Yash : ಕಾಸು ಯಾರ್ ಬೇಕಾದ್ರೂ ಕೊಡ್ತಾರೆ, ಮನೆ ಮಗ ಮತ್ತೆ ಬರ್ತಾನ? ಅಭಿಮಾನಿಗಳಿಗೆ ಯಶ್ ಮನವಿ ಮಾಡಿದ್ದೇನು?

ಹುಟ್ಟುಹಬ್ಬದ ಸಂಭ್ರಮವನ್ನು ಬಿಟ್ಟು ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಯಶ್‌ಗೆ ಅಭಿಮಾನಿಗಳ ಸಾವು ಆಘಾತ ತಂದಿದೆ. ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಬಂದ ಯಶ್ ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೊರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬದ ಸಲುವಾಗಿ ಕಟೌಟ್ ನಿಲ್ಲಿಸುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಮೂವರು ಅಭಿಮಾನಿಗಳು ನಿಧನರಾಗಿದ್ದು, ಮೂವರು ಅಭಿಮಾನಿಗಳು ಗಾಯಗೊಂಡಿದ್ದರು.

Actor Yash Mourns Loss of Three Fans in Gadag Electrocution Tragedy

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯಶ್, ಅಲ್ಲಿಂದ ಎಸ್ ಪಿ ವಾಹನದಲ್ಲಿ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ತೆರಳಿ, ಮೃತರಾಗಿರೋ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

ಮೃತ ಮುರಳಿ ಅಪ್ಪನ ಕೈ ಹಿಡಿದು ಯಶ್ ಧೈರ್ಯ ತಿಂಬಿದ್ದಾರೆ. ಮೊದಲು ಮೃತ ಮುರಳಿ ಮನೆಗೆ ಹೋಗಿ ಅವರ ತಂದೆಗೆ ಸಾಂತ್ವನ ಹೇಳಿದ ಯಶ್ ನಂತರ ನವೀನ್ ಗಾಜಿ ಮತ್ತು ಹನುಮಂತ ಹರಿಜನ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಕಟೌಟ್ ನಿಲ್ಲಿಸುವಾಗ ವಿದ್ಯುತ್ ತಗುಲಿ ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಮೃತಪಟ್ಟರೆ, ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಎಂಬವರಿಗೆ ಗಂಭೀರ ಗಾಯಾಳಾಗಿವೆ. ಮಧ್ಯರಾತ್ರಿ 1 ಗಂಟೆ ವೇಳೆ ಕಟೌಟ್ ಕಟ್ಟುವ ವೇಳೆ ಈ ದುರ್ಘಟನೆ ನಡೆದಿದೆ.

ಯಶ್ ಹೇಳಿದ್ದೇನು?

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವ ಅಭಿಮಾನಿಗಳಿಗೂ ನಾನು ಬ್ಯಾನರ್ ಕಟ್ಟಿ ಎಂದು ಹೇಳುವುದಿಲ್ಲ. ಪ್ರತಿ ವರ್ಷ ಹುಟ್ಟುಹಬ್ಬ ಬಂದಾಗ ಈ ತರಹದ ಘಟನೆ ನಡೆಯುವುದನ್ನು ನೋಡಿದರೆ ಹುಟ್ಟುಹಬ್ಬ ಎಂದರೆ ಭಯವಾಗುತ್ತದೆ. ನನ್ನ ಬಗ್ಗೆ ನನಗೆ ಅಸಹ್ಯ ಆಗುತ್ತದೆ.

ಕೋವಿಡ್ ಶುರುವಾಗಿದೆ ಎನ್ನುವ ಕಾರಣಕ್ಕೆ ಯಾರಿಗೂ ತೊಂದರೆ ಆಗಬಾರದು ಎಂದು ಹುಟ್ಟುಹಬ್ಬ ಆಚರಿಸಿಕೊಳ್ಳಬಾರದು ಎಂದು ನಿರ್ಧರಿಸಿದ್ದೆ. ಇದನ್ನು ನೇರವಾಗಿ ಹೇಳಿದರೆ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ. ಈ ತರ ಘಟನೆ ನಡೆದರೆ ಅವರ ಮನೆಯವರಿಗೆ ಯಾರು ಆಗ್ತಾರೆ? ಹಣದ ಸಹಾಯ ಯಾರು ಬೇಕಾದ್ರೂ ಮಾಡಬಹುದು ಆದರೆ ಮನೆ ಮಗ ವಾಪಸ್ ಬರ್ತಾನ ಎಂದರು.

ಅಭಿಮಾನಿಗಳು ಯಾರು ಬ್ಯಾನರ್ ಕಟ್ಟಬೇಡಿ, ಬೈಕ್‌ನಲ್ಲಿ ಚೇಸ್ ಮಾಡಿಕೊಂಡು ಬರಬೇಡಿ. ಒಳ್ಳೆ ಕೆಲಸ ಮಾಡಿ ಅದೆ ನಮಗೆ ಸಾಕು ಎಂದು ಬೇಸರದಿಂದಲೇ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+