7th Pay Commission; ಸಚಿವಾಲಯ ನೌಕರರ ಸಂಘದ ವಿಶೇಷ ಭತ್ಯೆಗಳ ಬೇಡಿಕೆ

ಬೆಂಗಳೂರು, ಅಕ್ಟೋಬರ್ 03; ಕರ್ನಾಟಕದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿದೆ. ನವೆಂಬರ್‌ನಲ್ಲಿ ಆಯೋಗ ಸರ್ಕಾರಕ್ಕೆ ವರದಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ (KSGEA) ರಾಜ್ಯ 7ನೇ ವೇತನ ಆಯೋಗಕ್ಕೆ 30/9/2023ರಂದು ವರದಿಯನ್ನು ಸಲ್ಲಿಕೆ ಮಾಡಿದೆ. ವಿವಿಧ ವರ್ಗದ ನೌಕರರ ವೇತನ, ಭತ್ಯೆಗಳ ಪರಿಷ್ಕರಣೆ ಬಗ್ಗೆ ವರದಿಯಲ್ಲಿ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಸರ್ಕಾರದ ಸಚಿವಾಲಯ ಎಂಬುದು ಒಂದು ಸಂಸ್ಥೆಯಾಗಿದ್ದು, ಸರ್ಕಾರದ ಮೂಲ ಪ್ರತಿಬಿಂಬವಾಗಿರುತ್ತದೆ. ಸಂವಿಧಾನದ 166ನೇ ಅನುಚ್ಛೇದದ ಪ್ರಕಾರ ಪ್ರತಿಯೊಂದು ರಾಜ್ಯದಲ್ಲಿ ರಾಜ್ಯ ಸರ್ಕಾರದ ಕಾರ್ಯಾಂಗದ ಸಮಸ್ತ ಕಾರ್ಯವು ರಾಜ್ಯಪಾಲರ ಹೆಸರಿನಲ್ಲಿ ಮತ್ತು ಅವರ ಆದೇಶಾನುಸಾರ ನಡೆಯುತ್ತದೆ. ಆದರೂ ಅದನ್ನು ಬೆಳಕಿಗೆ ತಂದು ಪ್ರಜ್ವಲಗೊಳಿಸುವ ಕಾರ್ಯ ಸಚಿವಾಲಯ ಸಂಸ್ಥೆಗೆ ಸಂವಿಧಾನ ರೀತ್ಯಾ ಅನುವುಮಾಡಿಕೊಡಲಾಗಿದೆ.

7th Pay Commission KSGEA Demands On Special Allowance

ರಾಜ್ಯ ಸರ್ಕಾರದಲ್ಲಿ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ಸರ್ಕಾರದಲ್ಲಿನ ಕ್ಯಾಬಿನೆಟ್ ಸೆಕ್ರೆಟರಿ ರೀತ್ಯಾ ಕಾರ್ಯನಿರ್ವಹಿಸುತ್ತಾರೆ. ಆದುದರಿಂದಲೇ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಸಚಿವ ಸಂಪುಟ ಇಲಾಖೆಗಳು ಮುಖ್ಯ ಕಾರ್ಯದರ್ಶಿಗಳ ನೇರ ಅಧೀನದಲ್ಲಿರುತ್ತದೆ. ಪ್ರತ್ಯೇಕ ಇಲಾಖೆಗಳಿಗೆ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಇಲಾಖಾ ಮುಖ್ಯಸ್ಥರಾದರೂ ಅವರುಗಳನ್ನೊಳಗೊಂಡಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ಕಾರ್ಯಾಂಗದ ಉನ್ನತ ಸಂಸ್ಥೆಯಾದ ಸಚಿವಾಲಯದ ಮುಖ್ಯಸ್ಥರಾಗಿರುತ್ತಾರೆ. ಮುಖ್ಯ ಕಾರ್ಯದರ್ಶಿಯವರ ಅಧಿಕಾರ, ಪ್ರಕಾರ್ಯಗಳು ಸಚಿವಾಲಯವನ್ನು ಅವಲಂಬಿಸಿರುತ್ತದೆ.

