ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ್ಪಿ ಭಾಗ 3: ಕೆಪಿಜೆಪಿಗೆ ರಾಜೀನಾಮೆ, ಪ್ರಜಾಕೀಯ ಉದಯ

By Mahesh
|
Google Oneindia Kannada News

Recommended Video

ಉಪೇಂದ್ರ ಕೆ ಪಿ ಜೆ ಪಿಯಿಂದ ಹೊರಗೆ | ಕಮಲಕ್ಕೆ ಸೇರ್ತಾರಾ?

ಬೆಂಗಳೂರು, ಮಾರ್ಚ್ 06: ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ(ಕೆ.ಪಿ.ಜೆ.ಪಿ) ಇನ್ನು ಇತಿಹಾಸ. ಇನ್ನೇನ್ನಿದ್ದರೂ ಪ್ರಜಾಕೀಯದ ಕಾಲ ಎಂದು ನಟ, ನಿರ್ದೇಶಕ ಉಪೇಂದ್ರ ಅವರು ರುಪ್ಪೀಸ್ ರೆಸಾರ್ಟಿನಲ್ಲಿ ಮಂಗಳವಾರ ಮಧ್ಯಾಹ್ನ ಘೋಷಿಸಿದ್ದಾರೆ.

ಕೆಪಿಜೆಪಿ ಸ್ಥಾಪಕ ಮಹೇಶ್ ಗೌಡ ಅವರ ಜತೆ ಭಿನ್ನಮತ ಉಂಟಾದ ಹಿನ್ನಲೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ, ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ಬಿಜೆಪಿಗೆ ಸೇರ್ತೀರಾ?.. ಅಯ್ಯೋ ಹಂಗೇನಿಲ್ಲ, ದೇವರಿದ್ದಾನೆ ಎಂದಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರು ಹೊಸ ಪಕ್ಷ ಕಟ್ಟುವಂತೆ ಬೆಂಬಲಿಗರು ಒತ್ತಾಯಿಸಿದ್ದರು. ನಾನು ಈ ಕ್ಷೇತ್ರದಲ್ಲಿ ಇನ್ನು ಮಗು, ಮಗು ಒಮ್ಮೆಗೆ ಎದ್ದು ನಡೆಯುವುದಿಲ್ಲ. ಏಳು ಬೀಳು ಸಹಜ.

ಉಪೇಂದ್ರ ರಾಜಕೀಯ ಭವಿಷ್ಯದ ಬಗ್ಗೆ ಜಾತಕ ಏನು ಹೇಳುತ್ತದೆ?ಉಪೇಂದ್ರ ರಾಜಕೀಯ ಭವಿಷ್ಯದ ಬಗ್ಗೆ ಜಾತಕ ಏನು ಹೇಳುತ್ತದೆ?

ಮಹೇಶ್ ಗೌಡ ಅವರೇ ನಮ್ಮ ಸಿದ್ಧಾಂತ ನಂಬಿ ಬಂದರು. ನನ್ನ ಪ್ರೆಸಿಡೆಂಟ್ ಮಾಡಿದರು, ಈಗ
ಇನ್ನೇನು ಪ್ರಚಾರಕ್ಕೆ ಹೊರಡಬೇಕು ಎನ್ನುವಾಗ, ಫಂಡ್ ಕಲೆಕ್ಷನ್ ಬಗ್ಗೆ ಮಾತು ಬಂತು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿತು, ಯಾಕೆ ಹೀಗೆ ಆಯ್ತೋ ಗೊತ್ತಿಲ್ಲ ಎಂದು ಉಪೇಂದ್ರ ಹೇಳಿದರು.

ಅವರಿಗೆ ಪ್ರಜಾಕೀಯ ಅರ್ಥ ಆಗ್ಲಿಲ್ಲ.

ಅವರಿಗೆ ಪ್ರಜಾಕೀಯ ಅರ್ಥ ಆಗ್ಲಿಲ್ಲ.

''ನಮಗೆ ಕಾರ್ಮಿಕರು ಬೇಕು. ಚುನಾವಣೆಗೆ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ, ಸಮೀಕ್ಷೆ ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಆದರೆ, ನಾವು ಆಯ್ಕೆ ಮಾಡಿದ ಅಭ್ಯರ್ಥಿಗಳ ಬಗ್ಗೆ ಅಪಸ್ವರ ಕೇಳಿ ಬಂದಿತು. ಬಿ-ಫಾರ್ಮ್ ನೀಡುವ ವಿಚಾರವಾಗಿ ಕೆಲವೊಂದು ಗೊಂದಲ ಉಂಟಾಗುವ ಭೀತಿ ಎದುರಾಯಿತು, ಹೀಗಾಗಿ, 150-200 ಅಭ್ಯರ್ಥಿಗಳ ಹಿತ ಕಾಯಲು ಸೈನಿಂಗ್ ಅಥಾರಿಟಿ ಕೇಳಿದೆ, ಇಂಥವರಿಗಾಗಿ ನಾನು ಡಿಕ್ಟೇಟರ್ ಆಗಲು ಸಿದ್ಧ. ಅವರಿಗೆ ಪ್ರಜಾಕೀಯ ಅರ್ಥ ಆಗ್ಲಿಲ್ಲ.

ಪ್ರಜಾಕೀಯ ಎಂದರೇನು?

ಪ್ರಜಾಕೀಯ ಎಂದರೇನು?

