• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದ 77 ಶಾಸಕರ ವಿರುದ್ಧ ದಾಖಲಾಗಿವೆ ಕ್ರಿಮಿನಲ್ ಪ್ರಕರಣ!

By Nayana
|

ಬೆಂಗಳೂರು, ಮೇ 17: ರಾಜ್ಯದ 222 ಶಾಸಕರ ಪೈಕಿ 77 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಸ್ವತಃ ಶಾಸಕರು ಘೋಷಿಸಿಕೊಂಡಿದ್ದಾರೆ.

ಈ ಪೈಕಿ 54 ಶಾಸಕರ ವಿರುದ್ಧ ಕೊಲೆಯತ್ನ ಹಾಗೂ ಅಪಹರಣದಂತಹ ಗಂಭೀರ ಆರೋಪಗಳೂ ಇವೆ. ನಾಲ್ವರ ವಿರುದ್ಧ ಕೊಲೆಯತ್ನ, 6 ಶಾಸಕರ ವಿರುದ್ಧ ದ್ವೇಷ ಪ್ರಚೋದಕ ಭಾಷಣ ಮಾಡಿದ ಆರೋಪಗಳೂ ಸೇರಿವೆ.

ಬಿಜೆಪಿಯ 104 ಶಾಸಕರ ಪೈಕಿ 42 ಮಂದಿ, ಕಾಂಗ್ರೆಸ್ 78 ಶಾಸಕರ ಪೈಕಿ 23 ಹಾಗೂ ಜೆಡಿಎಸ್‌ನ 38 ಶಾಸಕರ ಪೈಕಿ 11 ಮಂದಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಸ್ವಯಂ ಘೋಷಿಸಿಕೊಂಡಿದ್ದಾರೆ.

ಬಿಜೆಪಿಯ 104 ಶಾಸಕರ ಪೈಕಿ 42, ಕಾಂಗ್ರೆಸ್‌ನ 78 ಶಾಸಕರ ಪೈಕಿ 23, ಹಾಗೂ ಜೆಡಿಎಸ್‌ನ 38 ಶಾಸಕರ ಪೈಕಿ 11 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಅದರಲ್ಲೂ ಕ್ರಮವಾಗಿ 29 ಬಿಜೆಪಿ, 17 ಕಾಂಗ್ರೆಸ್ ಹಾಗೂ 8 ಜೆಡಿಎಸ್ ಶಾಸಕರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಇವೆ.

ಶಾಸಕರ ಆಸ್ತಿ ಹೆಚ್ಚಳ: ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ 2ನೇ ಸ್ಥಾನ!

ಕಳೆದ 2013ರಲ್ಲಿ ಜಯ ಗಳಿಸಿ ಈ ಸಲವೂ ಆಯ್ಕೆಯಾಗಿರುವ ಸುಮಾರು 94 ಶಾಸಕರ ಆಸ್ತಿ ಇದೀಗ ಸರಾಸರಿ ಶೇ.90ರಷ್ಟು ಹೆಚ್ಚಳವಾಗಿದ್ದು, ಎಂ.ಟಿ.ಬಿ.ನಾಗರಾಜು, ಡಿ.ಕೆ.ಶಿವಕುಮಾರ್, ಬೈರತಿ ಸುರೇಶ್, ಆರ್.ಶಂಕರ್, ಎಂ.ಕೃಷ್ಣಪ್ಪ, ಆರ್.ವಿ.ದೇಶಪಾಂಡೆ ಮತ್ತು ಉದಯ್ ಗರುಡಾಚಾರ್ ಟಾಪ್ ಫೈವ್ ಪಟ್ಟಿಯಲ್ಲಿದ್ದಾರೆ.

ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹಾಗೂ ಕರ್ನಾಟಕ ಎಲೆಕ್ಷನ್ ವಾಚ್ (ಕೆಇಡಬ್ಲೂೃ) ನಡೆಸಿದ ಜಂಟಿ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದೆ.