ಸಚಿವ ಸಂಪುಟದ ನಿರ್ಧಾರಗಳ ಅನುಷ್ಠಾನದ ಕಾರ್ಯೋನ್ಮುಖ ಸಂಸ್ಥೆ ಸಚಿವಾಲಯ ಆಗಿರುತ್ತದೆ. ಸಚಿವ ಸಂಪುಟದ ನಿರ್ದೇಶನ, ನೀತಿ ನಿರ್ಣಯ ಹಾಗೂ ಪ್ರಮುಖ ವಿಷಯಗಳ ಕಾರ್ಯಾನುಷ್ಠಾನ ಮುಖ್ಯ ಕಾರ್ಯದರ್ಶಿಯವರ ಹಾಗೂ ಸಚಿವಾಲಯದ ಆದ್ಯ ಕರ್ತವ್ಯವಾಗಿದೆ. ಆದುದರಿಂದಲೇ ಸಚಿವಾಲಯ ತನ್ನ ಸಿಬ್ಬಂದಿಗಳಲ್ಲಿ ವಿಶೇಷವಾದ ಜ್ಞಾನ ಹಾಗೂ ಕಾರ್ಯಶೀಲತೆಯನ್ನು ನಿರೀಕ್ಷಿಸುತ್ತದೆ. ರಾಜ್ಯದ ಹಣಕಾಸು ಹಾಗೂ ಆಡಳಿತದ ಮೇಲೆ ಪರಿಣಾಮ ಉಂಟುಮಾಡುವ ಪ್ರಸ್ತಾವನೆಗಳ ಬಗ್ಗೆ ವಿಶೇಷ ತಜ್ಞತೆಯನ್ನು ಹೊಂದಿದ ಅಧಿಕಾರಿ ಮತ್ತು ನೌಕರರು ಸಹ ಸಚಿವಾಲಯದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ.

ಭತ್ಯೆ ಎಷ್ಟು ಹೆಚ್ಚಳ ಮಾಡಬೇಕು?; ಸಚಿವಾಲಯದಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಅಧಿವೇಶನ ಭತ್ಯೆಯನ್ನು ರೂ. 500 ರಿಂದ ರೂ.1,000 ಗಳಿಗೆ ಹೆಚ್ಚಿಸುವುದು. ಕರ್ನಾಟಕ ಸರ್ಕಾರ ಸಚಿವಾಲಯದ ಗ್ರೂಪ್-ಡಿ ವೃಂದದ ನೌಕರರಿಗೆ ಸಮವಸ್ತ್ರ ಹಾಗೂ ವಾಷಿಂಗ್‌ ಭತ್ಯೆಯನ್ನು ರೂ.400 ರಿಂದ ರೂ.1,000 ಗಳಿಗೆ ಹೆಚ್ಚಿಸುವುದು. ವಾಹನ ಚಾಲಕರಿಗೆ ಕಾಲಮಿತಿ ಮೀರಿ ಕೆಲಸ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಮಾಸಿಕ ರೂ.1500ಗಳ ವಿಶೇಷ ಭತ್ಯೆಯನ್ನು ನೀಡಬೇಕು ಎಂದು ಬೇಡಿಕೆ ಇಡಲಾಗಿದೆ.

