ಕರ್ನಾಟಕದಲ್ಲಿ ಕೊರೊನಾ ಭಯ: ಒಂದೇ ದಿನ 934 ಮಂದಿಗೆ ಸೋಂಕು
ಬೆಂಗಳೂರು, ಮಾರ್ಚ್ 14: ಕರ್ನಾಟಕದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 1 ಸಾವಿರದ ಸನ್ನಿಹಿತಕ್ಕೆ ಬರುತ್ತಿದೆ. ರಾಜ್ಯದಲ್ಲಿ ಒಂದೇ ದಿನ 934 ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ.
ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 628 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 960272ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕೊರೊನಾ ಅಂಟೀತು ಎಚ್ಚರ: ಮಹಾರಾಷ್ಟ್ರದಿಂದ ಎದುರಾಗುತ್ತಾ ಗಂಡಾಂತರ!?
ರಾಜ್ಯದಲ್ಲಿ ಒಂದೇ ದಿನ 609 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 939499 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ ಮೂವರು ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 12390ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ರಾಜ್ಯದಲ್ಲಿ 8364 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ.

Recommended Video
ಯಾವ ಜಿಲ್ಲೆಯಲ್ಲಿ ಎಷ್ಟು ಕೊರೊನಾವೈರಸ್ ಪ್ರಕರಣ?:
ರಾಜ್ಯದಲ್ಲಿ ಒಟ್ಟು 934 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 2, ಬಳ್ಳಾರಿ 9, ಬೆಳಗಾವಿ 27, ಬೆಂಗಳೂರು ಗ್ರಾಮಾಂತರ 18, ಬೆಂಗಳೂರು 628, ಬೀದರ್ 11, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 6, ಚಿತ್ರದುರ್ಗ 5, ದಕ್ಷಿಣ ಕನ್ನಡ 40, ದಾವಣಗೆರೆ 3, ಧಾರವಾಡ 20, ಗದಗ 2, ಹಾಸನ 9, ಹಾವೇರಿ 1, ಕಲಬುರಗಿ 43, ಕೊಡಗು 6, ಕೋಲಾರ 13, ಕೊಪ್ಪಳ 2, ಮಂಡ್ಯ 1, ಮೈಸೂರು 31, ರಾಯಚೂರು 2, ರಾಮನಗರ 0, ಶಿವಮೊಗ್ಗ 7, ತುಮಕೂರು 17, ಉಡುಪಿ 12, ಉತ್ತರ ಕನ್ನಡ 7, ವಿಜಯಪುರ 8, ಯಾದಗಿರಿ 4 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications