7th pay commission: 6, 7ನೇ ಆಯೋಗದ ಮನೆ ಬಾಡಿಗೆ ಭತ್ಯೆ ವ್ಯತ್ಯಾಸ

ಬೆಂಗಳೂರು, ಮಾರ್ಚ್ 13: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಕರ್ನಾಟಕ ಸರ್ಕಾರಕ್ಕೆ ವರದಿ ನೀಡಲು ದಿನಗಣನೆ ಆರಂಭವಾಗಿದೆ. ಈ ವರದಿಯಲ್ಲಿ ವೇತನ, ಭತ್ಯೆ, ಮನೆ ಬಾಡಿಗೆ ಭತ್ಯೆಯ ಕುರಿತು ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಆಯೋಗ ಸಲ್ಲಿಕೆ ಮಾಡಲಿದೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರ 2023ರ ನವೆಂಬರ್‌ನಲ್ಲಿ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 15/3/2024ರ ತನಕ ವಿಸ್ತರಣೆ ಮಾಡಿದೆ. ಈಗ ಆಯೋಗ ವರದಿ ನೀಡಲು 2 ದಿನ ಬಾಕಿ ಇದೆ. ಸರ್ಕಾರ ಸ್ವೀಕಾರ ಮಾಡಲಿದೆಯೇ? ಅಥವ ಆಯೋಗದ ಅವಧಿ ವಿಸ್ತರಣೆಯಾಗಲಿದೆಯೇ? ಎಂಬುದು ಪ್ರಶ್ನೆ.

6 Th And 7th Pay Commission House Rent Allowance Difference

ರಾಜ್ಯ ವೇತನ ಆಯೋಗದ ಪರಿಶೀಲನಾ ಅಂಶಗಳಲ್ಲಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆಯ ವಿವರಗಳು ಇರಲಿವೆ. ಈಗ ರಾಜ್ಯ 6ನೇ ವೇತನ ಆಯೋಗದ ವರದಿಯಲ್ಲಿನ ಮನೆ ಬಾಡಿಗೆ ಭತ್ಯೆ ಮತ್ತು 7ನೇ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಮನವಿಯಲ್ಲಿನ ಮನೆ ಬಾಡಿಗೆ ಭತ್ಯೆ ಹೆಚ್ಚಳದ ಕುರಿತು ಅಂಕಿ ಸಂಖ್ಯೆಗಳ ವ್ಯತ್ಯಾಸಗಳನ್ನು ಲೆಕ್ಕಹಾಕಲಾಗುತ್ತಿದೆ.

ಕರ್ನಾಟಕದ ಸರ್ಕಾರಿ ನೌಕರರ ಸಂಘ ಮತ್ತು ಸರ್ಕಾರಿ ಸಚಿವಾಲಯದ ನೌಕರರ ಸಂಘವು ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹೆಚ್ಚಳದ ಬೇಡಿಕೆಗಳ ಕುರಿತು ಈಗಾಗಲೇ ಕೆ. ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗದ ಮುಂದೆ ಮನವಿ ಸಲ್ಲಿಕೆ ಮಾಡಿವೆ. ಆದರೆ ಆಯೋಗ ಎಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಲಿದೆ? ಎಂಬುದು ಸದ್ಯದ ಪ್ರಶ್ನೆ.

6ನೇ ವೇತನ ಆಯೋಗದ ವರದಿ: 6ನೇ ವೇತನ ಆಯೋಗದ ಆದೇಶದಲ್ಲಿ ಸರ್ಕಾರ ಮನೆ ಬಾಡಿಗೆ ಭತ್ಯೆ ಬಗ್ಗೆ ಹೇಳಿರುವ ವಿವರ. ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯ ಉದ್ದೇಶಕ್ಕಾಗಿ ನಗರಗಳು ಮತ್ತು ಇತರೆ ಸ್ಥಳಗಳ ವರ್ಗೀಕರಣವು ಮುಂದಿನ ಆದೇಶದವರೆಗೆ ಮುಂದುವರೆದು ಅನ್ವಯಿಸತಕ್ಕದ್ದು. ಹಾಗಿದ್ದರೂ, 1ನೇ ಏಪ್ರಿಲ್ 2018ರಿಂದ ಅನ್ವಯಿಸುವಂತೆ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಲಭ್ಯವಿರುವ ಮನೆ ಬಾಡಿಗೆ ಭತ್ಯೆಯ ವಿವಿಧ ದರಗಳನ್ನು ಉಲ್ಲೇಖ ಮಾಡಲಾಗಿತ್ತು.

