7th Pay Commission: ಸರ್ಕಾರಿ ನೌಕರರ ಮನೆ ಖರೀದಿ, ಇತರ ಮುಂಗಡ ಹೆಚ್ಚಳಕ್ಕೆ ಶಿಫಾರಸು

ಬೆಂಗಳೂರು, ಸೆಪ್ಟೆಂಬರ್ 11: ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ 558 ಪುಟಗಳ ಸಂಪುಟ-1ರ ವರದಿಯ ಭಾಗ-5ರಲ್ಲಿ ಸರ್ಕಾರಿ ನೌಕರರ ಸಾಲಗಳು ಮತ್ತು ಮುಂಗಡಗಳು ಎಂದು ಹಲವು ಶಿಫಾರಸುಗಳನ್ನು ಮಾಡಿದೆ. ಇವುಗಳಲ್ಲಿ ಮನೆ ನಿರ್ಮಾಣ ಮುಂಗಡ, ಹಬ್ಬದ ಮುಂಗಡ, ಮೋಟಾರು ವಾಹನ ಮುಂಗಡ, ಮುಂತಾದವು ಸೇರಿವೆ. ಪ್ರಚಲಿತದಲ್ಲಿರುವ ಮುಂಗಡವನ್ನು ಗಮನಿಸಿ ಹೊಸ ಶಿಫಾರಸು ಮಾಡಲಾಗಿದೆ. ಸರ್ಕಾರ ಈಗಾಗಲೇ ಆಯೋಗದ ವರದಿ ಶಿಫಾರಸು ಜಾರಿಗೆ ಒಪ್ಪಿಗೆ ನೀಡಿದ್ದು, ಒಂದೊಂದು ಅಂಶಗಳನ್ನು ಜಾರಿಗೊಳಿಸುತ್ತಿದೆ.

ಆಯೋಗ ತನ್ನ ವರದಿಯಲ್ಲಿ ಸಾಲಗಳು ಮತ್ತು ಮುಂಗಡಗಳು ಎಂದು ಹಲವು ಅಂಶಗಳನ್ನು ವಿವರಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ತಮ್ಮ ನೌಕರರಿಗಾಗಿ ವಿವಿಧ ಸಾಲಗಳು ಮತ್ತು ಮುಂಗಡಗಳನ್ನು ಮಂಜೂರು ಮಾಡುತ್ತವೆ. ವೇತನ ಮತ್ತು ಉಳಿತಾಯಗಳು ಕಡಿಮೆಯಿದ್ದು, ಬ್ಯಾಂಕುಗಳು ಮತ್ತು ವಾಣಿಜ್ಯ ಲೇವಾದೇವಿ ಸಂಸ್ಥೆಗಳು ಸುಲಭವಾಗಿ ಸಾಲ ನೀಡದಿದ್ದಂತಹ ಸಂದರ್ಭಗಳಲ್ಲಿ ತಮ್ಮ ಸಾಮಾಜಿಕ ಕಾರ್ಯಕ್ರಮಗಳ ಅಥವಾ ದಿನಬಳಕೆ ವಸ್ತುಗಳನ್ನು ಖರೀಸುವಂತಹ ದೊಡ್ಡ ಮಟ್ಟದ ವೆಚ್ಚಗಳನ್ನು ಭರಿಸುವುದಕ್ಕಾಗಿ ನೌಕರರಿಗೆ ಈ ಮುಂಗಡಗಳು ಸಹಾಯಕವಾಗಿರುತ್ತವೆ. ಪ್ರಚಲಿತದಲ್ಲಿರುವ ಮುಂಗಡಗಳು ಮತ್ತು ಅವುಗಳ ಬಗ್ಗೆ ಶಿಫಾರಸು ಹೀಗಿದೆ ಎಂದು ಆಯೋಗ ತಿಳಿಸಿದೆ.

7th Pay Commission Karnataka Recommendations On Government Employee Loan And Advance

ಮನೆ ನಿರ್ಮಾಣ/ ಮನೆ ಖರೀದಿಗಾಗಿ ಮುಂಗಡ: ಪ್ರಸ್ತುತದಲ್ಲಿ ಮನೆ ನಿರ್ಮಾಣ/ ಮನೆ ಖರೀದಿಗಾಗಿ 70 ತಿಂಗಳ ಮೂಲ ವೇತನವನ್ನು ಗ್ರೂಪ್ 'ಎ' ಪ್ರವರ್ಗ ದವರಿಗಾಗಿ ಗರಿಷ್ಟ ರೂ. 40 ಲಕ್ಷಗಳವರೆಗೆ ಮತ್ತು ಇತರೆ ಪ್ರವರ್ಗದವರಿಗಾಗಿ ರೂ. 25 ಲಕ್ಷಗಳವರೆಗೆ ಶೇ. 8.50 ಬಡ್ಡಿ ದರದಲ್ಲಿನ ಮುಂಗಡಕ್ಕೆ ನೌಕರರು ಅರ್ಹರಾಗಿರುತ್ತಾರೆ. ಅಸಲನ್ನು 180 ತಿಂಗಳಲ್ಲಿ (ಗರಿಷ್ಠ) ಮತ್ತು ಬಡ್ಡಿಯನ್ನು 60 ತಿಂಗಳಲ್ಲಿ (ಗರಿಷ್ಠ) ಮರು ಪಾವತಿಸಬೇಕಾಗುತ್ತದೆ. ಮನೆ ನಿರ್ಮಾಣ/ ಖರೀದಿಗಾಗಿ 70 ತಿಂಗಳ ಪರಿಷ್ಕೃತ ಮೂಲ ವೇತನವನ್ನು ಉಳಿಸಿಕೊಂಡು ಗ್ರೂಪ್ 'ಎ' ಪ್ರವರ್ಗಕ್ಕೆ ಗರಿಷ್ಟ ರೂ. 55 ಲಕ್ಷ ಮತ್ತು ಇತರೆ ಪ್ರವರ್ಗಗಳಿಗೆ ರೂ. 40 ಲಕ್ಷಗಳ ಮಿತಿಗೊಳಪಟ್ಟು ಜಾರಿಯಲ್ಲಿರುವ ಷರತ್ತನ್ನು ಮತ್ತು ನಿಬಂಧನೆಗಳೊಂದಿಗೆ ಮುಂಗಡದ ಪ್ರಮಾಣವನ್ನು ಹೆಚ್ಚಿಸಲು ಆಯೋಗ ಶಿಫಾರಸು ಮಾಡಿದೆ.

