ಅರ್ಧಕ್ಕಿಂತ ಹೆಚ್ಚಿನ 8ನೇ ಕ್ಲಾಸ್‌ನ ವಿದ್ಯಾರ್ಥಿಗಳಿಗೆ, ಸಾಮಾನ್ಯ ಗಣಿತವೂ ಬರಲ್ಲ: ಸಮೀಕ್ಷೆ
ಬೆಂಗಳೂರು, ಜನವರಿ 16: ಕರ್ನಾಟಕದ ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆ ಎಂದು ಮತ್ತೊಮ್ಮೆ ಸಾಬೀತಾಗಿದೆ.
ಆತಂಕದ ವಿಚಾರವೆಂದರೆ 8ನೇ ತರಗತಿಯ ಶೇ.61ರಷ್ಟು ವಿದ್ಯಾರ್ಥಿಗಳಿಗೆ ಸಾಮಾನ್ಯ ಗಣಿತವೂ ಬರುವುದಿಲ್ಲ ಎನ್ನುವುದು ಆನ್ಯುವಲ್ ಸ್ಟೇಟಸ್ ಆಫ್ ಎಜುಕೇಷನ್ ರಿಪೋರ್ಟ್ ಮೂಲಕ ಬಹಿರಂಗಗೊಂಡಿದೆ.
ಐದನೇ ತರಗತಿಯ ಶೇ 20.5ರಷ್ಟು ವಿದ್ಯಾರ್ಥಿಗಳು ಗುಣಾಕಾರನ್ನು ಕಲಿತಿದ್ದಾರೆ. ಎಂಟನೇ ತರಗತಿಯ ಶೇ.26.6 ರಷ್ಟು ವಿದ್ಯಾರ್ಥಿಗಳು ಕಳೆಯುವ ಲೆಕ್ಕ ಕಲಿತಿದ್ದಾರೆ. ಹಾಗೂ 10ರಿಂದ 99ರವರೆಗಿನ ಸಂಖ್ಯೆಯನ್ನು ಗುರತಿಸುತ್ತಾರೆ ಎನ್ನುವ ವಿಚಾರ ಸಮೀಕ್ಷೆ ವೇಳೆ ಬಹಿರಂಗಗೊಂಡಿದೆ.

ಐದನೇ ತರಗತಿಯ ಶೇ.34.1 ರಷ್ಟು ವಿದ್ಯಾರ್ಥಿಗಳು ಕಳೆಯುವ ಲೆಕ್ಕ ಹಾಗೂ ಶೇ.38ರಷ್ಟು ವಿದ್ಯಾರ್ಥಿಗಳು 10-99ರ ಒಳಗಿನ ಸಂಖ್ಯೆಯನ್ನು ಗುರುತಿಸಬಲ್ಲವರಾಗಿದ್ದಾರೆ.
ಶಿಕ್ಷಕರೇ ವಿದ್ಯಾರ್ಥಿಗಳಲ್ಲಿ ಗಣಿತದ ಕುರಿತು ಭಯವನ್ನು ಹುಟ್ಟಿಸುತ್ತಿದ್ದಾರೆ, ಐದರಿಂದ 16 ವರ್ಷದೊಳಗಿನ 29,312 ವಿದ್ಯಾರ್ಥಿಗಳ ಸರ್ವೇ ನಡೆಸಲಾಗಿದೆ. ನಿತ್ಯದ ಜೀವನದಲ್ಲಿ ಗಣಿತವನ್ನು ಅಳವಡಿಸಿಕೊಂಡರೆ ಎಲ್ಲಾ ಲೆಕ್ಕಾಚಾರವೂ ಸುಲಭ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications