7th Pay Commission: ಸರ್ಕಾರಿ ನೌಕರರ 5 ದಿನಗಳ ಕೆಲಸದ ವಾರ ಸಾಧ್ಯವೇ?

ಬೆಂಗಳೂರು, ಸೆಪ್ಟೆಂಬರ್ 16: ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕರ್ನಾಟಕ ಸರ್ಕಾರಕ್ಕೆ ಕೇವಲ ಸರ್ಕಾರಿ ನೌಕರರ ವೇತನ, ಭತ್ಯೆಗಳ ಹೆಚ್ಚಳದ ಕುರಿತು ಶಿಫಾರಸು ಮಾಡಿಲ್ಲ. ನೌಕರರ ವಿವಿಧ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಿ, ವಿವರವಾದ ವರದಿ ಕೊಟ್ಟಿದೆ. ಇದರಲ್ಲಿ ಐದು ದಿನಗಳ ಕೆಲಸದ ವಾರವೂ ಸೇರಿದೆ. ಇದು ಸರ್ಕಾರದಿಂದ ಜಾರಿಗೊಳಿಸಲು ಸಾಧ್ಯವೇ?, ಈ ವಿಚಾರದಲ್ಲಿ 558 ಪುಟಗಳ ಸಂಪುಟ-1ರ ವರದಿಯಲ್ಲಿ ಆಯೋಗ ಪರಿಶೀಲಿಸಿದ ಅಂಶಗಳು ಏನು? ಎಂಬ ಮಾಹಿತಿ ಇಲ್ಲಿದೆ.

ಆಯೋಗ ತನ್ನ ವರದಿಯಲ್ಲಿ ಒಂದು ವಿಷಯದ ಚರ್ಚೆಯಲ್ಲಿ ಕಾಲಕಾಲಕ್ಕೆ ಹಲವು ಭಾಗೀದಾರರು ನಿರತರಾಗಿದ್ದಾರೆ ಅದು ರಾಜ್ಯ ಸರ್ಕಾರಿ ನೌಕರರಿಗೆ 5 ದಿನಗಳ ಕೆಲಸದ ವಾರವನ್ನು ರಾಜ್ಯ ಸರ್ಕಾರ ಅಳವಡಿಸಿಕೊಳ್ಳಬೇಕೆ. ಈ ಪದ್ಧತಿಗೆ ವಾಸ್ತವವವಾಗಿ, ಕೇಂದ್ರದ ಮಾದರಿಯಲ್ಲಿ ಐದು ದಿನಗಳ ಕೆಲಸ ಮತ್ತು ಎರಡು ದಿನಗಳ ವಿಶ್ರಾಂತಿ ಎಂಬ ಪದ್ಧತಿಯನ್ನು ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯಾದ್ಯಂತ ಐದು ದಿನಗಳ ಕೆಲಸದ ವಾರವನ್ನು ಅಳವಡಿಸಿಕೊಳ್ಳುವುದಕ್ಕಾಗಿ ಈ ಆಯೋಗವು ಕೆಎಸ್‌ಜಿಇಎ ಮತ್ತು ಇತರೆ ಇಲಾ ಸಂಘಗಳಿಂದ ಹಲವು ಮನವಿಗಳನ್ನು ಸ್ವೀಕರಿಸಿರುತ್ತದೆ ಎಂದು ಹೇಳಿದೆ.

7th Pay Commission Karnataka Checkpoints For Five Days Working For Government Employees