ಈ ಹಿಂದೆ 2013ರಲ್ಲಿ ಸರಾಸರಿ 26.92 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದ ಶಾಸಕರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ವೇಳೆ ಸಲ್ಲಿಸಿರುವ ಆಸ್ತಿ ಘೋಷಣೆಯಲ್ಲಿ ಸರಾಸರಿ 44.24 ಕೋಟಿ ರೂ.ಗಳ ಒಡೆಯರಾಗಿದ್ದು, ಶಾಸಕರ ಆಸ್ತಿ ಹೆಚ್ಚಳದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಮೊದಲ ಸ್ಥಾನದಲ್ಲಿದ್ದಾರೆ.

ಪ್ರಿಯಾಕೃಷ್ಣ ಸೇರಿದಂತೆ ಕಣದಲ್ಲಿ 883 ಕೋಟ್ಯಧಿಪತಿಗಳು

ಮರು ಆಯ್ಕೆಯಾದ ಶಾಸಕರ ಆಸ್ತಿ ಹೆಚ್ಚಳದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಒಟ್ಟು 47 ಶಾಸಕರು ಮರು ಆಯ್ಕೆಯಾಗಿದ್ದು, 2013ರಲ್ಲಿ ಇದ್ದ ಸರಾಸರಿ ಆಸ್ತಿ 43 ಕೋಟಿ ರೂ.ಗಳಿಂದ ಈಗ ಸರಾಸರಿ 83 ಕೋಟಿ ರೂ.ಗಳಿಗೆ ಮೌಲ್ಯ ಹೆಚ್ಚಿದೆ.

ಅಂದರೆ ಪ್ರತಿಯೊಬ್ಬ ಶಾಸಕರ ಸರಾಸರಿ ಆಸ್ತಿ 43 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಇದು ಶೇ.108ರಷ್ಟು ವೃದ್ಧಿಯಾಗಿದೆ.

ಇನ್ನು ಬಿಜೆಪಿಯ 34 ಮಂದಿ ಮರು ಆಯ್ಕೆಯಾಗಿದ್ದು, ಇವರ ಆಸ್ತಿ ಸರಾಸರಿ 13 ಕೋಟಿ ರೂ.ಗಳಿಂದ 21 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಅಂದರೆ ಸರಾಸರಿ 7 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದ್ದು, ಶೇ.53ರಷ್ಟು ಬೆಳವಣಿಗೆ ಹೊಂದಿದ್ದಾರೆ.

ಜೆಡಿಎಸ್‌ನ 13 ಮಂದಿ ಮರು ಆಯ್ಕೆ ಬಯಸಿದ್ದು, ಅವರ ಆಸ್ತಿ 21 ಕೋಟಿ ರೂ.ಗಳಿಂದ 28 ಕೋಟಿ ರೂ.ಗಳಿಗೆ ತಲುಪಿದೆ. 6 ಕೋಟಿ ರೂ.ಗಳ ಹೆಚ್ಚು ಆಸ್ತಿ ಹೊಂದಿ, ಶೇ.30ರಷ್ಟು ಬೆಳವಣಿಗೆ ದಾಖಲಿಸಿದ್ದಾರೆ.

