7th Pay Commission: ಪರಿವರ್ತಿತ ನಿವೃತ್ತಿ ವೇತನದ ಪ್ರಕರಣ, ಈ ಮಾಹಿತಿ ತಿಳಿಯಿರಿ

ಬೆಂಗಳೂರು, ಸೆಪ್ಟೆಂಬರ್ 01: ಆಗಸ್ಟ್ ತಿಂಗಳಿನಿಂದಲೇ ಜಾರಿಗೆ ಬರುವಂತೆ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿರುವ ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಅನುಕೂಲ ಮಾಡಿಕೊಟ್ಟಿಲ್ಲ, ನಿವೃತ್ತ ನೌಕರರ ಪಿಂಚಣಿಯನ್ನು ಪರಿಷ್ಕರಣೆ ಮಾಡಿದೆ. ನೌಕರರ ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪರಿಷ್ಕರಣೆ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಆದೇಶ ಹೊರಡಿಸಿರುವ ಡಾ. ರೇಜು ಎಂ. ಟಿ. ಸರ್ಕಾರದ ಕಾರ್ಯದರ್ಶಿ (ವೆಚ್ಚ) ಆರ್ಥಿಕ ಇಲಾಖೆ ಪರಿವರ್ತಿತ ನಿವೃತ್ತಿ ವೇತನದ ಪ್ರಕರಣಗಳಲ್ಲಿ ಪಿಂಚಣಿಯನ್ನು ಪೂರ್ವಸ್ಥಿತಿಗೆ ತರುವುದು, ಜಾರಿಗೆ ಬರುವ ದಿನಾಂಕದ ಕುರಿತು ಆದೇಶದಲ್ಲಿ ನಿಯಮಾವಳಿ, ಮಾರ್ಗಸೂಚಿಗಳನ್ನು ತಿಳಿಸಿದ್ದಾರೆ.

7th Pay Commission Karnataka Government Employee Retirement Converted Pension Benefits

ಪರಿವರ್ತಿತ ನಿವೃತ್ತಿ ವೇತನದ ಪ್ರಕರಣ: ಆದೇಶದಲ್ಲಿ ಪರಿವರ್ತಿತ ನಿವೃತ್ತಿ ವೇತನದ ಪ್ರಕರಣಗಳಲ್ಲಿ ಪಿಂಚಣಿಯನ್ನು ಪೂರ್ವಸ್ಥಿತಿಗೆ ತರುವುದು ಎಂದು ಆದೇಶಿಸಲಾಗಿದೆ. ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 376ರ ಅಡಿ ಸರ್ಕಾರಿ ನೌಕರನು ತನ್ನ ನಿವೃತ್ತಿ ವೇತನದ ಒಂದು ಭಾಗವನ್ನು ಪರಿವರ್ತಿಸಿಕೊಂಡಿದ್ದ ಪಕ್ಷದಲ್ಲಿ, ಪರಿವರ್ತಿಸಲಾದ ದಿನಾಂಕದಿಂದ 15 ವರ್ಷಗಳ ನಂತರ ಅವನ ನಿವೃತ್ತಿ ವೇತನವನ್ನು ಪೂರ್ವಸ್ಥಿತಿಗೆ ತರತಕ್ಕದ್ದು ಎಂದು ಹೇಳಿದೆ.

80 ವರ್ಷಗಳು ಮತ್ತು ಮೇಲ್ಪಟ್ಟ ವಯೋಮಾನದ ನಿವೃತ್ತಿ ವೇತನದಾರರು/ ಕುಟುಂಬ ನಿವೃತ್ತಿ ವೇತನದಾರರಿಗೆ ಹೆಚ್ಚುವರಿ ನಿವೃತ್ತಿ ವೇತನ/ ಹೆಚ್ಚುವರಿ ಕುಟುಂಬ ನಿವೃತ್ತಿ ವೇತನ ಸೌಲಭ್ಯಗಳನ್ನು ಮಂಜೂರು ಮಾಡಿ ಹೊರಡಿಸಲಾದ ದಿನಾಂಕ 11.01.2019ರ ಸರ್ಕಾರಿ ಆದೇಶ ಸಂಖ್ಯೆ: ಆಇ (ವಿ) 120 ಪಿಇಎನ್ 2018ರ ಅವಕಾಶಗಳು ಪರಿಷ್ಕೃತ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನದಲ್ಲಿ ಸೂಕ್ತ ಬದಲಾವಣೆಗಳೊಂದಿಗೆ ಮುಂದುವರೆದು ಅನ್ವಯಿಸುತ್ತದೆ.

ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಜೊತೆಯಾಗಿ ಲಭ್ಯವಿರುವ ಪಿಂಚಣಿದಾರರ ಪ್ರಕರಣಗಳಲ್ಲಿ ಸಂದರ್ಭಾನುಸಾರ ಈ ಮೇಲೆ ತಿಳಿಸಿದ ದಿನಾಂಕ 11.01.2019ರ ಆದೇಶದನ್ವಯ ಲಭ್ಯವಿರುವ ಹೆಚ್ಚುವರಿ ಪಿಂಚಣಿಯ ಸೌಲಭ್ಯವು ಜೀವಂತ ಸದಸ್ಯನ ಪರಿಷ್ಕೃತ ನಿವೃತ್ತಿ ವೇತನಕ್ಕೆ ಮಾತ್ರ ಸೀಮಿತಗೊಳಿಸತಕ್ಕದ್ದು ಎಂದು ತಿಳಿಸಿದೆ.

ಯು.ಜಿ.ಸಿ. ಎ.ಐ.ಸಿ.ಟಿ.ಇ ಮತ್ತು ಐ.ಸಿ.ಎ.ಆರ್. ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದು, ದಿನಾಂಕ 01.07.2022ರ ಪೂರ್ವದಲ್ಲಿ ನಿವೃತ್ತರಾದ ರಾಜ್ಯ ಸರ್ಕಾರಿ ನೌಕರರಿಗೆ ಈ ಆದೇಶಗಳು ಅನ್ವಯಿಸುತ್ತವೆ. ಪರಿಷ್ಕೃತ ನಿವೃತ್ತಿ ವೇತನ/ ಪರಿಷ್ಕೃತ ಕುಟುಂಬ ನಿವೃತ್ತಿ ವೇತನದ ಮೊತ್ತವು ಈ ಆದೇಶದಲ್ಲಿ ತೋರಿಸಿದಂತೆ ಲಭ್ಯವಿರುತ್ತದೆ ಹಾಗೂ ಸದರಿ ಪಿಂಚಣಿ ಪರಿಷ್ಕರಣೆಯ ಆರ್ಥಿಕ ಸೌಲಭ್ಯವು 1ನೇ ಆಗಸ್ಟ್ 2024 ರಿಂದ ಲಭ್ಯವಾಗತಕ್ಕದ್ದು.

ದಿನಾಂಕ 01.07.2022 ಮತ್ತು ನಂತರದಲ್ಲಿ ನಿವೃತ್ತರಾದ ಯು.ಜಿ.ಸಿ, ಎ.ಐ.ಸಿ.ಟಿ.ಇ ಮತ್ತು ಐ.ಸಿ.ಎ.ಆರ್ ವೇತನ ಶ್ರೇಣಿಗಳ ನೌಕರರಿಗೆ ಈ ಆದೇಶವು ಅನ್ವಯಿಸುವುದಿಲ್ಲ. ಈ ಸಂಬಂಧ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು. ಎನ್.ಜೆ.ಪಿ.ಸಿ. ವೇತನ ಶ್ರೇಣಿಗಳ ಕಾರ್ಯನಿರತ ಮತ್ತು ನಿವೃತ್ತ ನ್ಯಾಯಾಂಗ ಅಧಿಕಾರಿಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ಆದೇಶ ತಿಳಿಸಿದೆ.

ಜಾರಿಗೆ ಬರುವ ದಿನಾಂಕ: ಪರಿಷ್ಕೃತ ನಿವೃತ್ತಿ ವೇತನ/ ಪರಿಷ್ಕೃತ ಕುಟುಂಬ ನಿವೃತ್ತಿ ವೇತನವು ದಿನಾಂಕ 01.07.2022 ರಿಂದ ಜಾರಿಗೆ ಬರುತ್ತವೆ. ಆದರೆ, ನಿವೃತ್ತಿ ವೇತನ ಕುಟುಂಬ ನಿವೃತ್ತಿ ವೇತನ ಪರಿಷ್ಕರಣೆಯ ಕಾರಣದಿಂದ ಉಂಟಾಗುವ ಹೆಚ್ಚಳದ ಆರ್ಥಿಕ ಲಾಭವು 1ನೇ ಆಗಸ್ಟ್ 2024ರಿಂದ ಪ್ರಾಪ್ತವಾಗತಕ್ಕದ್ದು.