ಆಯೋಗದಲ್ಲಿ ಚರ್ಚಿಸುವ ಸಂದರ್ಭದಲ್ಲಿ ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆಯನ್ನು ಪರಿಗಣಿಸಲು ಕೋರಿಕೊಳ್ಳುವುದರ ಮೂಲಕ ತಮ್ಮ ಬೇಡಿಕೆಯನ್ನು ಹಲವು ನೌಕರರ ಸಂಘಗಳು ಸಮರ್ಥಿಸಿಕೊಂಡಿರುತ್ತವೆ. ಇದು ಕುಟುಂಬ ಸ್ನೇಹಿ ಉದ್ಯೋಗದ ಆಚರಣೆಗಳಿಗೆ ಸೂಕ್ತ ಪರಿಗಣನೆಯನ್ನು ನೀಡುತ್ತದೆ, ಇದು ಉದ್ಯೋಗದಾತರಿಗೆ ಮತ್ತು ಉದ್ಯೋಗಿಗಳಿಬ್ಬರಿಗೂ ಸಹಾಯಕವಾಗುತ್ತದೆ ಮತ್ತು ಕೆಲಸದ ಜೀವನ ಮತ್ತು ವಿಶ್ರಾಂತಿಯ ಜೀವನ ಸಮತೋಲನವನ್ನು ಸೂಕ್ತವಾಗಿ ಪರಿಗಣಿಸುವುದನ್ನು ನೋಡುತ್ತದೆ. ಇದು ಉದ್ಯೋಗ ಸಂತೃಪ್ತಿ ಮತ್ತು ಉತ್ಪಾದಕತೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಈ ವಿಷಯವನ್ನು 2011ರ ಅಧಿಕಾರಿ ವೇತನ ಸಮಿತಿಯು ಸೂಕ್ಷ್ಮವಾಗಿ ಗಮನಿಸಿರುತ್ತದೆ. ಸರ್ಕಾರಿ ಕಛೇರಿಗಳು ಐದು ದಿನಗಳ ಕೆಲಸ ಮಾಡುವ ಕುರಿತ ಅಧ್ಯಯನದಲ್ಲಿ ಭಾರತೀಯ ನಿರ್ವಹಣಾ ಸಂಸ್ಥೆ, ಬೆಂಗಳೂರು ನಿರತವಾಗಿತ್ತು ಮತ್ತು ಇದು ಪ್ರತಿ ವಾರದಲ್ಲಿ 5 ದಿನಗಳ ಕೆಲಸದ ಅವಧಿಯನ್ನು ನಿಗದಿಪಡಿಸಲು ಶಿಫಾರಸ್ಸು ಮಾಡಿತ್ತು. ಸಮಿತಿಯ ವರದಿಯಲ್ಲಿ ಕಾಲಾವಧಿಯವರೆಗಿನ ಕೆಲಸವು ಸಂಸ್ಥೆಗಳ ಉತ್ಪಾದಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವುದಿಲ್ಲವೆಂದು ಉಲ್ಲೇಖಿಸಿರುತ್ತದೆ. ಅತಿಯಾದ ದೀರ್ಘವಾಗಿ ಮತ್ತು ಪ್ರಯಾಸಕರ ಕೆಲಸದ ವಾರಗಳು ಅಯಾಸಕ್ಕೆ ಕಾರಣವಾಗಬಹುದು ಮತ್ತು ಇದರಿಂದಾಗಿ ಕಡಿಮೆ ಉತ್ಪಾದಕತೆಗೆ ಕಾರಣವಾಗುತ್ತದೆ. ಕಾರ್ಯಬಲ ಮತ್ತು ಸಂಸ್ಥೆಗಳ ಬೆಳವಣಿಗೆ ಮತ್ತು ಸದೃಢತೆಗಾಗಿ ಪ್ರಾಮುಖ್ಯತೆ ಇರುವುದರಿಂದ ಕೆಲಸ ಮತ್ತು ವಿರಾಮದ ನಡುವೆ ಸರಿಯಾದ ಸಮತೋಲನವಿರಬೇಕು. ವಾಸ್ತವವಾಗಿ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಗುಣಮಟ್ಟದ ಮೇಲೆ ಹೆಚ್ಚಿನ ಗಮನಹರಿಸಬೇಕು ಮತ್ತು ಐದು ದಿನಗಳ ಕೆಲಸದ ವಾರವು ಪ್ರಗತಿಪರ ಬದಲಾವಣೆಯ ದಿಕ್ಕಿನೆಡೆಗೆ ಎಂದು ಕಾಣಬಹುದು.

ಈ ವರದಿಯು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಜರ್ಮನಿ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಚೀನಾ, ಇಂಡೋನೆಷಿಯಾ ಮತ್ತು ಕೊಲಂಬಿಯಾ ಐದು ದಿನಗಳ ಕೆಲಸದ ವಾರವನ್ನು ಅಳವಡಿಸಿಕೊಂಡಿರುವುದನ್ನು ಸಹ ಉಲ್ಲೇಖಿಸಿದೆ ಮತ್ತು ಈ 2011 ವರದಿಯಲ್ಲಿ, ಐದು ದಿನಗಳ ಕೆಲಸದ ವಾರವನ್ನು ವಿರೋಧಿಸಲು ಮೂಲ ಕಾರಣ 1985ರಲ್ಲಿ ಕರ್ನಾಟಕದಲ್ಲಿ ಪರಿಚಯಿಸಿದ ಆರಂಭದಲ್ಲಿಯೇ ಇದು ವಿಫಲವಾಯಿತು ಎಂದು ಉಲ್ಲೇಖಿಸಿದೆ. ಇದು ಸರ್ಕಾರಿ ಕಛೇರಿಗಳ ಮತ್ತು ಸಂಸ್ಥೆಗಳ ದಕ್ಷತೆಯನ್ನು ಇನ್ನಷ್ಟು ಕುಂಠಿತವಾಗುವುದಕ್ಕೆ ಕಾರಣವಾಯಿತು ಎಂಬ ಸಾರ್ವಜನಿಕರ ಸಾಮಾನ್ಯ ಗ್ರಹಿಕೆಯ ಆಧಾರದ ಮೇಲೆ ಒಂದು ವರ್ಷದೊಳಗೆ ಇದನ್ನು ಹಿಂತೆಗೆದುಕೊಳ್ಳಲಾಯಿತು.

