ಡಿ.28; ಕರ್ನಾಟಕದಲ್ಲಿ 653 ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ಡಿಸೆಂಬರ್ 28: ಕರ್ನಾಟಕದಲ್ಲಿ ಸೋಮವಾರ, ಡಿ.28ರ ವರದಿಯಂತೆ 653 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 916909ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿರುವುದು ಸಮಾಧಾನಕರ ಸಂಗತಿ ಎನಿಸಿದೆ. ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಿದ್ದು, ಇಂದು 1178 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 892273 ಆಗಿದೆ. ಸದ್ಯಕ್ಕೆ ರಾಜ್ಯದಲ್ಲಿ 12547 ಸಕ್ರಿಯ ಪ್ರಕರಣಗಳು ಇವೆ.

ಡಿ.28ರಂದು ಎಂಟು ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 12070 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 205 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

653 New Coronavirus Cases Reported In Karnataka On December 28

ಬಾಗಲಕೋಟೆ 0, ಬಳ್ಳಾರಿ 13, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 10, ಬೆಂಗಳೂರು ನಗರ 309, ಬೀದರ್ 1, ಚಾಮರಾಜನಗರ 8, ಚಿಕ್ಕಬಳ್ಳಾಪುರ 28, ಚಿಕ್ಕಮಗಳೂರು 12, ಚಿತ್ರದುರ್ಗ 10, ದಕ್ಷಿಣ ಕನ್ನಡ ಜಿಲ್ಲೆ 8, ದಾವಣಗೆರೆ 4, ಧಾರವಾಡ 12, ಗದಗ 1, ಹಾಸನ 9, ಹಾವೇರಿ 1, ಕಲಬುರಗಿ 14, ಕೊಡಗು 27, ಕೋಲಾರ 7, ಕೊಪ್ಪಳ 4, ಮಂಡ್ಯ 26, ಮೈಸೂರು 63, ರಾಯಚೂರು 5, ರಾಮನಗರ 0, ಶಿವಮೊಗ್ಗ 17, ತುಮಕೂರು 20, ಉಡುಪಿ 14, ಉತ್ತರ ಕನ್ನಡ 8, ವಿಜಯಪುರ 9, ಯಾದಗರಿಯಲ್ಲಿ 1 ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+