ಶೀಘ್ರಲಿಪಿಗಾರರು, ಹಿರಿಯ ಶೀಘ್ರಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರುಗಳಿಗೆ ಮಾತ್ರ ವಿಶೇಷ ಭತ್ಯೆಯನ್ನು ನಿಗದಿಪಡಿಸಿದ್ದು, ಅದೇ ರೀತಿಯ ಕಾರ್ಯ ಸ್ವರೂಪ ಹೊಂದಿರುವ ಆಪ್ತ ಕಾರ್ಯದರ್ಶಿ ವೃಂದದವರಿಗೆ ವಿಶೇಷ ಭತ್ಯೆಯನ್ನು ನಿಗದಿಪಡಿಸಿರುವುದಿಲ್ಲ. ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಆಪ್ತ ಕಾರ್ಯದರ್ಶಿ (ಗ್ರೇಡ್-2), ಆ.ಕಾ (ಗ್ರೇಡ್-1), ಹಿರಿಯ ಆಪ್ತ ಕಾರ್ಯದರ್ಶಿ, ಆಪ್ತ ಕಾರ್ಯದರ್ಶಿ (ಆಯ್ಕೆ ಶ್ರೇಣಿ) ವೃಂದಗಳನ್ನು ಪ್ರತ್ಯೇಕವಾಗಿ ಮಂಜೂರು ಮಾಡಲಾಗಿರುತ್ತದೆ ಹಾಗೂ ವಿಶೇಷ ಕರ್ತವ್ಯ ಸ್ವರೂಪ, ಹೆಚ್ಚಿನ ಜವಾಬ್ದಾರಿ, ಹೆಚ್ಚಿನ ಕಾರ್ಯ ನಿರ್ವಹಣಾವಧಿ ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ. ಆದುದರಿಂದ, ಅಪ್ತ ಕಾರ್ಯದರ್ಶಿ ಹುದ್ದೆಗಳಿಗೂ ವಿಶೇಷ ಭತ್ಯೆ ನಿಗದಿಪಡಿಸಲು ಮನವಿ ಮಾಡಲಾಗಿದೆ.

ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಸರ್ಕಾರದ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ ಆಪ್ತ ಶಾಖೆಯ ಕಾರ್ಯ ನಿರ್ವಹಣೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಆದಾಗ್ಯೂ ಮುಖ್ಯ ಕಾರ್ಯದರ್ಶಿ/ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಪ್ತ ಕಾರ್ಯದರ್ಶಿಯವರಿಗೆ ಮಾತ್ರ ಆಪ್ತ ಶಾಖೆಯ ವಿಶೇಷ ಭತ್ಯೆ ನಿಗದಿಯಾಗಿರುತ್ತದೆ. ಇದರಿಂದ ಒಂದೇ ರೀತಿಯ ಕಾರ್ಯನಿರ್ವಹಣೆ ಮಾಡುತ್ತಿರುವ ಆಪ್ತ ಕಾರ್ಯದರ್ಶಿಗಳಿಗೆ ವಿಶೇಷ ಭತ್ಯೆ ನಿಗದಿಯಲ್ಲಿ ತಾರತಮ್ಯ ಮಾಡಿದಂತಾಗಿರುತ್ತದೆ. ಇದನ್ನು ಸರಿಪಡಿಸಿ ಆಪ್ತ ಕಾರ್ಯದರ್ಶಿ ಸೇರಿದಂತೆ ಇನ್ನಿತರ ವೃಂದಗಳ ಆಪ್ತ ಶಾಖೆಯ ಸಿಬ್ಬಂದಿಗಳಿಗೆ ವಿಶೇಷ ಭತ್ಯೆಯನ್ನು ನೀಡುವಂತೆ ಶಿಫಾರಸ್ಸು ಮಾಡಲು ಆಯೋಗಕ್ಕೆ ಬೇಡಿಕೆ ಇಡಲಾಗಿದೆ.

