ಹುಷಾರ್ ಕಣ್ರಪ್ಪಾ; ಕರ್ನಾಟಕದಲ್ಲಿ ಒಂದೇ ದಿನ 8449 ಮಂದಿಗೆ ಕೊರೊನಾವೈರಸ್!

ಬೆಂಗಳೂರು, ಜನವರಿ 7: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನಕ್ಕೊಂದು ದಾಖಲೆ ಬರೆಯುತ್ತಿವೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 8,400ದ ಗಡಿ ದಾಟಿದ್ದು, ಪಾಸಿಟಿವಿಟಿ ದರ ಶೇ.4.15ರಷ್ಟಾಗಿದೆ.

ಕಳೆದ ಒಂದೇ ದಿನದಲ್ಲಿ 8449 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 505 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 4 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 38362 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3031052ಕ್ಕೆ ಏರಿಕೆಯಾಗಿದೆ. ಒಟ್ಟು 2962548 ಸೋಂಕಿತರು ಗುಣಮುಖರಾಗಿದ್ದು. 30113 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ ಕೊವಿಡ್-19 ಭೀತಿ

ಸಿಲಿಕಾನ್ ಸಿಟಿಯಲ್ಲಿ ಕೊವಿಡ್-19 ಭೀತಿ

ಬೆಂಗಳೂರು ನಗರವೊಂದರಲ್ಲಿ ಕಳೆದ ಒಂದು ದಿನದಲ್ಲಿ 6812 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1283186ಕ್ಕೆ ಏರಿಕೆಯಾಗಿದೆ. 3 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 16417ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ಜಿಲ್ಲೆಯಲ್ಲಿ 25370 ಸಕ್ರಿಯ ಪ್ರಕರಣಗಳಿವೆ. ಸಿಲಿಕಾನ್ ಸಿಟಿಯಲ್ಲಿ ಈವರೆಗೂ ಸೋಂಕು ತಗುಲಿದ 1241398 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾವೈರಸ್ ಸೋಂಕಿನ ಪರೀಕ್ಷೆ ಪ್ರಮಾಣ

ಕೊರೊನಾವೈರಸ್ ಸೋಂಕಿನ ಪರೀಕ್ಷೆ ಪ್ರಮಾಣ

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಕೂಡ ತಗ್ಗಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 69,952 ಮಂದಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಹಾಗೂ 1,33,308 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಒಟ್ಟು 2,03,260 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಈವರೆಗೂ 1,08,28,304 ಜನರಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಮಾಡಲಾಗಿದೆ. ಇದರ ಹೊರತಾಗಿ 4,65,01,611 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಈವರೆಗೂ ಒಟ್ಟು 5,73,29, 915 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟಿದೆ ಕೊವಿಡ್-19 ಪ್ರಕರಣ

ಯಾವ ಜಿಲ್ಲೆಯಲ್ಲಿ ಎಷ್ಟಿದೆ ಕೊವಿಡ್-19 ಪ್ರಕರಣ

ರಾಜ್ಯದಲ್ಲಿ ಒಟ್ಟು 8449 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 2, ಬಳ್ಳಾರಿ 62, ಬೆಳಗಾವಿ 114, ಬೆಂಗಳೂರು ಗ್ರಾಮಾಂತರ 74 ಬೆಂಗಳೂರು 6,812, ಬೀದರ್ 20, ಚಾಮರಾಜನಗರ 7, ಚಿಕ್ಕಬಳ್ಳಾಪುರ 21, ಚಿಕ್ಕಮಗಳೂರು 24, ಚಿತ್ರದುರ್ಗ 14, ದಕ್ಷಿಣ ಕನ್ನಡ 211, ದಾವಣಗೆರೆ 18, ಧಾರವಾಡ 66, ಗದಗ 10, ಹಾಸನ 89, ಹಾವೇರಿ 0, ಕಲಬುರಗಿ 43, ಕೊಡಗು 29, ಕೋಲಾರ 98, ಕೊಪ್ಪಳ 5, ಮಂಡ್ಯ 129, ಮೈಸೂರು 219, ರಾಯಚೂರು 2, ರಾಮನಗರ 20, ಶಿವಮೊಗ್ಗ 43, ತುಮಕೂರು 96, ಉಡುಪಿ 148, ಉತ್ತರ ಕನ್ನಡ 36, ವಿಜಯಪುರ 36, ಯಾದಗಿರಿ 1 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

ಕರ್ನಾಟಕದಲ್ಲಿ ಯಾವ ರೂಪಾಂತರಿ ಸೋಂಕು ಹೆಚ್ಚು?

ಕರ್ನಾಟಕದಲ್ಲಿ ಯಾವ ರೂಪಾಂತರಿ ಸೋಂಕು ಹೆಚ್ಚು?

ಕೊರೊನಾವೈರಸ್ ಸೋಂಕಿನ ಯಾವ ರೂಪಾಂತರಿಯು ಹೆಚ್ಚು ಹರಡುತ್ತಿದೆ ಎಂಬುದನ್ನು ಮುಂದೆ ಪಟ್ಟಿ ಮಾಡಲಾಗಿದೆ:

ಅಲ್ಫಾ/ B.1.1.7 - 156

ಬೀಟಾ/ B.1.351 - 08

ಡೆಲ್ಟಾ / B.1.617.2 - 2937

ಡೆಲ್ಟಾ ಪ್ಲಸ್ - 1350

ಕಪ್ಪಾ / B.1.617.1 - 160

ETA / B.1.525 - 01

ಓಮಿಕ್ರಾನ್/ B.1.1.529 - 333

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+