ಒಟ್ಟು 94 ಶಾಸಕರ ಸರಾಸರಿ ಆಸ್ತಿ 28 ಕೋಟಿ ರೂ.ಗಳಿಂದ 53 ಕೋಟಿ ರೂ.ಗಳಿಗೆ ಹೆಚ್ಚಳವಾಗಿದ್ದು, 25 ಕೋಟಿ ರೂ.ಗಳ ಹೆಚ್ಚುವರಿ ಆಸ್ತಿ ಮಾಡಿದ್ದಾರೆ. ಆ ಮೂಲಕ ಶೇ.90ರಷ್ಟು ಹೊಸ ಆಸ್ತಿ ಗಳಿಸಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್ ಆಸ್ತಿ 251 ಕೋಟಿ ರೂ.ಗಳಿಂದ 840 ಕೋಟಿ ರೂ.ಗಳಿಗೆ ಹೆಚ್ಚಳವಾಗಿದ್ದು, ಸುಮಾರು 588 ಕೋಟಿ ರೂ.ಗಳಷ್ಟು ಆಸ್ತಿ ವೃದ್ಧಿಯಾಗಿದೆ. ಅಂದರೆ ಶೇ.234 ರಷ್ಟು ಆಸ್ತಿ ಮೌಲ್ಯ ಹೆಚ್ಚಳವಾಗಿದೆ. ಹೊಸಕೇಟೆ ಶಾಸಕ ಎನ್.ನಾಗರಾಜು (ಎಂಟಿಬಿ) ಅವರ ಆಸ್ತಿ 470 ಕೋಟಿ ರೂ.ಗಳಿಂದ 1,015 ಕೋಟಿ ರೂ.ಗಳಿಗೆ ಹೆಚ್ಚಿದ್ದು, ಈ ಅವಧಿಯಲ್ಲಿ 545 ಕೋಟಿ ರೂ.ಗಳ ಆಸ್ತಿ ವೃದ್ಧಿಯಾಗಿದೆ. ಅಂದರೆ ಶೇ.157ರಷ್ಟು ಆಸ್ತಿ ಮೌಲ್ಯ ವೃದ್ಧಿಸಿದೆ.

ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಸ್ತಿ 67 ಕೋಟಿ ರೂ.ಗಳಿಂದ 183 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಅಂದರೆ 115 ಕೋಟಿ ರೂ.ಗಳ ಶೇ.170ರಷ್ಟು ಆಸ್ತಿ ವೃದ್ಧಿಯನ್ನು ಶಾಮನೂರು ಆದಾಯಘೋಷಣೆಯಲ್ಲಿ ಹೇಳಿಕೊಂಡಿದ್ದಾರೆ.

ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರ ಆಸ್ತಿ 113 ಕೋಟಿ ರೂ.ಗಳಿಂದ 215 ಕೋಟಿ ರೂ.ಗಳಿಗೆ ಏರಿದೆ. ಐದು ವರ್ಷಗಳ ಅವಧಿಯಲ್ಲಿ 101 ಕೋಟಿ ರೂ.ಗಳ ಆಸ್ತಿ ವೃದ್ಧಿಸಿದ್ದು, ಶೇ.89ರಷ್ಟು ಬೆಳವಣಿಗೆ ಸಾಧಿಸಿದ್ದಾರೆ.

 ಅತಿ ಹೆಚ್ಚು ಆದಾಯ ಘೋಷಿಸಿಕೊಂಡ ಶಾಸಕರು

ಅತಿ ಹೆಚ್ಚು ಆದಾಯ ಘೋಷಿಸಿಕೊಂಡ ಶಾಸಕರು

ಎಂ.ಟಿ.ಬಿ.ನಾಗರಾಜು-1,050 ಕೋಟಿರೂ , ಡಿ.ಕೆ.ಶಿವಕುಮಾರ್ 840 ಕೋಟಿರೂ , ಬೈರತಿ ಸುರೇಶ್-416 ಕೋಟಿ ರೂ, ಆರ್.ಶಂಕರ್-265 ಕೋಟಿ, ಎಂ.ಕೃಷ್ಣಪ್ಪ-235 ಕೋಟಿರೂ, ಆರ್.ವಿ.ದೇಶಪಾಂಡೆ-215 ಕೋಟಿರೂ, ಉದಯ್ ಗರುಡಾಚಾರ್-196 ಕೋಟಿ, ಎನ್.ಎ.ಹ್ಯಾರಿಸ್-190 ಕೋಟಿರೂ, ಶಾಮನೂರು ಶಿವಶಂಕರಪ್ಪ- 183 ಕೋಟಿ ರೂ ಹಾಗೂ ಎಚ್.ಡಿ.ಕುಮಾರಸ್ವಾಮಿ-167 ಕೋಟಿ ರೂ ಒಡೆಯರು.