ಸಚಿವರು ಸರ್ಕಾರದ ಕಾರ್ಯದರ್ಶಿಗಳ ಆಪ್ತ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಶೀಘ್ರಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರುಗಳಿಗೆ ಆಪ್ತ ಶಾಖೆಗೆ ಲಭ್ಯವಿರುವ ವಿಶೇಷ ಭತ್ಯೆಯ ಜೊತೆಗೆ ಅವರು ಹೊಂದಿರುವ ಹುದ್ದೆಗಳಿಗೆ ಲಭ್ಯವಿರುವ ವಿಶೇಷ ಭತ್ಯೆಯನ್ನು ಪಡೆಯಬಹುದಾಗಿರುತ್ತದೆ. ಅದರಂತೆ ಆಪ್ತ ಕಾರ್ಯದರ್ಶಿಗಳಿಗೂ ಹುದ್ದೆಯ ವಿಶೇಷ ಭತ್ಯೆಯನ್ನು ನಿಗದಿಪಡಿಸಿ, ಆಪ್ತ ಶಾಖೆಯ ಭತ್ಯೆಯನ್ನೂ ಪಡೆಯಲು ಶಿಫಾರಸ್ಸು ಮಾಡಲು ಕೋರಿದೆ.

ಪ್ರಸ್ತುತ ಇರುವ ಭತ್ಯೆ, ಪರಿಷ್ಕರಣೆ ಕೋರಿರುವ ಮೊತ್ತ; ಹಿರಿಯ ಶೀಘ್ರಲಿಪಿಗಾರ ಪ್ರಸ್ತುತ ನೀಡುತ್ತಿರುವ ವಿಶೇಷ ಭತ್ಯೆಯ ಮೊತ್ತ 300 ರೂ.ಗಳು. ಪರಿಷ್ಕರಣೆ ಕೋರಿರುವ ಮೊತ್ತ 1000 ರೂ.ಗಳು. ಪತ್ರಾಂಕಿತ ಆಪ್ತ ಸಹಾಯಕ ಪ್ರಸ್ತುತ ನೀಡುತ್ತಿರುವ ವಿಶೇಷ ಭತ್ಯೆಯ ಮೊತ್ತ 400 ರೂ.ಗಳು. ಪರಿಷ್ಕರಣೆ ಕೋರಿರುವ ಮೊತ್ತ 1500 ರೂ.ಗಳು. ಆಪ್ತ ಕಾರ್ಯದರ್ಶಿ (ಗ್ರೇಡ್-2) ಪ್ರಸ್ತುತ ನೀಡುತ್ತಿರುವ ವಿಶೇಷ ಭತ್ಯೆಯ ಮೊತ್ತ 600 ರೂ.ಗಳು. ಪರಿಷ್ಕರಣೆ ಕೋರಿರುವ ಮೊತ್ತ 2000 ರೂ.ಗಳು.

ಆಪ್ತ ಶಾಖೆಯ ವಿಶೇಷ ಭತ್ಯೆ; ಹಿರಿಯ ಶೀಘ್ರಲಿಪಿಗಾರ ಪ್ರಸ್ತುತ ನೀಡುತ್ತಿರುವ ವಿಶೇಷ ಭತ್ಯೆಯ ಮೊತ್ತ 300 ರೂ.ಗಳು. ಪರಿಷ್ಕರಣೆ ಕೋರಿರುವ ಮೊತ್ತ 1000 ರೂ.ಗಳು., ಪತ್ರಾಂಕಿತ ಆಪ್ತ ಸಹಾಯಕ ಪ್ರಸ್ತುತ ನೀಡುತ್ತಿರುವ ವಿಶೇಷ ಭತ್ಯೆಯ ಮೊತ್ತ 400 ರೂ.ಗಳು. ಪರಿಷ್ಕರಣೆ ಕೋರಿರುವ ಮೊತ್ತ 1500 ರೂ.ಗಳು. ಆಪ್ತ ಕಾರ್ಯದರ್ಶಿ (ಗ್ರೇಡ್-2) ಪ್ರಸ್ತುತ ನೀಡುತ್ತಿರುವ ವಿಶೇಷ ಭತ್ಯೆಯ ಮೊತ್ತ 500 ರೂ.ಗಳು. ಪರಿಷ್ಕರಣೆ ಕೋರಿರುವ ಮೊತ್ತ 2000 ರೂ.ಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+