ಡಿ. 30; ಕರ್ನಾಟಕದಲ್ಲಿ 973 ಕೊರೊನಾ ಪ್ರಕರಣ ದಾಖಲು

ಬೆಂಗಳೂರು, ಡಿಸೆಂಬರ್ 30: ಕರ್ನಾಟಕದಲ್ಲಿ ಡಿ.30ರ ಬುಧವಾರ 973 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 918544ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ಏಳು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬುಧವಾರ 1217 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಕೆಯಾದವರ ಸಂಖ್ಯೆ 8,94,834 ಆಗಿದೆ. ಪ್ರಸ್ತುತ 11,610 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ ಒಟ್ಟು 12,081 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

ಈ ನಡುವೆ ರಾಜ್ಯದಲ್ಲಿ ಬ್ರಿಟನ್ ಕೊರೊನಾ ರೂಪಾಂತರ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಇದುವರೆಗೂ ದೇಶದಲ್ಲಿ 20 ಮಂದಿಗೆ ರೂಪಾಂತರದ ಕೊರೊನಾ ವೈರಸ್ ತಗುಲಿರುವುದಾಗಿ ತಿಳಿದುಬಂದಿದೆ.

973 New Coronavirus Cases And 7 Deaths Reported On Dec 30 In Karnataka

ಜಿಲ್ಲಾವಾರು ಕೊರೊನಾ ವರದಿ: ಬಾಗಲಕೋಟೆ 8, ಬಳ್ಳಾರಿ 13, ಬೆಳಗಾವಿ 25, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 554, ಬೀದರ್ 7, ಚಾಮರಾಜನಗರ 12, ಚಿಕ್ಕಬಳ್ಳಾಪುರ 31, ಚಿಕ್ಕಮಗಳೂರು 8, ಚಿತ್ರದುರ್ಗ 19, ದಕ್ಷಿಣ ಕನ್ನಡ ಜಿಲ್ಲೆ 31, ದಾವಣಗೆರೆ 8, ಧಾರವಾಡ 19, ಗದಗ 1, ಹಾಸನ 31, ಹಾವೇರಿ 6, ಕಲಬುರಗಿ 17, ಕೊಡಗು 18, ಕೋಲಾರ 7, ಕೊಪ್ಪಳ 2, ಮಂಡ್ಯ 18, ಮೈಸೂರು 34, ರಾಯಚೂರು 3, ರಾಮನಗರ 4, ಶಿವಮೊಗ್ಗ 20, ತುಮಕೂರು 28, ಉಡುಪಿ 11, ಉತ್ತರ ಕನ್ನಡ 7, ವಿಜಯಪುರ 19, ಯಾದಗರಿಯಲ್ಲಿ 4 ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+