IPS officers Transfer: 7 ಐಪಿಎಸ್ ಅಧಿಕಾರಿಗಳ ದಿಢೀರ್ ವರ್ಗವಾಣೆ
IPS officers Transfer: ರಾಜ್ಯ ಸರ್ಕಾರ ಆಗಾಗ ಮೇಜರ್ ಸರ್ಜರಿಗಳನ್ನು ಮಾಡುತ್ತಲೇ ಇರುತ್ತದೆ. ಇನ್ನು ಇದೀಗ ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗಿದ್ದು, 7 ಮಂದಿ ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಂಪೂರ್ಣ ಪಟ್ಟಿ ಇಲ್ಲಿದೆ ಗಮನಿಸಿ.
ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ಆದೇಶಿಸಲಾಗಿದೆ.

ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು
* ಶಂತನು ಸಿನ್ಹಾ
* ಜಿ.ಸಂಗೀತಾ
* ಅಬ್ದುಲ್ ಅಹದ್
* ಲಕ್ಷ್ಮಣ್ ನಿಂಬರಗಿ
* ಚೆನ್ನಬಸವಣ್ಣ ಲಂಗೋಟಿ
* ಪೃಥ್ವಿಕ್ ಶಂಕರ್
* ಶಿವಾಂಶು ರಜಪೂತ್
ಹುದ್ದೆಗಾಗಿ ಕಾಯುತ್ತಿದ್ದ ಶಾಂತನು ಸಿನ್ಹಾ ಅವರನ್ನು ಸಿಐಡಿ ವಿಭಾಗದ ಖಾಲಿಯಿದ್ದ ಡಿಐಜಿಪಿ ಹುದ್ದೆಗೆ ನೇಮಕ ಮಾಡಲಾಗಿದೆ. ಯಾದಗಿರಿಯ ಎಸ್ಪಿ ಜಿ.ಸಂಗೀತಾ (ಐಪಿಎಸ್) ಅವರನ್ನು ಅಪರಾಧ ತನಿಖಾ ಇಲಾಖೆಯ ಎಸ್‌ಪಿಯಾಗಿ ಹಾಗೂ ಅಪರಾಧ ತನಿಖಾ ಇಲಾಖೆಯ ಎಸ್ಪಿ ಪೃಥ್ವಿಕ್ ಶಂಕರ್(ಐಪಿಎಸ್) ಅವರನ್ನು ಯಾದಗಿರಿಯ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಸಿಟಿ ಕ್ರೈಂ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಅವರನ್ನು, ಬಿಎಂಟಿಸಿ ಭದ್ರತಾ ಮತ್ತು ವಿಚಕ್ಷಣೆ ವಿಭಾಗದ ನಿರ್ದೇಶಕ ಐಎಎಸ್ ಅಧಿಕಾರಿ ಸದಾಶಿವ ಪ್ರಭು ಬಿ.ವರ್ಗಾವಣೆ ಹಿನ್ನೆಲೆ ಆ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ರಾಜ್ಯ ಅಪರಾಧ ದಾಖಲೆ ಬ್ಯೂರೋದ ಎಸ್ಪಿ ಲಕ್ಷ್ಮಣ್ ನಿಂಬರಗಿ(ಐಪಿಎಸ್) ಅವರನ್ನು ಖಾಲಿಯಿದ್ದ ವಿಜಯಪುರ ಎಸ್ಪಿ ಹುದ್ದೆಗೆ ವರ್ಗಾವಣೆಗೊಳಿಸಲಾಗಿದೆ.
ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ಉಪನಿರ್ದೇಶಕ ಚೆನ್ನಬಸವಣ್ಣ ಲಂಗೋಟಿ(ಐಪಿಎಸ್) ಅವರನ್ನು ಡಾ.ಎಂ.ಬಿ.ಬೋರಲಿಂಗಯ್ಯ (ಐಪಿಎಸ್) ಅವರಿಂದ ತೆರವಾಗಿರುವ ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಭಯೋತ್ಪಾದನೆ ನಿಗ್ರಹ ಕೇಂದ್ರ ಬೆಂಗಳೂರಿನ ಎಸ್ಪಿ ಶಿವಾಂಶು ರಜಪೂತ್ ಅವರನ್ನು ರಾಜ್ಯ ಅಪರಾಧ ದಾಖಲೆಗಳ ವಿಭಾಗದ ಎಸ್ಪಿಯಾಗಿದ್ದ ಲಕ್ಷ್ಮಣ ನಿಂಬರ್ಗಿ ವರ್ಗಾವಣೆ ಹಿನ್ನೆಲೆಯಲ್ಲಿ ಆ ಜಾಗಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.












Click it and Unblock the Notifications