುರ್ಚಿ ಕಿತ್ತಾಟ ಭಾರೀ ಚರ್ಚೆಗೆ ಕಾರಣವಾಗಿದ್ದು, ಹಲವು ಪಕ್ಷದ ರಾಜಕೀಯ ನಾಯಕರು ಹಾಗೂ ಮಠಾಧೀಶರು ಸಿಎಂ ವಿಚಾರವಾಗಿ ಹೇಳಿಕೆ ನೀಡುತ್ತಿರುವುದು ಸದ್ಯ ಹೈಕಮಾಂಡ್‌ಗೆ ತೀವ್ರ ಮುಜುಗರವನ್ನ ತಂದಿದೆ. ಅಧಿಕಾರ ಹಂಚಿಕೆ ವಿಚಾರವಾಗಿ ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, ಇತ್ತ ಸ್ಯಾಂಡಲ್ವುಡ್ ಕ್ವೀನ್, ಮೋಹಕತಾರೆ ನಟಿ ಹಾಗೂ ಮಾಜಿ ಸಂಸದೆಯಾದ ರಮ್ಯಾ ಅವರು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದು,ಯಾರು ಮುಖ್ಯಮಂತ್ರಿಯಾಗಬೇಕು ಎಂದು ಬಗ್ಗೆ ಪ್ರತಿಕ್ರಿಯೆಸಿದ್ದಾರೆ.
ಖಾಸಗಿ ಅಸ್ಪತ್ರೆ ಉದ್ಘಾಟನೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ರಮ್ಯಾ ಅವರು, ಮುಖ್ಯಮಂತ್ರಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಸೀನಿಯರ್ ಲೀಡರ್ ಗಳು ನಿರ್ಧಾರ ಮಾಡ್ತಾರೆ ಎಂದಿದ್ದಾರೆ. ನಮಗೆ ಯಾರಾದರೂ ನನಗೆ ಓಕೆ. ರಾಜ್ಯಕ್ಕೆ ಒಳ್ಳೇಯದಾಗಬೇಕು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ವೇಣುಗೋಪಾಲ್ ಇದ್ದಾರೆ. ಅವರು ನಿರ್ಧಾರ ಮಾಡ್ತಾರೆ. ಯಾರನ್ನ ಮಾಡಿದರೂ ಓಕೆ ಎಂದು ನಟಿ ರಮ್ಯಾ ಅವರು ಹೇಳಿದ್ದಾರೆ.

ಪಕ್ಷದಲ್ಲಿ ಗೊಂದಲ ಹೆಚ್ಚಾಗಿದೆ ಯಾಕೆ ಅನ್ನೋ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆಗೆ ಉತ್ತರಿಸಿದ್ದು, ನಟಿ ಅದೇ ರಾಜಕೀಯ ಎಂದು ನಕ್ಕಿದ್ದಾರೆ. ಎಲ್ಲಾ ನಾಯಕರಿಗೂ ಅರ್ಹತೆ ಇದೆ. ಯಾರಾದ್ರು ಓಕೆ. ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸ್ಯಾಂಡಲ್ವುಡ್ ಕ್ವೀನ್, ಮೋಹಕತಾರೆ ನಟಿ ಹಾಗೂ ಮಾಜಿ ಸಂಸದೆಯಾದ ರಮ್ಯಾ ಅವರು ಹೇಳಿದ್ದಾರೆ.
ತಮ್ಮ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್ ಮಾಡಿ ಜೈಲು ಪಾಲಾದ ಕುಟುಂಟ ಕ್ಷಮೆ ಕೋರಿದ್ದರಿಂದ ನಟಿ ರಮ್ಯಾ ಆ ಕುಟುಂಬ ಹಾಗೂ ಕಾಮೆಂಟ್ ಮಾಡಿದ ವ್ಯಕ್ತಿಯನ್ನು ಕ್ಷಮಿಸಿದ್ದಾರೆ. ಈ ವಿಷಯವನ್ನು ಇಂದು ಖುದ್ದು ಮೋಹಕತಾರೆ, ನಟಿ ರಮ್ಯಾ ಅವರೇ ತಿಳಿಸಿದ್ದಾರೆ. ಆರೋಪಿಗಳನ್ನು ನಾನು ಯಾವಾಗಲೋ ಕ್ಷಮಿಸಿದ್ದೇನೆ. ಆದರೆ ಈ ರೀತಿ ಯಾರಿಗೂ ಮಾಡಬಾರದು ಅನ್ನೋದು ನನ್ನ ಉದ್ದೇಶ. ಇದು ಮತ್ತೆ ರಿಪೀಟ್ ಆಗಲ್ಲ ಅಂತ ಭಾವಿಸುತ್ತೇನೆ. ಅವರಿಗೆ ಶಿಕ್ಷೆ ಕೊಡಬೇಕು ಅನ್ನೋ ಉದ್ದೇಶ ಇರಲಿಲ್ಲ.
ಹೆಣ್ಣು ಮಕ್ಕಳ ವಿಚಾರದಲ್ಲಿ ಸಮಾಜಕ್ಕೆ ಒಳ್ಳೆ ಸಂದೇಶ ಕೊಡಬೇಕಿತ್ತು. ಸದ್ಯ ನ್ಯಾಯಾಲಯದ ಮೂಲಕ ಬುದ್ದಿ ಹೇಳಬೇಕಿತ್ತು. ಈಗ ಎಲ್ಲರೂ ಬೇಲ್ ನಲ್ಲಿ ಆಚೆ ಇದ್ದಾರೆ. ಅವರಿಗೆ ಪಾಠ ಕಲಿಸುವ ಉದ್ದೇಶ ಅಷ್ಟೇ ಇದ್ದದ್ದು. ತಪ್ಪು ಮಾಡಿದವರ ಕುಟುಂಬ ನನ್ನ ಕ್ಷಮೆ ಕೇಳೋದು ಬೇಡ. ನನಗೆ ಕ್ಷಮೆ ಕೇಳುವ ಬದಲು ನಿಮ್ಮ ಮಕ್ಕಳಿಗೆ ಬುದ್ದಿ ಹೇಳಿ. ಬಡವರು ಅಂತೀರಾ, ಪೋನ್ ಇದೆ, ಡೇಟಾ ಇದೆ ಅಂತ ಹೀಗೆ ಮಾಡಬಾರದು. ನಿಮ್ಮ ಮಕ್ಕಳಿಗೆ ಬುದ್ದಿ ಹೇಳಿ ಎಂದು ನಟಿ ರಮ್ಯಾ, ಆರೋಪಿಗಳ ಕುಟುಂಬಸ್ಥರಿಗೆ ಹೇಳಿದ್ದಾರೆ.












Click it and Unblock the Notifications