ಹಬ್ಬದ ಮುಂಗಡ: ಸರ್ಕಾರವು ಇತ್ತೀಚಿಗೆ ಹಬ್ಬದ ಮುಂಗಡವನ್ನು ರೂ. 10,000 ಗಳಿಂದ ರೂ. 25,000 ಗಳಿಗೆ ಹೆಚ್ಚಿಸಿರುವುದನ್ನು ಆಯೋಗವು ಗಮನಿಸಿದೆ. ಈ ಮುಂಗಡವು ಬಡ್ಡಿ ರಹಿತವಾಗಿದ್ದು, 10 ತಿಂಗಳ ಕಂತುಗಳಲ್ಲಿ ಮರುಪಾವತಿಸಬೇಕಾಗುತ್ತದೆ. ಮುಂಗಡವನ್ನು ಇತ್ತೀಚೆಗಷ್ಟೆ ಪರಿಷ್ಕರಿಸಿರುವ ಅಂಶವನ್ನು ಪರಿಗಣಿಸಿ ಇದರಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲವೆಂದು ಆಯೋಗವು ಅಭಿಪ್ರಾಯಪಡುತ್ತದೆ ಎಂದು ಹೇಳಿದೆ.

ಮೋಟಾರು ಕಾರು ಖರೀದಿಗಾಗಿ ಮುಂಗಡ: ಪ್ರಸ್ತುತದಲ್ಲಿ, ರೂ. 67,550 ಅಥವಾ ಮೇಲ್ಪಟ್ಟ ಮೂಲ ವೇತನ ಪಡೆಯುತ್ತಿರುವ ಸಿಬ್ಬಂದಿಯು ಕಾರು ಖರೀದಿಗಾಗಿ ಗರಿಷ್ಠ ರೂ. 3 ಲಕ್ಷಗಳ ಮಿತಿಗೊಳಪಟ್ಟು 16 ತಿಂಗಳ ಮೂಲ ವೇತನದಷ್ಟು ಮುಂಗಡವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಮುಂಗಡವನ್ನು ವಾರ್ಷಿಕ ಶೇ. 12.50ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಅಸಲನ್ನು 100 ತಿಂಗಳುಗಳು ಮತ್ತು ಬಡ್ತಿಯನ್ನು 20 ತಿಂಗಳುಗಳಲ್ಲಿ ಮರು ಪಾವತಿಸಲು ಅವಕಾಶವಿರುತ್ತದೆ.

ಪ್ರಸ್ತುತ ಜಾರಿಯಲ್ಲಿರುವ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು internal combustion (ಐಸಿ) ಇಂಜಿನ್‌ಗಳುಳ್ಳ ವಾಹನಗಳಿಗೆ ಗರಿಷ್ಠ ಮಿತಿಯನ್ನು ರೂ. 6 ಲಕ್ಷಗಳಿಗೆ ಪರಿಷ್ಕರಣೆಯೊಂದಿಗೆ ಈಗಿರುವಂತೆ 16 ತಿಂಗಳ ಪರಿಷ್ಕೃತ ಮೂಲ ವೇತನದಷ್ಟು ಮುಂಗಡವನ್ನು ಮಂಜೂರು ಮಾಡಲು ಆಯೋಗವು ಶಿಫಾರಸು ಮಾಡುತ್ತದೆ.

ವಿದ್ಯುತ್‌ ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಐಸಿ ಇಂಜಿನ್‌ಗಳಿಗೆ ಅನ್ವಯವಾಗುವ ಅರ್ಹತೆ ಮತ್ತು ಮರುಪಾವತಿ ಷರತ್ತುಗಳೊಂದಿಗೆ ಗರಿಷ್ಠ ರೂ. 10 ಲಕ್ಷಗಳ ಮಿತಿಗೊಳಪಟ್ಟು, ವಿದ್ಯುತ್ ವಾಹನ ಖರೀದಿಗಾಗಿ ಮುಂಗಡ ಹಣವನ್ನು ಹೆಚ್ಚಿಸಲು ಆಯೋಗವು ಶಿಫಾರಸ್ಸು ಮಾಡುತ್ತದೆ ಎಂದು ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+