1985ರ ಪ್ರಸ್ತಾವದ ಪ್ರಮುಖ ಲಕ್ಷಣಗಳೆಂದರೆ, ಕೆಲಸದ ವೇಳೆಯು ಬೆಳಗೆ 10 ರಿಂದ ಸಂಜೆ 6 ಗಂಟೆವರೆಗೆ ಜೊತೆಗೆ 30 ವಿಮಿಷಗಳ ಊಟದ ಸಮಯವನ್ನ ಕಡಿತಗೊಳಿಸಲಾಯಿತು. ಆಸ್ಪತ್ರೆಗಳು, ಖಜಾನೆಗಳು, ಶಾಲೆಗಳು ಮತ್ತು ಕಾಲೇಜುಗಳು ವಾರದ ಅರು ದಿನಗಳ ಕಾಲ ಕಾರ್ಯನಿರ್ವ ಹಿಸುವುದು, ನ್ಯಾಯಲಯಗಳಲ್ಲಿನ ಕೆಲಸದ ಅವಧಿಯನ್ನು ಮಾನ್ಯ ಉಚ್ಚ ನ್ಯಾಯಾಲಯದ ನಿರ್ಧಾರಕ್ಕೆ ಬಿಡಲಾಗಿತ್ತು ಮತ್ತು ವಾರದಲ್ಲಿ ಐದು ದಿನಗಳ ಕೆಲಸ ಅವಧಿಗೆ ಬದಲಾದ ಕಛೇರಿಗಳಲ್ಲಿ ಸಾಂದರ್ಭಿಕ ರಜೆಗಳನ್ನ 15 ರಿಂದ 12ಕ್ಕೆ ಇಳಿಸಲಾಯಿತು. ಆಧುನಿಕ ಕೆಲಸದ ಪದ್ಧತಿಯನ್ನು ಅಳವಡಿಸಿಕೊಳ್ಳುವ ಉದ್ದೇಶವೆಂದು ಇದನ್ನು ಗಮನಿಸಲಾಗಿತ್ತು, ಇದು ಜನರ ಟೀಕೆಗಳನ್ನು ಸೃಷ್ಟಿಸಿತು ಅದೆಂದರೆ, ನೌಕರರು ಶುಕ್ರವಾರ ಮಧ್ಯಾಹ್ನವೇ ಕಛೇರಿಯನ್ನು ಬಿಟ್ಟು ತೆರಳುತ್ತಿದ್ದರು ಮತ್ತು ಸೋಮವಾರ ತಡವಾಗಿ ಬರುವುದು ಮತ್ತು ಶಿಸ್ತು ಮತ್ತು ಸಮಯ ಪಾಲನೆಯನ್ನು ಅನುಸರಿಸದೆಯಿರುವುದರಿಂದ ಮತ್ತು ಪರಿವರ್ತಿಗೆ ಕಡಿಮೆ ಸಮಯದ ಕಾರಣ, ಬದಲಾವಣೆಯನ್ನು ಸ್ಥಿರಗೊಳಿಸಲು ಸಾಕಾಷ್ಟು ಸಮಯವಿಲ್ಲದ ಕಾರಣ ಹೊಸ ಪದ್ಧತಿಯು ಯಶಸ್ವಿಯಾಗಲಿಲ್ಲ.