25 ಲಕ್ಷ ಮತ್ತು ಅದಕ್ಕೂ ಹೆಚ್ಚು 'ಎ' ವರ್ಗ. ಮೂಲ ವೇತನದ ಶೇ 24ರಷ್ಟು. 5 ಲಕ್ಷ ಮತ್ತು ಅದಕ್ಕೂ ಹೆಚ್ಚು ಆದರೆ 25 ಲಕ್ಷ ಮೀರದಂತೆ 'ಬಿ' ವರ್ಗ. ಮೂಲ ವೇತನದ ಶೇ 16ರಷ್ಟು. 5 ಲಕ್ಷಕ್ಕಿಂತ ಕಡಿಮೆ 'ಸಿ' ವರ್ಗ ಮೂಲ ವೇತನದ ಶೇ 8ರಷ್ಟು ನಿಗದಿ ಮಾಡಿತ್ತು. ಮನೆ ಬಾಡಿಗೆ ಭತ್ಯೆ ಮಂಜೂರಾತಿಗೆ ಸಂಬಂಧಿಸಿದಂತೆ ದಿನಾಂಕ 19/10/2012ರ ಸರ್ಕಾರಿ ಆದೇಶದಇತರೆ ಎಲ್ಲಾ ಷರತ್ತುಗಳು ಮುಂದುವರೆದು ಅನ್ವಯಿಸುತ್ತವೆ ಎಂದು ಸರ್ಕಾರ ಹೇಳಿತ್ತು.

ನಗರ ಪರಿಹಾರ ಭತ್ಯೆಯಲ್ಲಿ ನಗರಗಳು/ ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವರ್ಗದ ಸರ್ಕಾರಿ ನೌಕರರಿಗೆ ಲಭ್ಯವಿರುವ ನಗರ ಪರಿಹಾರ ಭತ್ಯೆಯನ್ನು ನಿಗದಿ ಮಾಡಲಾಗಿತ್ತು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸರ್ಕಾರಿ ನೌಕರನು ಸೇರಿದ ಗುಂಪು ಎ&ಬಿ 600 ರೂ. ಮತ್ತು ಸಿ&ಡಿ 500 ರೂ.ಗಳು. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಕಲಬುರಗಿ ಎ&ಬಿ ರೂ. 450 ಮತ್ತು ಸಿ&ಡಿ ರೂ. 400 ರೂ.ಗಳು.

7ನೇ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಮನವಿಯಲ್ಲಿ ಮನೆ ಬಾಡಿಗೆ ಭತ್ಯೆ 25 ಲಕ್ಷಕ್ಕೆ ಮೇಲ್ಪಟ್ಟು 'ಎ' ವರ್ಗ. ಮೂಲ ವೇತನದ ಶೇ 30ರಷ್ಟು. 5 ಲಕ್ಷ ಮತ್ತು ಅದಕ್ಕೂ ಹೆಚ್ಚು ಆದರೆ 25 ಲಕ್ಷ ಮೀರದಂತೆ 'ಬಿ' ವರ್ಗ. ಮೂಲ ವೇತನದ ಶೇ 20ರಷ್ಟು. 5 ಲಕ್ಷಕ್ಕಿಂತ ಕಡಿಮೆ 'ಸಿ' ವರ್ಗ ಮೂಲ ವೇತನದ ಶೇ 15ರಷ್ಟು ನಿಗದಿ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ನಗರ ಪರಿಹಾರ ಭತ್ಯೆ ಬೆಂಗಳೂರು ನಗರ ಜಿಲ್ಲೆ ಎ&ಬಿ 1200 ರೂ. ಮತ್ತು ಸಿ&ಡಿ 100 ರೂ.ಗಳು. ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ವಿಜಯಪುರ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ತುಮಕೂರು ಎ&ಬಿ ರೂ. 1000 ಮತ್ತು ಸಿ&ಡಿ ರೂ. 800 ರೂ.ಗಳು ಹೆಚ್ಚಿಸಬೇಕು ಎಂದು ಮನವಿಯನ್ನು ಸಲ್ಲಿಸಲಾಗಿದೆ.

ಇಂಧನ ಮತ್ತು ಪ್ರಯಾಣ ದರಗಳು ಕಾಲ ಕ್ರಮೇಣ ಹೆಚ್ಚಾಗುತ್ತಿವೆ. ನಗರ ಪ್ರದೇಶಗಳಲ್ಲಿ ವಾಸಿಸುವ ನೌಕರರು ದುಬಾರಿ ಸಾರಿಗೆ ವೆಚ್ಚ ಭರಿಸಬೇಕಾಗುತ್ತದೆ. ಪ್ರಸ್ತುತ ನೀಡುತ್ತಿರುವ ನಗರ ಪರಿಹಾರ ಭತ್ಯೆ ಅತ್ಯಲ್ಪವಾಗಿದೆ. ಆದ್ದರಿಂದ ಆಯೋಗ ನಗರ ಪರಿಹಾರ ಭತ್ಯೆ ಪರಿಷ್ಕರಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+