ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಸಭಾ ಚುನಾವಣೆ : ರಾಜ್ಯದಲ್ಲಿ 72 ಲಕ್ಷ ಹೊಸ ಮತದಾರರು

|
Google Oneindia Kannada News

ಬೆಂಗಳೂರು, ಮಾರ್ಚ್ 1 : ರಾಜ್ಯದಲ್ಲಿ 72 ಮಂದಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ 2018 ರ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ.

ಒಟ್ಟು 15,56,141 ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. 9,17,368 ಹೆಸರುಗಳನ್ನು ತೆಗೆದು ಹಾಕಿದ್ದು, 2,73,213 ಹೆಸರನ್ನು ಬದಲಾಯಿಸಲಾಗಿದೆ. ಪರಿಷ್ಕರಣೆಗೆ ಒಟ್ಟು 29,95,538 ಅರ್ಜಿಗಳು ಬಂದಿದ್ದವು. 27,46,722 ಅರ್ಜಿಗಳನ್ನು ಪುರಸ್ಕರಿಸಲಾಯಿತು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು: ವಿಧಾನಸಭಾ ಚುನಾವಣೆ: 88 ಲಕ್ಷ ನೋಂದಾಯಿತ ಮತದಾರರುಬೆಂಗಳೂರು: ವಿಧಾನಸಭಾ ಚುನಾವಣೆ: 88 ಲಕ್ಷ ನೋಂದಾಯಿತ ಮತದಾರರು

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಮತದಾರರ ಸಂಖ್ಯೆ 2.21 ಲಕ್ಷ ಇದೆ. 2013 ರಲ್ಲಿ 1.83 ಲಕ್ಷ ಇತ್ತು. ಮತದಾರರ ಪಟ್ಟಿಗೆ ಮಹಿಳೆಯರ ದಾಖಲಾತಿ ಪ್ರಮಾಣ 2013 ಕ್ಕೆ ಹೋಲಿಸಿದರೆ ಶೇ 13 ರಷ್ಟು ಹೆಚ್ಚಳವಾಗಿದೆ. ಲಿಂಗಾನುಪಾತ 2013 ಚುನಾವಣೆಯಲ್ಲಿ 1000 ಕ್ಕೆ 958 ಇದ್ದದ್ದು 2018 ಕರಡು ಪಟ್ಟಿಯಲ್ಲಿ 972 ಕ್ಕೆ ಏರಿಕೆ ಆಗಿದೆ ಎಂದರು.

72 lakh news voters in the state

ಶೃಂಗೇರಿ ವಿಧಾನಸಭಾ ಕ್ಷೇತ್ರ ಅತಿ ಕಡಿಮೆ ಮತದಾರರನ್ನು (1,62,108) ಹೊಂದಿದೆ. ಇಲ್ಲಿ ಪುರುಷ ಮತದಾರರ ಸಂಖ್ಯೆ 80,378, ಮಹಿಳೆಯರ ಸಂಖ್ಯೆ 81,725. ಬೆಂಗಳೂರು ದಕ್ಷಿಣ ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿದೆ. ಇಲ್ಲಿ ಪುರುಷರು 3,11,427, ಮಹಿಳಾ ಮತದಾರರು 2,69,878 ಇದ್ದಾರೆ. ಒಟ್ಟು ಮತದಾರರು 5,81,408 ಎಂದರು.

2018ರ ಅಂತಿಮ ಮತದಾರರ ಪಟ್ಟಿ
ಇತರೆ ಜಿಲ್ಲೆಗಳು ಪುರುಷರು ಮಹಿಳೆಯರು ತೃತೀಯ ಲಿಂಗಿಗಳು ಒಟ್ಟು
ಇತರೆ ಜಿಲ್ಲೆಗಳು 2,05,75,029 2,02,79,582 3113 4,08,57,724
ಬೆಂಗಳೂರು 46,04,190 41,92,706 1,439 87,98,335

ಮತದಾರರ ಪಟ್ಟಿಗೆ ಕಾಂಗ್ರೆಸ್ ಶಾಸಕರಿಂದ ಅಕ್ರಮ ಹೆಸರು ಸೇರ್ಪಡೆ: ಬಿಜೆಪಿಮತದಾರರ ಪಟ್ಟಿಗೆ ಕಾಂಗ್ರೆಸ್ ಶಾಸಕರಿಂದ ಅಕ್ರಮ ಹೆಸರು ಸೇರ್ಪಡೆ: ಬಿಜೆಪಿ

ಮತದಾನ ಕುರಿತು ಆಕ್ಷೇಪಣೆ ಸಲ್ಲಿಸಿ: ಸುಳ್ಳಾದರೆ ಕ್ರಮ ಎದುರಿಸಿಮತದಾನ ಕುರಿತು ಆಕ್ಷೇಪಣೆ ಸಲ್ಲಿಸಿ: ಸುಳ್ಳಾದರೆ ಕ್ರಮ ಎದುರಿಸಿ

English summary
72 Lakhs new voters have enrolled as new voters across karnataka ahead of 15 assembly elections. due in late april or early may. Taking the 4.96 crore as per the tentative electoral rolls as against 4.36 crore voters in 2013 assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X