ಪ್ರಜೆಗಳಿಗೋಸ್ಕರ ಇರೋದು ಪ್ರಜಾಕೀಯ. ಈ ನಾಯಕರು ರಿಪೋರ್ಟಿಂಗ್ ಆಫೀಸರ್ ರೀತಿ ವರ್ಕ್ ಮಾಡುತ್ತಿದ್ದಾರೆ. ಎಲ್ಲವೂ ಪೋಲಿಂಗ್ ಮೂಲಕ ನಡೆಯಬೇಕು. ಜನರ ಅಭಿಪ್ರಾಯ ಸಂಗ್ರಹ ಆಧಾರದ ಎಲ್ಲವೂ ನಡೆಯಲಿದೆ. ಇಲ್ಲ ಯಾರೂ ಕಿಂಗ್ ಗಳಿರುವುದಿಲ್ಲ. ಜನಸೇವಕರಿರುತ್ತಾರೆ. ಕಾರ್ಮಿಕರಿರುತ್ತಾರೆ. ರಾಜಕೀಯ ಬೇರೆ, ಪ್ರಜಾಕೀಯ ಬೇರೆ, ಪ್ರಜೆಗಳಿಂದ ಪ್ರಜೆಗಳಿಗಾಗಿ ಮಾಡಿಕೊಂಡ ವ್ಯವಸ್ಥೆ.

ಕೆಪಿಜೆಪಿಯಲ್ಲಿ ಕಿರಿಕ್, ರಿಯಲ್ ಸ್ಟಾರ್ ಉಪೇಂದ್ರ ಉಚ್ಚಾಟನೆ?ಕೆಪಿಜೆಪಿಯಲ್ಲಿ ಕಿರಿಕ್, ರಿಯಲ್ ಸ್ಟಾರ್ ಉಪೇಂದ್ರ ಉಚ್ಚಾಟನೆ?

ಉಪ್ಪಿ ಅಂಡ್ ಗ್ಯಾಂಗ್ ಕಥೆ ಮುಂದೇನು?

ಉಪ್ಪಿ ಅಂಡ್ ಗ್ಯಾಂಗ್ ಕಥೆ ಮುಂದೇನು?

ಪ್ರಜಾಕೀಯ ಎಂಬ ಪಕ್ಷ ಸ್ಥಾಪಿಸುತ್ತೇವೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಗದಿದ್ದರೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಕಾರ್ಪೊರೇಟ್ ಎಲೆಕ್ಷನ್, ಗ್ರಾಮ ಪಂಚಾಯಿತಿ ಚುನಾವಣೆಯ ಎಲ್ಲದರಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಚುನಾವಣೆ ಸ್ಪರ್ಧೆ ಬಗ್ಗೆ ನಮ್ಮ ವಕೀಲರ ಜತೆ ಮಾತನಾಡುತ್ತಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಂತೂ ನಾವೆಲ್ಲ ಸ್ಪರ್ಧಿಸುತ್ತೇವೆ.

ಬೇರೆ ಪಕ್ಷ ಸೇರುವುದಿಲ್ಲ

ಬೇರೆ ಪಕ್ಷ ಸೇರುವುದಿಲ್ಲ

ಬಿಜೆಪಿ ಅಥವಾ ಬೇರೆ ಪಕ್ಷ ಸೇರುವುದಿದ್ದರೆ, ಆರು ತಿಂಗಳ ಹಿಂದೆಯೆ ಸೇರುತ್ತಿದೆ. ನನ್ನ ನಂಬಿಕೊಂಡು ಶ್ರಮಪಟ್ಟು ಜನರಿಗಾರಿ ಏನೋ ಒಳ್ಳೆದು ಮಾಡಲು ಬಂದಿರುವ ಈ 200ಕ್ಕೂ ಅಧಿಕ ಅಭ್ಯರ್ಥಿಗಳು ಹಾಗೂ ಲಕ್ಷಾಂತರ ಮಂದಿ ಅಭಿಮಾನಿಗಳ ಅಣತಿಯಂತೆ ನಾನು ಪ್ರಜಾಕೀಯದಲ್ಲೇ ಮುಂದುವರೆಯುತ್ತೇನೆ. ಪ್ರಜಾಕೀಯವನ್ನೇ ಬೆಳೆಸುತ್ತೇನೆ.

ಸಂದರ್ಶನ: ಕೆಪಿಜೆಪಿ ಬಗ್ಗೆ 10 ಪ್ರಶ್ನೆಗಳಿಗೆ ಉಪ್ಪಿ ಕೊಟ್ಟ ರುಚಿಕಟ್ಟು ಉತ್ತರಸಂದರ್ಶನ: ಕೆಪಿಜೆಪಿ ಬಗ್ಗೆ 10 ಪ್ರಶ್ನೆಗಳಿಗೆ ಉಪ್ಪಿ ಕೊಟ್ಟ ರುಚಿಕಟ್ಟು ಉತ್ತರ

ನಾವೂ ಒಂದು ಸಮೀಕ್ಷೆ ಬಿಡ್ತೀವಿ ನೋಡಿ: ಸಂದರ್ಶನದಲ್ಲಿ ಉಪೇಂದ್ರನಾವೂ ಒಂದು ಸಮೀಕ್ಷೆ ಬಿಡ್ತೀವಿ ನೋಡಿ: ಸಂದರ್ಶನದಲ್ಲಿ ಉಪೇಂದ್ರ

English summary
Actor Upendra to launch new party Prajakiya and he said he will resigned to Karnataka Prajnavantara Janata Pakasha founded by Mahesh Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X