ಬೆಂಗಳೂರಿನಲ್ಲಿ ಒಂದೇ ದಿನ 444 ಜನರಿಗೆ ಕೊರೊನಾವೈರಸ್ ಸೋಂಕು!

ಬೆಂಗಳೂರು, ಮಾರ್ಚ್.05: ಕರ್ನಾಟಕದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ 600ರ ಗಡಿ ದಾಟಿದೆ. ಬೆಂಗಳೂರಿನಲ್ಲೇ ಒಂದೇ ದಿನ 444 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ 677 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 953813ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.

ಒಂದು ದಿನದಲ್ಲಿ ಮಹಾಮಾರಿಗೆ ನಾಲ್ವರು ಬಲಿಯಾಗಿದ್ದು, ಕರ್ನಾಟಕದಲ್ಲಿ ಈವರೆಗೂ 12354 ಜನರು ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಒಂದೇ ದಿನ 427 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೂ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 935066ಕ್ಕೆ ಏರಿಕೆಯಾಗಿದೆ.

 677 New Coronavirus Cases Reported in Karnataka Today, State Tally Rise to 953813

ಕರ್ನಾಟಕದಲ್ಲಿ ಜಿಲ್ಲಾವಾರು ಕೊವಿಡ್-19 ಕೇಸ್:

ರಾಜ್ಯದಲ್ಲಿ ಒಟ್ಟು 677 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 2, ಬಳ್ಳಾರಿ 7, ಬೆಳಗಾವಿ 14, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು 444, ಬೀದರ್ 13, ಚಾಮರಾಜನಗರ 2, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 2, ಚಿತ್ರದುರ್ಗ 4, ದಕ್ಷಿಣ ಕನ್ನಡ 20, ದಾವಣಗೆರೆ 3, ಧಾರವಾಡ 10, ಗದಗ 2, ಹಾಸನ 8, ಹಾವೇರಿ 1, ಕಲಬುರಗಿ 37, ಕೊಡಗು 2, ಕೋಲಾರ 2, ಕೊಪ್ಪಳ 1, ಮಂಡ್ಯ 4, ಮೈಸೂರು 23, ರಾಯಚೂರು 3, ರಾಮನಗರ 0, ಶಿವಮೊಗ್ಗ 3, ತುಮಕೂರು 28, ಉಡುಪಿ 22, ಉತ್ತರ ಕನ್ನಡ 3, ವಿಜಯಪುರ 6, ಯಾದಗಿರಿ 0 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+