ರಾಜ್ಯದಲ್ಲಿ ಇಂದು 8,580 ಮಂದಿ ಕೋವಿಡ್ ರೋಗಿಗಳ ಬಿಡುಗಡೆ

ಬೆಂಗಳೂರು, ಅಕ್ಟೋಬರ್ 16: ರಾಜ್ಯದಲ್ಲಿ ಶುಕ್ರವಾರ 7542 ಪ್ರಕರಣಗಳು ದಾಖಲಾಗಿವೆ. 8580 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 73 ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 1,12,427 ಸಕ್ರಿಯ ಪ್ರಕರಣಗಳಿವೆ.

ಕರ್ನಾಟಕದಲ್ಲಿ ಇದುವರೆಗೂ 10,356 ಮಂದಿ ಮೃತಪಟ್ಟಿದ್ದಾರೆ. ಇದುವರೆಗೂ 6,28,588 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಖಚಿತ ಕೋವಿಡ್ ಪ್ರಕರಣಗಳ ಸಂಖ್ಯೆ 7,51,390ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ ಮೃತಪಟ್ಟವರ ಶೇಕಡಾವಾರು ಪ್ರಮಾಣ 0.96ಕ್ಕೆ ಇಳಿಕೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಮುಂದುವರಿದಿದೆ. 3441 ಮಂದಿಗೆ ಇಂದು ಬೆಂಗಳೂರಿನಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. 24 ಮಂದಿ ನಗರದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3,00,634ಕ್ಕೆ ತಲುಪಿದೆ. ನಂತರದ ಅತಿ ಹೆಚ್ಚು ಪ್ರಕರಣಗಳು ಮೈಸೂರಿನಲ್ಲಿ ವರದಿಯಾಗಿದ್ದು, 404 ಪ್ರಕರಣಗಳು ದಾಖಲಾಗಿವೆ.

7542 Covid-19 Cases In Karnataka Today, 8580 Dicharged From Hospitals

ಬಾಗಲಕೋಟೆ 76, ಬಳ್ಳಾರಿ 174, ಬೆಳಗಾವಿ 289, ಬೆಂಗಳೂರು ಗ್ರಾಮಾಂತರ 345, ಬೀದರ್ 14, ಚಾಮರಾಜನಗರ 62, ಚಿಕ್ಕಬಳ್ಳಾಪುರ 270, ಚಿಕ್ಕಮಗಳೂರು 101, ಚಿತ್ರದುರ್ಗ 95, ದಕ್ಷಿಣ ಕನ್ನಡ 220, ದಾವಣಗೆರೆ 280, ಧಾರವಾಡ 121, ಗದಗ 45, ಹಾಸನ 195, ಹಾವೇರಿ 32, ಕಲಬುರಗಿ 66, ಕೊಡಗು 105, ಕೋಲಾರ 69, ಕೊಪ್ಪಳ 41 ಮಂದಿಗೆ ಸೋಂಕು ತಗುಲಿದೆ.

ಮಂಡ್ಯ 246, ರಾಯಚೂರು 38, ರಾಮನಗರ 75, ಶಿವಮೊಗ್ಗ 136, ತುಮಕೂರು 173, ಉಡುಪಿ 211, ಉತ್ತರ ಕನ್ನಡ 111, ವಿಜಯಪುರ 73, ಯಾದಗಿರಿ 34 ಪ್ರಕರಣಗಳು ವರದಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+