ಅತಿ ಹೆಚ್ಚು ಸಾಲ ಹೊಂದಿದವರು

ಅತಿ ಹೆಚ್ಚು ಸಾಲ ಹೊಂದಿದವರು

ಡಿ.ಕೆ.ಶಿವಕುಮಾರ್ 228 ಕೋಟಿ ರೂ. ಎಚ್.ಡಿ.ಕುಮಾರಸ್ವಾಮಿ 104 ಕೋಟಿ ರೂ. ಹಾಗೂ ಎಂ.ಕೃಷ್ಣಪ್ಪ 66 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ.

ಡಿಕೆ ಶಿವಕುಮಾರ್ ಆಸ್ತಿ ವಿವರ ಬಹಿರಂಗ, 600 ಕೋಟಿ ಪ್ಲಸ್!

ಅತಿ ಕಡಿಮೆ ಆಸ್ತಿ ಹೊಂದಿದವರು

ಅತಿ ಕಡಿಮೆ ಆಸ್ತಿ ಹೊಂದಿದವರು

ಎಸ್.ಎ.ರಾಮದಾಸ್ 39 ಲಕ್ಷ ರೂ., ಎ.ಎಸ್.ರವೀಂದ್ರ 68 ಲಕ್ಷ ರೂ. ಹಾಗೂ ಎನ್.ಮಹೇಶ್ 75 ಲಕ್ಷ ರೂ.ಗಳ ಒಟ್ಟು ಆಸ್ತಿ ಹೊಂದಿದ್ದಾರೆ. ಯಾವ ಪಕ್ಷದಲ್ಲಿ ಎಷ್ಟು ಕೋಟ್ಯಾಧೀಶರು: ಬಿಜೆಪಿಯಲ್ಲಿ 101, ಕಾಂಗ್ರೆಸ್‌ನಲ್ಲಿ 77, ಜೆಡಿಎಸ್‌ನಲ್ಲಿ 35, ಕೆಪಿಜೆಪಿ ಮತ್ತು ಪಕ್ಷೇತರ ತಲಾ ಒಬ್ಬರು ಕೋಟ್ಯಾಧೀಶ ಶಾಸಕರಾಗಿದ್ದಾರೆ.

ಮಾಜಿ ಸಚಿವ ರಾಮದಾಸ್ ಆಸ್ತಿ ಲಕ್ಷ ರು ಕೂಡಾ ದಾಟಿಲ್ಲ!

ವಿದ್ಯಾರ್ಹತೆ

ವಿದ್ಯಾರ್ಹತೆ

ಒಬ್ಬರು ಅಕ್ಷರಸ್ಥ, ಐದನೇ ತರಗತಿವರೆಗೆ ಓದಿದ ಐವರು, 8ನೇ ತರಗತಿವರೆಗೆ ಓದಿದ 10 ಮಂದಿ, ಎಸ್‌ಎಸ್‌ಎಲ್‌ಸಿವರೆಗೆ ಓದಿದ 31, ಪಿಯುಸಿವರೆಗೆ ಓದಿದ 34 ಮಂದಿ, ಪದವಿವರೆಗೆ ಓದಿದ 60 ಮಂದಿ, ವೃತ್ತಿಪರ ಪದವಿ ಪಡೆದ 44 ಮಂದಿ, ಸ್ನಾತಕೋತ್ತರ ಪದವಿ ಪಡೆದ 30, ಡಾಕ್ಟರೇಟ್ ಪಡೆದ ಇಬ್ಬರು, ಇತರೆ ವಿದ್ಯಾರ್ಹತೆ ಹೊಂದಿದ ನಾಲ್ವರು ಸೇರಿದಂತೆ ಒಟ್ಟು 221 ಮಂದಿ ವಿದ್ಯಾರ್ಹತೆ ಬಹಿರಂಗಪಡಿಸಿದ್ದರೆ ಒಬ್ಬರು ಮಾತ್ರ ತಮ್ಮ ವಿದ್ಯಾರ್ಹತೆ ಹೇಳಿಕೊಂಡಿಲ್ಲ.