ಈ ಕುರಿತು ಭಾರತೀಯ ನಿರ್ವಹಣಾ ಸಂಸ್ಥೆಯ (ಐಐಎಮ್) ಅಧ್ಯಯನವು ಹಲವು ಪ್ರಯೋಜನಗಳನ್ನು ಪಟ್ಟಿ ಮಾಡಿದೆ. ಅವುಗಳೆಂದರೆ, ಸಾರಿಗೆ, ಇಂಧನ, ವಿದ್ಯುತ್ ನೀರು ಮತ್ತು ಇತರೆ ಪ್ರಾಸಂಗೀಕ ಸಾಮಾಗ್ರಿಗಳ ಮೇಲಿನ ಸರ್ಕಾರಿ ವೆಚ್ಚದ ದೃಷ್ಟಿಯಿಂದ ಇದು ಗಮನಾರ್ಹವಾಗಿ ಉಳಿತಾಯವಾಗುತ್ತದೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಮತ್ತು ಪರಿಸರ ಮಾಲಿನ್ಯದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತದೆ. ಸರ್ಕಾರಿ ರಜೆಗಳು ಮತ್ತು ಸಾಂದರ್ಭಿಕ ರಜೆಗಳಲ್ಲಿ ಇಳಿಕೆಯಾಗುತ್ತದೆ. ಕೆಲವೇ ವಾರದ ಮಧ್ಯಂತರ ರಜೆಗಳು, ಸರ್ಕಾರಿ ನೌಕರರು ತಮ್ಮ ಕುಟುಂಬದೊಂದಿಗೆ ಮತ್ತು ತಮ್ಮ ಮಕ್ಕಳ ಶಿಕ್ಷಣ ಮತ್ತು ಇತರೆ ಪತ್ಯೇತರ ಚಟುವಟಿಕೆಗಳಲ್ಲಿ ಸಮಯವನ್ನು ಕಳೆಯಲು ಗುಣಮಟ್ಟದ ಸಮಯವು ದೊರಕುತ್ತದೆ. ಮುಂದುವರೆದು, ಕರ್ನಾಟಕವು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಐದು ದಿನಗಳ ಕೆಲಸದ ಅವಧಿಯನ್ನು ಆಯ್ಕೆ ಮಾಡಿಕೊಂಡರೆ, ಶಿಕ್ಷಕರಿಗೆ ಪ್ರತಿ ವಾರ ತಮ್ಮ ಶೈಕ್ಷಣಿಕ ಕೆಲಸವನ್ನು ತಯಾರಿಸುವುದಕ್ಕೆ ಇನ್ನೊಂದು ದಿನ ದೊರಕುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಇದು ಸರ್ಕಾರಿ ಕಾರ್ಯಬಲದಲ್ಲಿ 205 ಲಕ್ಷಕ್ಕೂ ಹೆಚ್ಚಿರುವ ಅಂದರೆ ಶೇ.40ಕ್ಕಿಂತ ಹೆಚ್ಚಿರುವ ಶಿಕ್ಷಕರಿಗೆ ಪ್ರಯೋಜನವಾಗುತ್ತದೆ ಮತ್ತು ಹೆಚ್ಚು ಸಮಯವನ್ನು ಅಧ್ಯಾಯನ ಮಾಡಲು ಮತ್ತು ಐದು ಮಿಲಿಯನ್ ಮಕ್ಕಳಿಗೆ ಆಟವಾಡಲು ಸಹ ಸಮಯವು ದೊರಕಿದಂತಾಗುತ್ತದೆ.

ಆದುದರಿಂದ, 1985ರಲ್ಲಿ ಏಕೆ ಈ ಪರಿಕಲ್ಪನೆಯು ವಿಫಲವಾಗಿರುವುದರ ತನ್ನ ವಿಶ್ಲೇಷಣೆಯು ಏನೇ ಇದ್ದರೂ, 2011ರಲ್ಲಿ ಸಲ್ಲಿಸಲಾದ ವರದಿಯಲ್ಲಿ ಐದು ದಿನಗಳ ವಾರದ ಕೆಲಸವನ್ನು ಜಾರಿಗೊಳಿಸಿದಲ್ಲಿ, ವಾರದ ಐದು ದಿನಗಳ ಕೆಲಸದ ಅವಧಿಯನ್ನು ಭಾರತ ಸರ್ಕಾರ ಮತ್ತು ಇತರೆ ಅನೇಕ ರಾಜ್ಯಗಳು ಅಳವಡಿಸಿಕೊಂಡ ವಿಧಾನದಲ್ಲಿ (1989 ರಿಂದ ಜಾರಿಯಲ್ಲಿದ್ದು), ಕೆಲಸದ ಸಂಸ್ಕೃತಿಯನ್ನು ಸುಧಾರಿಸುವ ಕ್ರಮಗಳ ಜೊತೆಗೆ ಕೇವಲ ತಮ್ಮ ಸಮಯವನ್ನು ಗುರುತಿಸುವುದಕ್ಕಿಂತ ರಾಜ್ಯ ಸರ್ಕಾರಿ ನೌಕರರು ಗುಣಮಟ್ಟ ಮತ್ತು ದಕ್ಷತೆಗೆ ಹೆಚ್ಚು ಒಲವು ತೋರಿಸುತ್ತಾರೆ ಎಂದು ವರದಿಯು ಎತ್ತಿ ತೋರಿಸಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+