24 ಗಂಟೆಯಲ್ಲಿ ಭಾರತದಲ್ಲಿ 89,706 ಹೊಸ ಪ್ರಕರಣ ದಾಖಲು
ನವದೆಹಲಿ, ಸೆಪ್ಟೆಂಬರ್ 09: ಭಾರತದಲ್ಲಿ 24 ಗಂಟೆಯಲ್ಲಿ 89,706 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ದೇಶದಲ್ಲಿನ ಒಟ್ಟು ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 43,70,129.
Recommended Video
ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದುವರೆಗೂ ಗುಣಮುಖಗೊಂಡವರ ಸಂಖ್ಯೆ 33,98,845. ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 8,97,394.
24 ಗಂಟೆಯಲ್ಲಿ ದೇಶದಲ್ಲಿ 1,115 ಜನರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ದೇಶದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 73,890. ದೇಶದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರವಾಗಿದೆ.
ದೇಶದಲ್ಲಿ ಇದುವರೆಗೂ 5,18,04,677 ಮಾದರಿಗಳ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ. 11,54,549 ಮಾದರಿಗಳ ಪರೀಕ್ಷೆಯನ್ನು ಮಂಗಳವಾರ ನಡೆಸಲಾಗಿದೆ. ಪುಣೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,07,435. ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಸೋಂಕಿತರು ಇರುವ ಮೊದಲ ಜಿಲ್ಲೆ ಇದಾಗಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚು ಸೋಂಕಿತರು
ಭಾರತದಲ್ಲಿ ಕೋವಿಡ್ ಸೋಂಕಿತರು ಹೆಚ್ಚಿರುವ ರಾಜ್ಯ ಮಹಾರಾಷ್ಟ್ರ. ಮಂಗಳವಾರ ರಾಜ್ಯದಲ್ಲಿ 20,131 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,43,772ಕ್ಕೆ ಏರಿಕೆಯಾಗಿದೆ.

5 ರಾಜ್ಯಗಳಲ್ಲಿ ಹೆಚ್ಚು ಪ್ರಕರಣ
ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಮಂಗಳವಾರ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಈ ರಾಜ್ಯಗಳಿಂದ ಶೇ 49ರಷ್ಟು ಪ್ರಕರಣ ದಾಖಲಾಗುತ್ತಿದೆ.

ಎಲ್ಲಿ ಎಷ್ಟು ಸೋಂಕಿತರು?
ಮಹಾರಾಷ್ಟ್ರ 9,43,772, ಆಂಧ್ರ ಪ್ರದೇಶದಲ್ಲಿ 5,17,094, ತಮಿಳುನಾಡಿನಲ್ಲಿ 4,74,940, ಕರ್ನಾಟಕದಲ್ಲಿ 4,12,190 ಮತ್ತು ಉತ್ತರ ಪ್ರದೇಶದಲ್ಲಿ 2,78,473 ಸೋಂಕಿತರು ಇದ್ದಾರೆ.

ಹೊಸ ದಾಖಲೆ ಬರೆದ ಪುಣೆ
ಮಹಾರಾಷ್ಟ್ರದ ಪುಣೆ ಹೊಸ ದಾಖಲೆ ಬರೆದಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,07,435ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಸೋಂಕಿತರು ಇರುವ ಮೊದಲ ಜಿಲ್ಲೆ ಪುಣೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 62,859, ಒಟ್ಟು ಮೃತಪಟ್ಟವರು 4,538.












Click it and Unblock the Notifications