ಕರ್ನಾಟಕ; 830 ಹೊಸ ಕೋವಿಡ್ ಪ್ರಕರಣ ದಾಖಲು

ಬೆಂಗಳೂರು, ಡಿಸೆಂಬರ್ 14: ಕರ್ನಾಟಕದಲ್ಲಿ 830 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 902240ಕ್ಕೆ ಏರಿಕೆಯಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳು 16,065.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಇಂದು ರಾಜ್ಯದಲ್ಲಿ 10 ಜನರ ಸಾವನ್ನಪ್ಪಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 11,954ಕ್ಕೆ ಏರಿಕೆಯಾಗಿದೆ.

830 New COVID Cases Reported On December 14

ಸೋಮವಾರ ರಾಜ್ಯದಲ್ಲಿ 2,164 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 8,74,202 ಜನರು ಗುಣಮುಖಗೊಂಡಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ 254 ಜನರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಸೋಮವಾರ ರಾಜ್ಯದಲ್ಲಿ 5,254 ಆಂಟಿಜೆನ್, 59,601 ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಸೇರಿಸಿ 64,855 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 12420213 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಯಾವ ಜಿಲ್ಲೆ ಎಷ್ಟು?; ಬೆಂಗಳೂರು ನಗರದಲ್ಲಿ ಸೋಮವಾರ 369 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,78,898ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 10,852.

ತುಮಕೂರು 36, ಮೈಸೂರು 56, ಕೋಲಾರ 25, ಕೊಡಗು 34, ಹಾಸನ 29, ಯಾದಗಿರಿ 17, ಚಿಕ್ಕಬಳ್ಳಾಪುರ 31, ದಕ್ಷಿಣ ಕನ್ನಡ 22 ಹೊಸ ಪ್ರಕರಣಗಳು ಸೋಮವಾರ ದಾಖಲಾಗಿವೆ.

Recommended Video

      ದೇಶದಲ್ಲಿ ಕಡಿಮೆಯಾದ ಮಕ್ಕಳ ಮರಣ ಪ್ರಮಾಣ | Oneindia Kannada

      ಬಾಗಲಕೋಟೆ 4, ಬೆಂಗಳೂರು ಗ್ರಾಮಾಂತರ 7, ಬೀದರ್ 4, ಚಾಮರಾಜನಗರ 7, ಚಿತ್ರದುರ್ಗ 5, ಗದಗ 2, ಹಾವೇರಿ 3, ರಾಯಚೂರು 6, ರಾಮನಗರ 2 ಹೊಸ ಪ್ರಕರಣಗಳು ವರದಿಯಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+