ವಯೋಮಾನ: 25ರಿಂದ 30 ವರ್ಷದೊಳಗೆ ಒಬ್ಬರು, 31ರಿಂದ 40 ವರ್ಷದೊಳಗಿನ 15 ಮಂದಿ, 41ರಿಂದ 50ರವರೆಗಿನ 54 ಮಂದಿ, 51ರಿಂದ 60ರವರೆಗಿನ 84 ಮಂದಿ , 61ರಿಂದ 70ರವರೆಗಿನ 56 ಮಂದಿ, 71ರಿಂದ 80 ವರ್ಷದವರೆಗಿನ 8 ಮಂದಿ ಹಾಗೂ 80 ಮೀರಿದ ಮೂವರು ಶಾಸಕರಾಗಿದ್ದಾರೆ.

 ಶಾಸಕರಲ್ಲಿ ಅತಿ ಹಿರಿಯರು ಯಾರಿದ್ದಾರೆ?

ಶಾಸಕರಲ್ಲಿ ಅತಿ ಹಿರಿಯರು ಯಾರಿದ್ದಾರೆ?

ಶಾಮನೂರು ಶಿವಶಂಕರಪ್ಪ (86), ಎಂ.ಸಿ.ಮನಗುಳಿ (82), ಸಿ.ಎಂ.ಉದಾಸಿ (81), ಎಂ.ವೈ.ಪಾಟೀಲ್ (77). ಡಿ.ಸಿ.ತಮ್ಮಣ್ಣ (75), ಬಿ.ಎಸ್.ಯಡಿಯೂರಪ್ಪ (75), ಎಸ್.ಎ.ರವೀಂದ್ರನಾಥ (72), ನಾಗನಗೌಡ (72), ಸಿ.ಎಂ.ನಿಂಬಣ್ಣವರ (71), ಕೆ.ಶ್ರೀನಿವಾಸಗೌಡ (71), ಆರ್.ವಿ.ದೇಶಪಾಂಡೆ (71).

ಅತಿ ಕಿರಿಯ ಶಾಸಕರು

ಅತಿ ಕಿರಿಯ ಶಾಸಕರು

ಅನಿಲ್‌ಕುಮಾರ್ (ಕಾಂಗ್ರೆಸ್) 29 ವರ್ಷ, ದತ್ತಾತ್ರೇಯ (ಬಿಜೆಪಿ) 35 ವರ್ಷ, ಹರೀಶ್ ಪೂಂಜ (ಬಿಜೆಪಿ) ಅಶ್ವಿನ್‌ಕುಮಾರ್ (ಜೆಡಿಎಸ್) ಇಬ್ಬರೂ 36 ವರ್ಷ, ಪ್ರೀತಂಗೌಡ (ಬಿಜೆಪಿ), ಯತೀಂದ್ರ ಎಸ್. (ಕಾಂಗ್ರೆಸ್) ಇಬ್ಬರೂ 37 ವರ್ಷ, ಬಸವರಾಜ ಮತ್ತಿಮುದು (ಬಿಜೆಪಿ), ರೂಪಕಲಾ (ಕಾಂಗ್ರೆಸ್), ಬಸವರಾಜ ದಡೇಸುಗೂರ (ಬಿಜೆಪಿ) ಮೂವರೂ 38 ವರ್ಷ ವಯಸ್ಸಿನವರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fifteenth Karnataka assembly is constituting with 77 MLAs though they are charged with criminal cases and out of this 54 MLAs are also charged with offense like attempt to murder and kidnap cases.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more