ಕಣದಲ್ಲಿದ್ದಾರೆ 951 ಪದವೀಧರ ಅಭ್ಯರ್ಥಿಗಳು, 52 ಜನ ಅನಕ್ಷರಸ್ಥರು
ಬೆಂಗಳೂರು, ಮೇ 8: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಒಟ್ಟು 2,560 ಅಭ್ಯರ್ಥಿಗಳ ಅಫಿಡವಿಟ್ ಗಳನ್ನು ಎಡಿಆರ್ ಸಂಸ್ಥೆ ಪರಿಶೀಲನೆಗೆ ಒಳಪಡಿಸಿದೆ. ಇದರಲ್ಲಿ 1,351 ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ವಿದ್ಯಾರ್ಹತೆ 5ನೇ ತರಗತಿಯಿಂದ 12ನೇ ತರಗತಿ (ಪಿಯುಸಿ) ವರೆಗೆ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.
ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿರುವುದಾಗಿ 981 ಅಭ್ಯರ್ಥಿಗಳು ಅಫಿಡವಿಟ್ ನಲ್ಲಿ ಘೋಷಣೆ ಮಾಡಿದ್ದಾರೆ.
ಇನ್ನು 50 ಅಭ್ಯರ್ಥಿಗಳು ನಾವು ಅನಕ್ಷರಸ್ಥರು ಎಂದು ಘೋಷಣೆ ಮಾಡಿಕೊಂಡಿದ್ದರೆ, 52 ಅಭ್ಯರ್ಥಿಗಳು ತಾವು ಸಾಕ್ಷರರು ಎಂದಿದ್ದಾರೆ. 11 ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ವಿದ್ಯಾರ್ಹತೆಯನ್ನು ಘೋಷಿಸಿಲ್ಲ.

ಇವು ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳ ಶೈಕ್ಷಣಿಕ ಹಿನ್ನೆಲೆಯಾಗಿದೆ. ಇವರಲ್ಲಿ ಕೆಲವರು ಐಐಟಿ ಪದವೀಧರರು, ಎಂಬಿಬಿಎಸ್, ಎಂಡಿ, ಪಿಎಚ್ಟಿ, ಡಿ.ಲಿಟ್ ಪಡೆದವರೂ ಇದ್ದಾರೆ.












Click it and Unblock the Notifications