ದಿನಾಂಕ 01.07.2022ರಂದು ಮತ್ತು ನಂತರದಲ್ಲಿ ಹಾಗೂ ದಿನಾಂಕ 01.08.2024ಕ್ಕೆ, ಮುಂಚಿತವಾಗಿ ಸೇವೆಯಿಂದ ನಿವೃತ್ತನಾದ ಅಥವಾ ಸೇವೆಯಲ್ಲಿರುವಾಗಲೇ ಮೃತನಾದ ಕಾರಣದಿಂದ ಸೇವೆಯಲ್ಲಿರುವುದು ಕೊನೆಗೊಂಡ ಸರ್ಕಾರಿ ನೌಕರನ ಪ್ರಕರಣಗಳಲ್ಲಿ ಅವನ ಪಿಂಚಣಿ ಸೌಲಭ್ಯಗಳನ್ನು ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2018ರ ಪ್ರಸಕ್ತ ಉಪಲಬ್ಧಗಳನ್ನು ಆಧಾರವಾಗಿರಿಸಿ ಲೆಕ್ಕಹಾಕತಕ್ಕದ್ದು.

ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ರನ್ವಯ ಕಾಲ್ಪನಿಕವಾಗಿ ಪರಿಷ್ಕರಿಸಲಾದ ವೇತನದ ಆಧಾರದ ಮೇಲೆ ನಿರ್ಧರಿಸಲಾದ ಪಿಂಚಣಿ ಸೌಲಭ್ಯದ ಆರ್ಥಿಕ ಲಾಭವು 1ನೇ ಆಗಸ್ಟ್ 2024ರಿಂದ ಪ್ರಾಪ್ತವಾಗತಕ್ಕದ್ದು.

ದಿನಾಂಕ: 01.08.2024ರಂದು ಮತ್ತು ನಂತರದಲ್ಲಿ ನಿವೃತ್ತರಾಗುವ ಮೃತರಾಗುವ ಸರ್ಕಾರಿ ನೌಕರರ ನಿವೃತ್ತಿ ಸೌಲಭ್ಯಗಳನ್ನು ನಿರ್ಧಿಷ್ಟಪಡಿಸಿರುವ ಗರಿಷ್ಠ ಮಿತಿಯ ಪರಿಮಿತಿಗೊಳಪಟ್ಟು ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಪಡೆದ ಉಪಲಬ್ಧಗಳನ್ನು ಆಧಾರವಾಗಿರಿಸಿ ಲೆಕ್ಕಹಾಕತಕ್ಕದ್ದು.

ದಿನಾಂಕ 01.07.2022ರ ಪೂರ್ವದಲ್ಲಿ ನಿವೃತ್ತರಾದ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ನಿವೃತ್ತಿ ವೇತನ ಪರಿಷ್ಕರಣೆ ಕುಟುಂಬ ನಿವೃತ್ತಿ ವೇತನ ಪರಿಷ್ಕರಣೆಯಿಂದಾಗಿ ಉಂಟಾಗುವ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನ ಹೆಚ್ಚಳದ ಮೊತ್ತವು ಆದೇಶದಲ್ಲಿ ತೋರಿಸಿರುವಂತೆ ಇರತಕ್ಕದ್ದು ಮತ್ತು ಅದನ್ನು 1ನೇ ಆಗಸ್ಟ್ 2024ರಿಂದ ಅನ್ವಯಿಸುವಂತೆ ನಗದಾಗಿ ಪಾವತಿಸುವುದು.

ಈ ಆದೇಶದ ಅವಕಾಶಗಳ ನಿರ್ವಚನೆ/ ಅರ್ಥೈಸುವಲ್ಲಿ ಅಥವಾ ಈ ಆದೇಶವನ್ನು ಜಾರಿಗೊಳಿಸುವಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದಲ್ಲಿ ಸೂಕ್ತ ಆದೇಶಕ್ಕಾಗಿ ಆರ್ಥಿಕ ಇಲಾಖೆಗೆ ಸಲ್ಲಿಸುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+